ಬೆಳಗಾವಿಯಲ್ಲಿ ಶಾ ಅಬ್ಬರ !

ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೃಹತ್ ರೋಡ್ ಶೋ ನಡೆಸಿದರು.
ಶನಿವಾರ ಸಂಜೆ ನಗರದ ಪ್ರಮುಖ ಬೀದಿಗಳಾದ ಧರ್ಮವೀರ ಸಂಭಾಜಿ ಚೌಕ, ಕಿರ್ಲೋಸ್ಕರ್ ರಸ್ತೆ, ಮಾರುತಿ ಗಲ್ಲಿಗಳಲ್ಲಿ ಬೆಳಗಾವಿ ಉತ್ತರ ಅಭ್ಯರ್ಥಿ ಬೆಳಗಾವಿ ಉತ್ತರ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಅವರ ಪರವಾಗಿ ರೋಡ್ ಶೋ ನಡೆಸಿದರು.
ಬಿಜೆಪಿಯ ಚಾಣಕ್ಯ ಹಾಗೂ ರಣತಂತ್ರಗಾರ ಎಂದೇ ಪ್ರಸಿದ್ಧರಾಗಿರುವ ಅಮಿತ್ ಶಾ ಅವರನ್ನು ಹತ್ತಿರದಿಂದ ನೋಡಲು ಜನ ಕಾತರಾಗಿರುವುದು ಕಂಡು ಬಂತು. ಸಹಸ್ರಾರು ಜನ ತಮ್ಮ ಮೆಚ್ಚಿನ ನಾಯಕನನ್ನು ಸಮೀಪದಿಂದ ನೋಡಿ ಪುಳಕಿತಗೊಂಡರು.
YuvaBharataha Latest Kannada News