ಶನಿವಾರ ಚುನಾವಣಾ ಫಲಿತಾಂಶ ಘೋಷಣೆ !

ಯುವ ಭಾರತ ಸುದ್ದಿ ಬೆಂಗಳೂರು :
ವಿಧಾನಸಭಾ ಚುನಾವಣೆಯ ಕುತೂಹಲಕ್ಕೆ ಮೇ 13(ಶನಿವಾರ)ರಂದು ತೆರೆ ಬೀಳಲಿದೆ.
ಅಂದು ರಾಜ್ಯದ ಎಲ್ಲಾ ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನ 1:00 ಸುಮಾರಿಗೆ ಚುನಾವಣೆ ಫಲಿತಾಂಶದ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.
ಈ ಸಲ ಬಹುತೇಕ ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ನುಡಿದಿವೆ. ಆದರೆ ಕೆಲ ಸಮೀಕ್ಷೆಗಳು ಆಡಳಿತರೂಢ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ನುಡಿದಿದೆ. ಒಟ್ಟಾರೆ ಇದೀಗ ಚುನಾವಣೆ ಮುಕ್ತಾಯಗೊಂಡಿದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್
ಎಷ್ಟು ಸ್ಥಾನಗಳನ್ನು ಪಡೆಯುತ್ತದೆ ಎಂಬ ಕುರಿತು ಇಡೀ ದೇಶಾದ್ಯಂತ ಚರ್ಚೆ ಆರಂಭವಾಗಿದೆ. ಒಟ್ಟಾರೆ ಈ ಸಲದ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
YuvaBharataha Latest Kannada News