ಮತ ಎಣಿಕೆ ; ನಾಗರಿಕರಿಗೆ ಮಹತ್ವದ ಸೂಚನೆ
ಯುವ ಭಾರತ ಸುದ್ದಿ ಬೆಳಗಾವಿ :
ದಿನಾಂಕ: 13/05/2023 ರಂದು ಬೆಳಗಾವಿ ನಗರದ ಆರ್‌ಪಿಡಿ ಕಾಲೇಜಿನಲ್ಲಿ ಬೆಳಗಾವಿ ಜಿಲ್ಲೆಯ ಒಟ್ಟು 18 ಮತ ಕ್ಷೇತ್ರಗಳ ಕರ್ನಾಟಕ ವಿಧಾನ ಸಭೆ-2023 ರ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಜರುಗುತ್ತದೆ. ಮತ ಎಣಿಕೆ ಕಾರ್ಯಕ್ಕೆ ಬರುವ ಅಧಿಕಾರಿ ಮತ್ತು ಸಿಬ್ಬಂದಿ, ಅಭ್ಯರ್ಥಿಗಳು, ಏಜೆಂಟರು, ವರದಿ ಮಾಡಲು ಬರುವ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ವಾಹನ ಪಾರ್ಕಿಂಗ್ ಕುರಿತು ಈ ಕೆಳಗಿನಂತೆ ವ್ಯವಸ್ಥೆ ಮಾಡಲಾಗಿದೆ.
1) ಮತ ಎಣಿಕೆ ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿ & ಮಾಧ್ಯಮ ಪ್ರತಿನಿಧಿಗಳು: ಭಾಗ್ಯ ನಗರ 2ನೇ ಕ್ರಾಸ್, ಲೋಕಮಾನ್ಯ ಮಲ್ಟಿಪರ್ಪೋಸ್ ಕೋ-ಆಪರೇಟಿವ್ ಸೊಸೈಟಿ, ಎಡ ತಿರುವು ಪಡೆದುಕೊಂಡು ಮಾವಿನ ತೋಟದ ಗೇಟ್ ಮೂಲಕ ఆರ್ ಪಿಡಿ ಕಾಲೇಜ್ ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.
2) ಅಭ್ಯರ್ಥಿಗಳು: ಅಭ್ಯರ್ಥಿಗಳು ಆರ್‌ಪಿಡಿ ಕಾಲೇಜ್‌ನ 1ನೇ ಗೇಟ ಮೂಲಕ ಪ್ರವೇಶಿಸಿ, ತಮ್ಮ ವಾಹನಗಳನ್ನು ಕೆಎಲ್.ಎಸ್ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಕಳುಹಿಸಿಕೊಡುವುದು.
3) ಏಜೆಂಟರು: ತಮ್ಮ ವಾಹನಗಳನ್ನು ಗೋಮಟೇಶ ಹೈಸ್ಕೂಲ, ಹಿಂದವಾಡಿ ಶಾಲಾ ಮೈದಾನದಲ್ಲಿ
ನಿಲುಗಡೆ ಗೊಳಿಸುವುದು, ಅಲ್ಲಿಂದ ನಡೆದುಕೊಂಡು ಬರುವುದು.
4) ಸಾರ್ವಜನಿಕರು: ಮತ ಎಣಿಕೆ ದಿನದಂದು ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಈ ಕೆಳಗೆ ನಮೂದಿಸಿದ ಸ್ಥಳಗಳಲ್ಲಿ ನಿಲುಗಡೆಗೊಳಿಸುವುದು.
1. ನಿಪ್ಪಾಣಿ, ಚಿಕ್ಕೋಡಿ-ಸದಲಗಾ, ರಾಯಬಾಗ, ಕುಡಚಿ ಭಾಗಗಳಿಂದ ಬರುವವರು ಗೋವಾವೇಸ್ ಸರ್ಕಲ್‌ದಿಂದ ರೇಲ್ವೆ ಸ್ಟೇಶನ್ ಕಡೆಗೆ ಸಾಗಿದ ಮರಾಠಾ ಮಂದಿರ ವರೆಗಿನ ರಸ್ತೆ ಬದಿಗೆ ವಾಹನಗಳನ್ನು ಒಂದು ಲೇನ್‌ದಲ್ಲಿ ನಿಲುಗಡೆಗೊಳಿಸುವುದು.
||. ಅಥಣಿ, ಕಾಗವಾಡ, ಗೋಕಾಕ, ಅರಭಾವಿ, ಹುಕ್ಕೇರಿ, ಯಮಕನಮರ್ಡಿ ಭಾಗಗಳಿಂದ ಬರುವವರು ಲೇಲೆ ಮೈದಾನ ಹಾಗೂ ವ್ಯಾಕಿನ್, ಡಿಪೋ ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.
III. ಬೈಲಹೊಂಗಲ, ಕಿತ್ತೂರ, ರಾಮದುರ್ಗ, ಸವದತ್ತಿ ಯಲ್ಲಮ್ಮಗುಡ್ಡ ಭಾಗಗಳಿಂದ ಬರುವವರು ಹಳೆ ಪಿ.ಬಿ. ರಸ್ತೆ, ನಾಥಪೈ ಸರ್ಕಲ್ ಮೂಲಕ ಬೆಳಗಾವಿ ಗಾಮೀಣ ಪೊಲೀಸ್ ಠಾಣೆ ಎಡಬದಿಯ ಆದರ್ಶ ನಗರ ಶಾಲೆ ಮೈದಾನ ಹಾಗೂ ಆದರ್ಶ ನಗರ ರಸ್ತೆ ಪಕದಲ್ಲಿ ವಾಹನಗಳನ್ನು ಒಂದು ಲೇನ್‌ದಲ್ಲಿ ನಿಲುಗಡೆ ಮಾಡುವುದು
IV. ಖಾನಾಪುರ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಭಾಗಗಳಿಂದ ಬರುವವರು 3ನೇ ರೇಲ್ವೆ ಗೇಟ್ ದಿಂದ ಪೀರನವಾಡಿ ವರೆಗಿನ ರಸ್ತೆ ಪಕ್ಕದಲ್ಲಿ ವಾಹನಗಳನ್ನು ಒಂದು ಲೇನ್‌ದಲ್ಲಿ ನಿಲುಗಡೆಗೊಳಿಸಬೇಕು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.