ಬೆಳಗಾವಿಯಲ್ಲಿ ಭೀಕರ ಕೊಲೆ

ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿಯಲ್ಲಿ ಭಾನುವಾರ ರಾತ್ರಿ ಯುವಕನನ್ನು ಮಹಿಳೆ ಒಬ್ಬಳು ಭೀಕರವಾಗಿ ಚುಚ್ಚಿ ಕೊಲೆಗೈದಿದ್ದಾಳೆ.
ಹಳೆ ಪಿ.ಬಿ. ರಸ್ತೆಯ ಕೀರ್ತಿ ಹೋಟೆಲ್ ಬಳಿ ಘಟನೆ ನಡೆದಿದೆ. ತಾರಿಹಾಳ ಗ್ರಾಮದ ನಾಗರಾಜ ಭೀಮಶಿ ಪಾಟೀಲ (28)ಮೃತ ಯುವಕ. ರಾತ್ರಿ 2:00 ರ ಸುಮಾರಿಗೆ ಕೈಯಲ್ಲಿ ಚಾಕು ಹಿಡಿದು ಮದ್ಯಪಾನ ಮಾಡಿ ಹೋಗುತ್ತಿದ್ದ ಮಹಿಳೆಯನ್ನು ಬೈಕ್ ಸವಾರ ಯುವಕ ಪ್ರಶ್ನಿಸಿದ್ದಾನೆ. ಆಗ ಮಹಿಳೆ ಚಾಕುವಿನಿಂದ ಚುಚ್ಚಿದ್ದಾಳೆ ಎನ್ನಲಾಗಿದೆ.
ಕೊಲೆಗೈದ ಮಹಿಳೆಯನ್ನು ಕಂಗ್ರಾಳಿ ಬಿ.ಕೆ.ಗ್ರಾಮದ ಜಯಶ್ರೀ ಪವನ ಪವಾರ ಎನ್ನಲಾಗಿದ್ದು ಮಾರ್ಕೆಟ್ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
YuvaBharataha Latest Kannada News