ಗೋಕಾಕ್ ಶುಗರ್ಸ್ ಲಿ. ಕೊಳವಿ: ಕಬ್ಬು ಬೆಳೆಯಲ್ಲಿ ಬರುವ ಗೊಣ್ಣೆ ಹುಳುವಿನ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷತೆ.
ಕೊಳವಿ: ಏಪ್ರಿಲ್ 26 ರಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೆಳಗಾವಿ, ಗೋಕಾಕ್ ಶುಗರ್ಸ್ ಲಿ. ಕೊಳವಿ ಹಾಗೂ ಸೋಲಿಡರಿಡ್ಯಾಡ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ರೈತರಿಗೆ ಕಬ್ಬಿನ ಬೆಳೆಯಲ್ಲಿ ಬರುವ ಗೊಣ್ಣೆ ಹುಳುವಿನ ನಿಯಂತ್ರಣದ ತರಬೇತಿ ಪ್ರಾತ್ಯಕ್ಷಿತೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೆಳಗಾವಿಯ ಸಹಾಯಕ ಪ್ರಾಧ್ಯಾಪಕ, ವಿಷಯ ತಜ್ಞರಾದಂತಹ ಡಾ.ಮಂಜುನಾಥ ಚೌರೆಡ್ಡಿ (ಕೀಟಶಾಸ್ತ್ರಜ್ಞರು) ಇವರು ಕಬ್ಬು ಬೆಳೆಗಾರರಿಗೆ ಹಾಗೂ ಕ್ಷೇತ್ರ ಸಿಬ್ಬಂದಿಗಳಿಗೆ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣ ಕ್ರಮಗಳನ್ನು ತಿಳಿಸಿಕೊಟ್ಟರು. ಹಾಗೂ ಯೋಜನಾ ಸಂಯೋಜಕರಾದ ಶ್ರೀ ರಾಘವೇಂದ್ರ ತೆಗ್ಗಿ ಇವರು ಕುಳೆ ಕಬ್ಬಿನ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಎಸ್ ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೆಳಗಾವಿಯಲ್ಲಿ ಲಭ್ಯವಿರುವ ಮೆಟರೈಸಿಯಂ ಜೈವಿಕ ಕೀಟನಾಶಕವನ್ನು ಪ್ರತಿ ಎಕರೆಗೆ 5 ಕಿ.ಗ್ರಾಂ ನಂತೆ 500 ಕೆಜಿ ಚೆನ್ನಾಗಿ ಕಳೆತ ತಿಪ್ಪೇ ಗೊಬ್ಬರದೊಂದಿಗೆ ಬೆರೆಸಿ ಕಬ್ಬಿನ ಸಾಲುಗಳಲ್ಲಿ ಹಾಕಿ ನೀರುನಿಸಲು ತಿಳಿಸಲಾಯಿತು. ಹಾಗೂ ಬೇಸಿಗೆಯ ಮಳೆಯಾದ ನಂತರ 10 ದಿನಗಳವರೆಗೆ ದೀಪಾಕರ್ಷಕ ಬಲೆಗಳನ್ನು ಹೊಲಗಳಲ್ಲಿ ಅಳವಡಿಸಬೇಕು ಇದರಿಂದ ಗೊಣ್ಣೆ ಹುಳುವಿನ ಬಾಧೆಯನ್ನು ತಗ್ಗಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಶ್ರೀ ರೇಣುಕಾ ಶುಗರ್ಸನ ಕಬ್ಬು ವಿಭಾಗದ ಮುಖ್ಯ ಅಧಿಕಾರಿಗಳಾದ ಏನ್. ಎಸ್ ಮುಗಳಖೋಡ ಅಧ್ಯಕ್ಷತೆ ವಹಿಸಿದ್ದು ರೈತರ ಉದ್ದೇಶಿಸಿ ಬಂದಂತಹ ಎಲ್ಲ ರೈತರು ಇನ್ನುಳಿದ ರೈತರಿಗೂ ಈ ಮಾಹಿತಿಯನ್ನು ತಿಳಿಸಿ ಕೊಡಬೇಕೆಂದು ಕೋರಿದರು. ಕಾರ್ಖಾನೆಯ ಕಬ್ಬು ವಿಭಾಗದ ಜನರಲ್ ಮ್ಯಾನೇಜರ್ ಮಹಾವೀರ ಮಲಗೌಡನವರ ಪ್ರಾಸ್ತಾವಿಕವಾಗಿ ಮಾತನಾಡಿ ರೈತರಿಗೆ ಸದರಿ ಪ್ರಾತ್ಯಕ್ಷಿತೇಯ ಮಹತ್ವವನ್ನು ತಿಳಿಸಿಕೊಟ್ಟು ಎಲ್ಲರಿಗೂ ವಂದಿಸಿದರು. ಕಾರ್ಯಗಾರದಲ್ಲಿ ಕಾರ್ಖಾನೆಯ ಮುಖ್ಯಸ್ಥರಾದ ಆನಂದ ದೊಡ್ಡಬಸನ್ನವರ, ನಿಂಗಪ್ಪ ಮಾದರ, ಸಂತೋಷ ಶೇಳಕೆ ಮತ್ತು 80ಕ್ಕೂ ಅಧಿಕ ಕಬ್ಬು ಬೆಳೆಗಾರರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಆನಂದ ಹಟ್ಟಿಗೌಡರ ಸ್ವಾಗತ ಮಾಡುವುದರೊಂದಿಗೆ ಕಾಯ್ರಕ್ರಮದ ನಿರೂಪಣೆಯನ್ನು ನೆರವೇರಿಸಿದರು.