Breaking News

ಕರ್ನಾಟಕ ರಾಜ್ಯದ ವಿಕಾಸ ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ-ಮಧ್ಯಪ್ರದೇಶದ ಸಿಎಮ್ ಶಿವರಾಜಸಿಂಗ ಚೌಹಾಣ.

Spread the love

ಕರ್ನಾಟಕ ರಾಜ್ಯದ ವಿಕಾಸ ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ-ಮಧ್ಯಪ್ರದೇಶದ ಸಿಎಮ್ ಶಿವರಾಜಸಿಂಗ ಚೌಹಾಣ.

ಯುವ ಭಾರತ ಸುದ್ದಿ  ಗೋಕಾಕ: ಕರ್ನಾಟಕ ರಾಜ್ಯದ ವಿಕಾಸ ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯವೆಂದು ಜನತೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ ಚೌಹಾಣ ಹೇಳಿದರು.
ಅವರು, ಬುಧವಾರದಂದು ನಗರದ ಹೊರವಲಯದ ಬಸವೇಶ್ವರ ಸಭಾ ಭವನದಲ್ಲಿ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡ ಗೋಕಾಕ ಮತಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಸುಳ್ಳು ಭರವಸೆಗಳನ್ನು ನೀಡುತ್ತಿರುವ ಕಾಂಗ್ರೇಸ್ ಪಕ್ಷ ಗ್ಯಾರೆಂಟಿ ಕಾರ್ಡಗಳನ್ನು ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಏಕೆ ಜಾರಿಗೆ ತಂದಿಲ್ಲ. ಕಾಂಗ್ರೇಸ್ ಪಕ್ಷ ಭ್ರಷ್ಟಾಚಾರ ಹಾಗೂ ಪರಿವಾರದ ಪಕ್ಷವಾಗಿದ್ದು, ಜನತೆ ಸರ್ವಶ್ರೇಷ್ಠ ರಾಷ್ಟçವನ್ನಾಗಿ ಮಾಡಲು ಶ್ರಮಿಸುತ್ತಿರುವ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು. ಕಾಂಗ್ರೇಸ್ ಆಡಳಿತದಲ್ಲಿ ದೇಶ ಅರಾಜಕತೆ ಹಾಗೂ ಆತಂಕವಾದಿಗಳಿ0ದ ಜನ ಭಯ ಬೀತಿಯಿಂದ ಬದುಕುತ್ತಿದ್ದರು. ಇಂದು ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಆಡಳಿತದಿಂದ ಜನ ಶಾಂತಿ ಹಾಗೂ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಯುದ್ಧಕಾಲದಲ್ಲೂ ಹೊರದೇಶದಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ. ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಕೈಗಾರಿಕೆ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧ ಪಥದತ್ತ ಸಾಗುತ್ತ ಜಾಗತಿಕ ಮಣ್ಣನೆ ಪಡೆಯುತ್ತಿದೆ. ದೇಶದ ಉಜ್ವಲ ಭವಿಷ್ಯಕ್ಕಾಗಿ ಪಕ್ಷಕ್ಕೆ ಆಶೀರ್ವಧಿಸುವಂತೆ ಕೋರಿದರು.
ರಾಜ್ಯವನ್ನು ಅವನತಿಯತ್ತ ಕೊಂಡೊಯ್ಯುತ್ತಿದ್ದ ಜೆಡಿಎಸ್-ಕಾಂಗ್ರೇಸ್ ಮೈತ್ರಿ ಸರಕಾರವನ್ನು ಬೀಳಿಸಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೇ ತರಲು ಮಹತ್ತರ ಪಾತ್ರವಹಿಸಿದ್ದ ರಮೇಶ ಜಾರಕಿಹೊಳಿ ಅವರನ್ನು ನಾನು ಅಭಿನಂಧಿಸುತ್ತೇನೆ. ಅವರ ನಿರ್ಧಾರದಿಂದಲೇ ರಾಜ್ಯ ಡಬ್ಬಲ್ ಇಂಜೀನ್ ಸರಕಾರದೊಂದಿಗೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇಂತಹ ಮಹಾನ್ ಕಾರ್ಯ ಮಾಡಿದ ರಮೇಶ ಜಾರಕಿಹೊಳಿ ಅವರನ್ನು ಅತಿಹೆಚ್ಚು ಮತಗಳ ಅಂತರದಿAದ ಆರಿಸಿ ತರಬೇಕೆಂದು ಮತದಾರರಲ್ಲಿ ವಿನಂತಿಸಿದರು.


ಅರಭಾವಿ ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಅವರು ೧೯೯೯ರಿಂದ ಇಲ್ಲಿಯವರೆಗೆ ಶಾಲೆಗಳು, ವಸತಿ ಶಾಲೆಗಳು, ನೀರಾವರಿ, ಆರೋಗ್ಯ ಕೇಂದ್ರಗಳು, ರಸ್ತೆಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಚುನಾವಣಾ ದೃಷ್ಟಿಯಿಂದ ವಿರೋಧಿಗಳು ಸುಳ್ಳು ಅಪಪ್ರಚಾರ ಮಾಡದೇ ಅಭಿವೃದ್ಧಿಪರ ಚರ್ಚೆಗೆ ಒಂದೇ ವೇದಿಕೆಗೆ ಬರುವಂತೆ ಆಹ್ವಾನ ನೀಡಿದ ಅವರು ಚುನಾವಣಾ ಪ್ರಚಾರ ಮಾಡಿ ಮತ ನೀಡುವಂತೆ ಕೇಳಿ ಆದರೆ ಜನತೆಗೆ ಸುಳ್ಳು ಹೇಳದಿರಿ. ಜನತೆ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಚುನಾವಣಾ ದೃಷ್ಟಿಯಿಂದ ಸುಳ್ಳು ಆಪಾದನೆ ಮಾಡುತ್ತಿರುವ ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದೇ ರಮೇಶ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಅಂತರದಿAದ ಆಯ್ಕೆ ಮಾಡುವದರೊಂದಿಗೆ ವಿರೋಧಿಗಳಿಗೆ ತಕ್ಕ ಉತ್ತರ ಕೋಡುವಂತೆ ಕರೆ ನೀಡಿದರು.
ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಮಾನಾಡಿ, ಗೋಕಾಕ ಮತ್ತು ಅರಭಾವಿ ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಯಾಗಿದ್ದು ಕಾಂಗ್ರೇಸ್ ತಿಪ್ಪರಲಗಾ ಹಾಕಿದರು ಗೆಲವು ಅಸಾಧ್ಯ. ಡಿ ಕೆ ಶಿವಕುಮಾರ ಸೇರಿದಂತೆ ಇತರ ಮುಖಂಡರ ಯಾವುದೇ ತಂತ್ರಗಾರಿಕೆ ಈ ಕ್ಷೇತ್ರಗಳಲ್ಲಿ ನಡೆಯುವದಿಲ್ಲ. ಅವರ ಕನಸು ನನಸಾಗುವದಿಲ್ಲ. ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ವಿಜಯ ನಿಶ್ಚಿತವೆಂದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ ಚೌಹಾಣ ಅವರು ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ ಹಾಗೂ ಶಿವಾಜಿಯವರ ಹೆಸರಿನೊಂದಿಗೆ ಭಾಷಣವನ್ನು ಪ್ರಾರಂಭಿಸಿ ಗೋಕಾಕ ಕಲೆ, ಸಾಹಿತ್ಯ, ಧಾರ್ಮಿಕ ಹಾಗೂ ಕರದಂಟಿನ ಸಿಹಿಯೊಂದಿಗೆ ಪುಣ್ಯಭೂಮಿಯಾಗಿದೆ ಎಂದರು.

ವೇದಿಕೆ ಮೇಲೆ ಮಾಜಿ ಶಾಸಕ ಎಮ್ ಎಲ್ ಮುತ್ತೇನ್ನವರ, ಯುವನಾಯಕ ಅಮರನಾಥ ಜಾರಕಿಹೊಳಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಕ್ಷೇತ್ರ ಪ್ರಭಾರಿ ಗುರುಪಾದ ಕಳ್ಳಿ, ಮಾಜಿ ಜಿಪಂ ಸದಸ್ಯ ಎಮ್ ಎಲ್ ತೋಳಿನವರ, ಬಿಜೆಪಿ ಪದಾಧಿಕಾರಿಗಳಾದ ಪುಂಡಲೀಕ ವಣ್ಣೂರ, ಬಸವರಾಜ ಹಿರೇಮಠ, ಶಫಿ ಜಮಾದಾರ, ಶಕೀಲ ಧಾರವಾಡಕರ, ರಾಜೇಶ್ವರಿ ಒಡೆಯರ, ಬಾಳೇಶ ಗಿಡ್ಡನವರ, ಲಕ್ಕಪ್ಪ ತಹಶೀಲ್ದಾರ, ಕಿರಣ ಡಮಾಮಗರ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

four × 5 =