Breaking News

ಮರಗಳ ತೆರವು: ಸಾರ್ವಜನಿಕರಿಂದ ಅಹವಾಲು ಆಕ್ಷೇಪಣೆಗೆ ಸೂಚನೆ

Spread the love

ಮರಗಳ ತೆರವು: ಸಾರ್ವಜನಿಕರಿಂದ ಅಹವಾಲು ಆಕ್ಷೇಪಣೆಗೆ ಸೂಚನೆ

ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಬರುವ 110 ಕೆ.ವಿ , ಬೆಳಗಾವಿ  ನೋಡಲ್ ವ್ಯಾಪ್ತಿಗೆ ಒಳಪಡುವ ಮಚ್ಛೆ ಉಪ ಕೇಂದ್ರದ ಆವರಣದಲ್ಲಿಯ ಒಟ್ಟು 223
ಮರಗಳನ್ನು ತೆರವುಗೊಳಿಸಲು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ), ಬೆಳಗಾವಿಯ ಕೆ.ವಿ.
ಉಪಕೇಂದ್ರ, ನೆಹರು ನಗರ, ಇವರು ಪ್ರಸ್ತಾವನೆಯನ್ನು ಸಲ್ಲಿಸಿರುವ ಮೇರೆಗೆ ಸದರಿ ಪ್ರದೇಶದಲ್ಲಿ ಇರುವ ಮರಗಳು 50 ಮರಗಳಿಂತ ಹೆಚ್ಚಿಗೆ ಇರುವುದರಿಂದ ಕರ್ನಾಟಕ ಮರಗಳ ಕಾಯ್ದೆ ನಿಯಮ
ರ ಪ್ರಕಾರ “ಪಬ್ಲಿಕ್ ಡಾಮನ್” ನಲ್ಲಿ ಪಾರ್ವಜನಿಕರಿಂದ ಆಕ್ಷೇಪಣೆ, ಅಹವಾಲು ಪಡೆಯಬೇಕಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ, ಅಹವಾಲು ಇದ್ದಲ್ಲಿ ಏಳು ದಿನಗಳೊಳಗಾಗಿ
ಬೆಳಗಾವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ ಆಕ್ಷೇಪಣೆ ಅಹವಾಲು
ಸಲ್ಲಿಸಬಹುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮಚ್ಛೆ ಸರ್ವೆ ನಂ.೫೪೩, ೫೫೩, ೫೫೨, ೫೯೨
ರಲ್ಲಿರುವ ಮರಗಳು, ವಿವಿಧ ಜಾತಿಯ ಮರಗಳು ೨೨೩ ೧೧ (ಸದರಿ ಮರಗಳನ್ನು ಸಂಪೂರ್ಣ
ತೆರವುಗೊಳಿಸುವುದು).
ಪ್ರಕಟಣೆಯನ್ನು ಹೊರಡಿಸಿದ ದಿನಾಂಕದಿಂದ ಏಳು ದಿನದೊಳಗೆ ಯಾವುದೇ ಆಕ್ಷೇಪಣೆ
ಸ್ವೀಕೃತವಾಗದಿದ್ದಲ್ಲಿ, ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ ನಿಯಮಾನುಸಾರ ಮುಂದಿನ ಕ್ರಮ
ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

thirteen − 5 =