SSLC ಫಲಿತಾಂಶ : ಕೊನೆಗೂ ದಿನ ನಿಗದಿ

ಯುವ ಭಾರತ ಸುದ್ದಿ ಬೆಂಗಳೂರು :
ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ ಎಂಬ ಬಗ್ಗೆ ಗೊಂದಲ ನಡೆದಿದ್ದವು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಚುನಾವಣೆಗೂ ಮುನ್ನವೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದೆ. ಫಲಿತಾಂಶ ಕಂಪ್ಯೂಟರಿಕರಣ ನಡೆಯುತ್ತಿದೆ. ಎಲ್ಲವೂ ಸುಗಮಗೊಂಡರೆ ಮೇ 10 ರ ಮತದಾನಕ್ಕೂ ಮುನ್ನವೇ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ. ಮೇ 9, ಮೇ 11 ಅಥವಾ ಮೇ 12 ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೌಲ್ಯಮಾಪನ ಶುಕ್ರವಾರ ಪೂರ್ಣಗೊಂಡಿದೆ. ಇದನ್ನು ಕಂಪ್ಯೂಟರ್ ನಲ್ಲಿ ದಾಖಲಿಸುವ ಕೆಲಸ ಮೂರು- ನಾಲ್ಕು ದಿನ ನಡೆಯುತ್ತದೆ. ಮತದಾನಕ್ಕೆ ಮುನ್ನವೇ ಫಲಿತಾಂಶ ಪ್ರಕಟವಾಗಿ ಮಾಡಬೇಕು ಎನ್ನುವುದು ಇಲಾಖೆಯ ಅಭಿಲಾಷೆ. ಈ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
YuvaBharataha Latest Kannada News