ಗಣಿಕೊಪ್ಪದಲ್ಲಿ ಎನ್ನೆಸ್ಸೆಸ್ ಶಿಬಿರ
ಯುವ ಭಾರತ ಸುದ್ದಿ ಬೆಳಗಾವಿ :
ನಗರದ ಕೆ.ಎಲ್.ಇ ಸಂಸ್ಥೆಯ ರಾಜಾ ಲಖಮಗೌಡ ಸ್ವಾಯತ್ತ ವಿಜ್ಞಾನ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ದತ್ತು ಗ್ರಾಮವಾದ ಗಣಿಕೊಪ್ಪ ಗ್ರಾಮದಲ್ಲಿ ದಿನಾಂಕ 02/06/2023 ರಂದು ಸಾಯಂಕಾಲ 4:00ಗಂಟೆಗೆ ಉದ್ಘಾಟಿಸಲಾಯಿತು.
ಈ ಶಿಬಿರದ ಮುಖ್ಯ ಅತಿಥಿ ಸ್ಥಾನವನ್ನು ಮರಿಕಟ್ಟಿ ಗ್ರಾಮ ಪಂಚಾಯತ ಮಾಜಿ ಸದಸ್ಯ ಮಹಂತೇಶ ಚಿಕ್ಕಮಠ ಅವರು ವಹಿಸಿದ್ದರು. ಗೌರವಾನ್ವಿತ ಅತಿಥಿಗಳಾಗಿ ಮಡಿವಾಳೇಶ್ವರ ಮಠದ ಚನ್ನವೀರ ಶ್ರೀಗಳು ದಿವ್ಯ ಸ್ಥಾನ ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಜೆ. ಎಸ್. ಕವಳೇಕರ ವಹಿಸಿ, ಎನ್.ಎಸ್.ಎಸ್ ವ್ಯಕ್ತಿಯ ಸರ್ವೊತೋಮುಖ ವ್ಯಕ್ತಿತ್ವ ವಿಕಸನಕ್ಕೆ ಬುನಾದಿ ಹಾಕಿಕೊಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಎಸ್ ಮಹತ್ವವನ್ನು ವಿವರಿಸಿದರು. ಶಿಬಿರದಲ್ಲಿ ನೆಡೆಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಗಣಿಕೊಪ್ಪ ಗ್ರಾಮದ ಸ.ಹಿ.ಪ್ರಾ.ಕ ಶಾಲೆಯ ಮುಖ್ಯೋಪಾಧ್ಯಾಯ ಎಂ.ಡಿ.ಚಡಿಚಾಳ, ಗ್ರಾಮದ ಹಿರಿಯರಾದ ಗುರುಸಿದ್ಧ ಚಚಡಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎ.ಎಸ್. ಪೂಜಾರ ಹಾಗೂ ಪ್ರಾಧ್ಯಾಪಕ ಡಾ. ವಿನಯಕುಮಾರ ಎಮ್, ರಾಸಾಯನಶಾಸ್ತ್ರದ ಪ್ರಾಧ್ಯಾಪಕ ಪ್ರೊ ಪುರುಷೋತ್ತಮ್ ಐ. ಹಾಗೂ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಅಜೀತ ಸುತಾರ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಚ್. ಎನ್. ಬನ್ನೂರ ಸ್ವಾಗತಿಸಿದರು. ಶಿಬಿರಾರ್ಥಿ ಸುನೈನಾ ಶೆಕ್ಕಿ ನಿರೂಪಿಸಿದರು. ಹರ್ಷಿತಾ ತಳಕೇರಿ ವಂದಿಸಿದರು.