ಮೋದಿ ಮತ್ತೆ ವಿಶ್ವದ ನಂಬರ್ ಒನ್ ಜನಪ್ರಿಯ ನಾಯಕ
ದೆಹಲಿ :
ಜಗತ್ತಿನ ವಿವಿಧ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯಲ್ಲಿ ಆಗಾಗ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಇದೀಗ ಹೊರಬಂದ ಮಾಹಿತಿಯಂತೆ ಮೋದಿ ಅವರು ಮತ್ತೊಮ್ಮೆ ವಿಶ್ವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯ ಗ್ಲೋಬಲ್ ಲೀಡರ್ ಶಿಪ್ ಅಪ್ರುವಲ್ ಸಮೀಕ್ಷೆ ಪ್ರಕಾರ ಶೇ.71ರಷ್ಟು ರೇಟಿಂಗ್ ಪಡೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ವಿಶ್ವದ ಜನಪ್ರಿಯ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ.
2019 ರಿಂದಲೂ ಈ ಸಂಸ್ಥೆ ಜಾಗತಿಕ ನಾಯಕರ ಸಮೀಕ್ಷೆ ನಡೆಸುತ್ತಿದೆ. ಜಾಗತಿಕ ನಾಯಕರ ಜನಪ್ರಿಯತೆ ಕುರಿತು ಸಮೀಕ್ಷೆ ನಡೆಸುತ್ತಿದೆ. ಪ್ರತಿ ಸಲವೂ ಪ್ರಧಾನಿ ನರೇಂದ್ರ ಮೋದಿ ಅವರೇ ಅಗ್ರ ಜನಪ್ರಿಯ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ ಎನ್ನುವ ಎನ್ನುವುದು ಗಮನಾರ್ಹ ಸಂಗತಿ. ಮೊದಲ ಸಮೀಕ್ಷೆಯಲ್ಲಿ ಮೋದಿ ಅವರಿಗೆ ಶೇಕಡ 71 ರಷ್ಟು ರೇಟಿಂಗ್ ಸಿಕ್ಕಿತ್ತು. ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಾಕ್, ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಸೇರಿದಂತೆ ಜಗತ್ತಿನ ಪ್ರಮುಖ ನಾಯಕರನ್ನು ಮೋದಿಯವರು ಹಿಂದಿಕ್ಕಿದ್ದಾರೆ.
ಜಗತ್ತಿನ 22 ನಾಯಕರ ಜನಪ್ರಿಯತೆ ಕುರಿತು ಈ ಸಂಸ್ಥೆ ಸಮೀಕ್ಷೆ ನಡೆಸಿದೆ. ಜಗತ್ತಿನ 22 ಪ್ರಮುಖ ನಗರಗಳಲ್ಲಿರುವ ಜನರ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆ ತಯಾರಿಸಿದೆ. ಮೇ 30 ರಿಂದ ಜೂನ್ 6 ರ ಅವಧಿಯಲ್ಲಿ ಸಮೀಕ್ಷೆ ವರದಿ ಇದಾಗಿದೆ .
ಭಾರತ, ಬ್ರೆಜಿಲ್, ಅಮೆರಿಕ, ಬೆಲ್ಜಿಯಂ, ಐರ್ಲೆಂಡ್, ಫ್ರಾನ್ಸ್, ಜರ್ಮನಿ, ದಕ್ಷಿಣ ಕೊರಿಯಾ, ಸ್ಪೆನ್, ಬ್ರಿಟನ್, ಸ್ವಿಜರ್ಲ್ಯಾಂಡ್ ಸೇರಿದಂತೆ ಹಲವು ದೇಶಗಳ ಜನರನ್ನು ಸಂಪರ್ಕಿಸಿ ವರದಿ ತಯಾರಿಸಲಾಗಿದೆ.