ಪತ್ರಕರ್ತರಿಗೆ ಬೆದರಿಕೆ : ಡಿಕೆಶಿ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು
ಯುವ ಭಾರತ ಸುದ್ದಿ ಬೆಂಗಳೂರು :
ಪತ್ರಕರ್ತರಿಗೆ ಬೆದರಿಕೆ ಹಾಕಿ , ಗೂಂಡಾ ವರ್ತನೆ ತೋರಿದ ಆರೋಪದಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಬುಧವಾರ ದೂರು ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದರು . ಅದೇ ದಿನ ದೇಶದ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಯಲ್ಲಿದ್ದರು.
ಕೆಲ ಪತ್ರಕರ್ತರು ಶಿವಕುಮಾರ್ ಕರೆದಿದ್ದ ಸುದ್ದಿಗೋಷ್ಠಿಗೆ ಬಂದಿರಲಿಲ್ಲ.
ಸುದ್ದಿಗೋಷ್ಠಿಗೆ ಬಾರದವರ ಹೆಸರು ಬರೆದುಕೊಳ್ಳಿ . ಅವರ ಮ್ಯಾನೇಜ್ಮೆಂಟ್ ಜತೆ ಮಾತಾಡುತ್ತೇನೆ ಎಂದಿರುವ ಶಿವಕುಮಾರ್ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪತ್ರಕರ್ತರು ಚುನಾವಣಾ ಸಂದರ್ಭದಲ್ಲಿ ಒತ್ತಡದಲ್ಲಿ ಕೆಲಸ ಮಾಡುವುದನ್ನು ಮರೆತು ನಾನು ಪತ್ರಕರ್ತರನ್ನು ಕೊಂಡುಕೊಳ್ಳಬಲ್ಲೆ ಎಂದಿದ್ದಾರೆ . ಅವರ ಮ್ಯಾನೇಜ್ಮೆಂಟ್ ಗೆ ಹೇಳಿ ಕೆಲಸದಿಂದ ತೆಗೆಸುತ್ತೇನೆ ಎಂದು ಹೇಳಿದ್ದಾರೆ . ಈ ಮೂಲಕವಾಗಿ ಡಿ.ಕೆ. ಶಿವಕುಮಾರ್ ಗೂಂಡಾಗಿರಿ ವರ್ತನೆ ತೋರಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ . ಪತ್ರಕರ್ತರ ಪರ ನಾವು ಇದ್ದೇವೆ ಎಂದು ಶೋಭಾ ಹೇಳಿದರು.