ಮೊದಲ ದಿನ ಬಸ್ ನಲ್ಲಿ 5.71 ಲಕ್ಷ ಮಹಿಳೆಯರ ಪ್ರಯಾಣ: ಇದರ ವೆಚ್ಚ ಎಷ್ಟು ?

ಬೆಂಗಳೂರು:
ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕೃತವಾಗಿ ಚಾಲನೆ ನೀಡಿದ್ದು, ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12 ವರೆಗೆ ರಾಜ್ಯಾದ್ಯಂತ ಬರೋಬ್ಬರಿ 5.71 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.
ಮಹಿಳಾ ಪ್ರಯಾಣಿಕರ ಪ್ರಯಾಣಿಸಿದ ಒಟ್ಟು ಮೌಲ್ಯ 1,40,22,878 ರೂಪಾಯಿ ಆಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಬಸ್ ಗಳಲ್ಲಿ 1,93,831 ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದು ಇವರ ಪ್ರಯಾಣದ ಮೌಲ್ಯ 58,16,178 ರೂಪಾಯಿ. ಬಿಎಂಟಿಸಿ ಬಸ್ನಲ್ಲಿ ಒಟ್ಟು 2,01,215 ಮಹಿಳೆಯರು ಪ್ರಯಾಣ ಮಾಡಿದ್ದರೆ(ಪ್ರಯಾಣಿಕರ ಮೌಲ್ಯ 26,19604.00), ವಾಯವ್ಯ ಸಾರಿಗೆ ಬಸ್ನಲ್ಲಿ 1,22,354 ಮಹಿಳೆಯರು ಓಡಾಡಿದ್ದಾರೆ(ಪ್ರಯಾಣದ ಮೌಲ್ಯ ( 36,17,096.00). ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 53,623 ಮಹಿಳೆಯರು ಪ್ರಯಾಣ ಮಾಡಿದ್ದಾರೆ(ಪ್ರಯಾಣದ ಮೌಲ್ಯ-19.70.0000.00). ಹೀಗೆ ನಿನ್ನೆ ಸಾರಿಗೆ ಬಸ್ಗಳಲ್ಲಿ ಒಟ್ಟು 5,71,023 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇವರ ಟಿಕೆಟ್ ವೆಚ್ಚ 1,40,22,878 ರೂ. ಆಗಿದ್ದು, ಈ ಹಣವನ್ನು ಸರ್ಕಾರವೇ ಸಾರಿಗೆ ಸಂಸ್ಥೆಗಳಿಗೆ ನೀಡಲಿದೆ.
YuvaBharataha Latest Kannada News