Breaking News

ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಮತ ನೀಡಿ-ವಿಪ ಸದಸ್ಯ ಲಖನ್ ಜಾರಕಿಹೊಳಿ.!

Spread the love

ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಮತ ನೀಡಿ-ವಿಪ ಸದಸ್ಯ ಲಖನ್ ಜಾರಕಿಹೊಳಿ.!


ಗೋಕಾಕ: ನಗರದ ಸೌಂದರ್ಯಕರಣದೊAದಿಗೆ ಮೂಲಭೂತ ಸೌಕರ್ಯಗಳನ್ನು ಜನತೆಗೆ ಕಲ್ಪಿಸಿ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡುವಂತೆ ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಮನವಿ ಮಾಡಿದರು.
ರವಿವಾರದಂದು ನಗರದ ವಾರ್ಡ ನಂ-೧೨, ೧೩, ೧೫, ೧೬ರಲ್ಲಿ ಮತಯಾಚನೆ ಮಾಡುತ್ತ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರದ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲು ರಮೇಶ ಜಾರಕಿಹೊಳಿ ಅವರಿಗೆ ಮತ ನೀಡಿ ಅತ್ಯಧಿಕ ಮತಗಳಿಂದ ಆರಿಸಿ ತರುವಂತೆ ವಿನಂತಿಸಿದರು.
ಬಿಜೆಪಿ ಕಾನೂನು ಪ್ರಕೋಷ್ಠ ಸಂಚಾಲಕ ಎಸ್ ವಿ ದೇಮಶೆಟ್ಟಿ ಮಾತನಾಡಿ, ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಮನೆ ಮನೆಗೆ ಆಹಾರದ ಕ್ಭಿಟ್‌ಗಳನ್ನು ನೀಡಿದ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಮತವೋ ಲಕ್ಷ ಗಟ್ಟಲೇ ಬಿಲ್ಲು ಮಾಡಿದ ಕಾಂಗ್ರೇಸ್ ಅಭ್ಯರ್ಥಿ ಡಾ.ಕಡಾಡಿಯವರಿಗೆ ತಮ್ಮ ಮತವೋ ಎಂಬುದನ್ನು ವಿಚಾರ ಮಾಡಿ ಮತಚಲಾಯಿಸುವಂತೆ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಕ್ಷೇತ್ರದ ಜನತೆಯ ಆಶೋತ್ತರಗಳಿಗೆ ಸದಾ ಸ್ಫಂಧಿಸುತ್ತ ಬಂದಿದ್ದು, ಜನಪರ ಜನಸ್ನೇಹಿಯಾಗಿ ಈ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಸದಾ ಸ್ಫಂಧನೆ ಮಾಡುತ್ತಿದ್ದು, ಐದು ವರ್ಷಗಳಿಗೊಮ್ಮೆ ಪ್ರತ್ಯಕ್ಷವಾಗುವ ವಿರೋಧಿಗಳ ಮಾತಿಗೆ ಕಿವಿಗೊಡದೇ ಬಿಜೆಪಿ ಪಕ್ಷಕ್ಕೆ ತಮ್ಮ ಮತವನ್ನು ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಯುವಧುರೀಣ ಅಮರನಾಥ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಸದಸ್ಯರಾದ ಭಾರತಿ ಶಿವಾನಂದ ಹತ್ತಿ, ವಿಜಯಲಕ್ಷಿö್ಮÃ ವಿಜಯ ಜತ್ತಿ, ಮುಖಂಡರಾದ ಅರುಣ ಕರಣಿ, ರಮೇಶ ಮುರಗುಂಡಿ, ಶಿವಾಜಿ ಗಾಯಕವಾಡ, ರಾಮಚಂದ್ರ ಗಾಣಿಗೇರ, ವಿಶ್ವನಾಥ ಬೆಲ್ಲದ, ವಿ ಜಿ ಮಿರ್ಜಿ, ಎಚ್ ಡಿ ಮುಲ್ಲಾ, ಮಹಾಲಿಂಗ ಮಂಗಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

20 + 20 =