ಗೋಕಾಕ ಮತ ಕ್ಷೇತ್ರದಲ್ಲಿ ಧೂಳೆಬ್ಬಿಸಿದ ಚಾಣಕ್ಯ!!

ಯುವ ಭಾರತ ಸುದ್ದಿ ಘಟಪ್ರಭಾ:
ಗೋಕಾಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪ್ರಚಾರಾರ್ಥ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಅವರು ಮನೆ ಮನೆಗೆ ತೆರಳಿ ಬಿಜೆಪಿ ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಅಬ್ಬರದ ಪ್ರಚಾರ ನಡೆಸಿದರು.
ಪಟ್ಟಣದಲ್ಲಿ ಶನಿವಾರ ರಸ್ತೆವುದ್ದಕೂ ಬಿಜೆಪಿ ಜಯ ಘೋಷದೊಂದಿಗೆ ದಿ.10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಮೇಶ ಜಾರಕಿಹೋಳಿಯವರಿಗೆ ಮತ ನೀಡಿ ಬಹುಮತದಿಂದ ಆರಿಸಿ ತರಬೇಕೆಂದು ಮನವಿ ಮಾಡಿಕೊಂಡ ಅವರು, ಮಲ್ಲಾಪೂರ ಪಿ.ಜಿ ಪ್ರಭು ದೇವರ ವೃತ್ತದಿಂದ ಪ್ರಭುದೇವರ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ, ವಿಠಲರುಕ್ಮಿಣಿ ದೇವಸ್ಥಾನ, ಮಾರುತಿ ದೇವಸ್ಥಾನ, ಅಂಬಾಭವಾನಿ ದೇವಸ್ಥಾನ, ಯಲ್ಲಮ್ಮಾ ದೇವರ ದೇವಸ್ಥಾನ, ಪಂಚಲಿಂಗೇಶ್ವರ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಕೆಂಪಯ್ಯಾಸ್ವಾಮಿ ಮಠ, ನಾಗಪ್ಪ ದೇವಸ್ಥಾನ, ಜಾಮಿಯಾ ಮಸೀದ ಹಾಗೂ ಚರ್ಚಗಳಿಗೆ ಬೇಟಿ ನೀಡಿ ಆರ್ಶಿವಾದ ಪಡೆದುಕೊಂಡರು.
ನಂತರ ಪಟ್ಟಣದ ಪ್ರಮುಖರ ಮನೆಗಳಿಗೆ ಬೆಟ್ಟಿ ಕೊಟ್ಟು ಮೃತ್ಯಂಜಯ ವೃತ್ತದಲ್ಲಿ ಬಿಜೆಪಿ ಪರ ಮತ ಯಾಚನೆ ಮಾಡಿದರು. ಪಾದಯಾತ್ರೆಯಲ್ಲಿ ಮಹಿಳೆಯವರು,ಯುವಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯರ್ಕತರು ಹಾಗೂ ಮುಖಂಡರು ಅಭಿಮಾನಿಗಳು ಭಾಗವಹಿಸಿದ್ದರು.
YuvaBharataha Latest Kannada News