ದೇಶದ 150 ಭಾಷೆ ಅವನತಿ
ಯುವ ಭಾರತ ಸುದ್ದಿ ಮೈಸೂರು :
10 ಸಾವಿರಕ್ಕಿಂತ ಕಡಿಮೆ ಮಂದಿ ಮಾತನಾಡುವ ಭಾಷೆಯನ್ನು ಅವನತಿಯ ಅಂಚಿನಲ್ಲಿರುವ ಭಾಷೆಯೆಂದು ಗುರುತಿಸುವ ಕಾರಣದಿಂದಾಗಿ ದೇಶ ಈಗಾಗಲೇ 220 ಭಾಷೆಗಳನ್ನು ಕಳೆದುಕೊಂಡಿದ್ದು , ಇನ್ನೂ 150 ಭಾಷೆಗಳಿಗೆ ಇದೇ ಗತಿ ಒದಗುವ ಸಾಧ್ಯತೆಯಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ . ಮಹೇಶ್ ಜೋಶಿ ಆತಂಕ ವ್ಯಕ್ತಪಡಿಸಿದ್ದಾರೆ .
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಶಾಸ್ತ್ರೀಯ ಕನ್ನಡ : ಸಾಂಸ್ಕೃತಿಕ ಪರಿಶೋಧನೆ ಎಂಬ ವಿಷಯದ ಕುರಿತು ಆಯೋಜಿಸಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಭಾಷೆಯು ಸಂವಹನ ಮಾಧ್ಯಮ ಮಾತ್ರವಲ್ಲದೆ ಸಮುದಾಯದ ಜೀವಂತಿಕೆಯ ಸಂಕೇತವೂ ಆಗಿದೆ . ಅದು ಅಳಿದರೆ ಆಯಾ ಸಮಾಜದ ಸಂಸ್ಕೃತಿ ನಶಿಸುತ್ತದೆ. ಆದ್ದರಿಂದ ಜೀವನದ ವೈವಿಧ್ಯವನ್ನು ಕಾಪಾಡುವಲ್ಲಿರುವ ಆಸಕ್ತಿ ಹಾಗೂ ಕಾಳಜಿಗಳು ಭಾಷೆಯ ವಿಚಾರದಲ್ಲೂ ಇರಬೇಕು ಎಂದು ಹೇಳಿದರು.