Breaking News

ಕೊನೆಗೂ ಕೇರಳ ಪ್ರವೇಶಿಸಿದ ಮುಂಗಾರು

Spread the love

ಕೊನೆಗೂ ಕೇರಳ ಪ್ರವೇಶಿಸಿದ ಮುಂಗಾರು

ಯುವ ಭಾರತ ಸುದ್ದಿ ನವದೆಹಲಿ:
ನೈರುತ್ಯ ಮುಂಗಾರು ಗುರುವಾರ ಕೇರಳ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ವಾಡಿಕೆಗಿಂತ ಒಂದು ವಾರ ತಡವಾಗಿ ಪ್ರವೇಶಿಸಿದ ಮುಂಗಾರು ಸಾಮಾನ್ಯವಾಗಿರಲಿದೆ. ’ಬಿಪೋರ್‌ಜಾಯ್’ ಚಂಡಮಾರುತ ನೈರುತ್ಯ ಮುಂಗಾರಿನ ಮೇಲೆ ಪ್ರಭಾವ ಬೀರಿದ್ದು, ಕೇರಳದಲ್ಲಿ ಇದರ ಪ್ರಭಾವ ಸೌಮ್ಯವಾಗಿದೆ.

ಅರಬ್ಬಿ ಸಮುದ್ರದ ದಕ್ಷಿಣ ಭಾಗ, ಕೇಂದ್ರ, ಲಕ್ಷ್ಮದ್ವೀಪದ ಸಂಪೂರ್ಣ ಪ್ರದೇಶ, ಕೇರಳದ ಬಹುತೇಕ ಭಾಗ, ದಕ್ಷಿಣ ತಮಿಳುನಾಡಿನ ಭಾಗಗಳು, ಕಮೋರಿನ್, ಮನ್ನಾರ್‌ನ ಕೊಲ್ಲಿ ಪ್ರದೇಶಗಳಲ್ಲಿ, ನೈರುತ್ಯ, ಕೇಂದ್ರ ಹಾಗೂ ಈಶಾನ್ಯನ ಬಂಗಾಳ ಕೊಲ್ಲಿ ಭಾಗಗಳಲ್ಲಿ ಮುಂಗಾರು ಚುರುಕುಗೊಂಡಿದೆ ಎಂದು ಇಲಾಖೆ ಹೇಳಿದೆ.

ಸಾಮಾನ್ಯವಾಗಿ ಜೂನ್ 1 ರಂದು ಮುಂಗಾರು ಕೇರಳ ಪ್ರವೇಶಿಸುವುದು ವಾಡಿಕೆ. ಆದರೆ ಈ ಬಾರಿ ಏಳು ದಿನ ತಡವಾಗಿದೆ. ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದೆ ಎಂದು ಮೇ ಮಧ್ಯದಲ್ಲಿ ಐಎಂಡಿ ಹೇಳಿತ್ತು. ಜೂನ್ 7ರಂದು ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ಸ್ಕೈಮೆಟ್‌ ವರದಿ ಮಾಡಿತ್ತು.

ಕಳೆದ 150 ವರ್ಷಗಳಿಂದ ಕೇರಳಕ್ಕೆ ಮುಂಗಾರು ಪ್ರವೇಶದಲ್ಲಿನ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. 1918ರಲ್ಲಿ ಮೇ 11ಕ್ಕೆ ಮುಂಗಾರು ಪ್ರವೇಶಿಸಿತ್ತು. ಹಾಗೆಯೇ 1972ರಲ್ಲಿ ಜೂನ್ 18ರಂದು ವಿಳಂಬವಾಗಿ ಪ್ರವೇಶಿಸಿತ್ತು. 2022ರಲ್ಲಿ ಮೇ 29ರಂದು, 2021ರಲ್ಲಿ ಜೂನ್ 3ರಂದು, 2020ರಲ್ಲಿ ಜೂನ್ 1ರಂದು, 2019ರಲ್ಲಿ ಜೂನ್ 8ರಂದು ಹಾಗೂ 2018ರಲ್ಲಿ ಮೇ 29ರಂದು ಮುಂಗಾರು ಪ್ರವೇಶಿಸಿದೆ ಎಂದು ಐಎಂಡಿ ಹೇಳಿದೆ.

ಎಲ್‌ ಇನೊ ಪರಿಸ್ಥಿತಿಯ ನಡುವೆಯೂ ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದೆ. ಕೇರಳಕ್ಕೆ ಮುಂಗಾರು ಪ್ರವೇಶ ವಿಳಂಬವಗಿರುವುದರಿಂದ ದೇಶದ ಇತರ ಭಾಗಗಳ ಮೇಲೆ ಪ್ರಭಾವ ಬೀರುವುದು ಕಡಿಮೆ. ವಾಯವ್ಯ ಭಾಗದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ, ಪೂರ್ವ, ಈಶಾನ್ಯ, ಕೇಂದ್ರ ಭಾಗದಲ್ಲಿ ಶೇ 94ರಿಂದ 106ರಷ್ಟು ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

fourteen − one =