ಬೈಂದೂರು :
ಬೈಂದೂರು ಬಿಜೆಪಿ ಶಾಸಕ ಗುರುರಾಜ ಗಂಟಿಹೊಳೆ ಬುಧವಾರ ರಾತ್ರಿ ತುರ್ತು ಕೆಲಸದ ಪ್ರಯುಕ್ತ ಬೆಂಗಳೂರಿಗೆ ತೆರಳಲು ರೈಲು ಹಿಡಿಯಲು ಹೋಗುತ್ತಿರುವ ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ. ಶಾಸಕರಾಗಿಯೂ ಬೆನ್ನ ಮೇಲೆ ಬ್ಯಾಗ್ ನಂತಹ ಚೀಲ, ಬಿಳಿ ಪಂಚೆ, ಶರ್ಟು ಧರಿಸಿರುವ ದೃಶ್ಯವನ್ನು ಯಾರೋ ಸೆರೆಹಿಡಿದಿದ್ದು ಅವರ ಸರಳತನ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಮಧ್ಯೆ ಗುರುವಾರ ಚಂಡಮಾರುತ ಕಾರಣದಿಂದ ಮರವಂತೆಯಲ್ಲಿ ಕಡಲ ಕೊರೆತ ಉಂಟಾಗಿದೆ. ಇಲ್ಲಿನ ಫಿಷರೀಸ್ ರಸ್ತೆ ಬಿರುಕು ಬಿಟ್ಟು ಅಪಾಯ ಉಂಟಾಗಿರುವ ವಿಷಯ ತಿಳಿಯುತ್ತಿದ್ದಂತೆ ಮೂರು ದಿನಗಳ ತಮ್ಮ ಬೆಂಗಳೂರಿನ ತಮ್ಮೆಲ್ಲ ಕೆಲಸ ರದ್ದುಗೊಳಿಸಿ ಸಂಜೆ ಬಸ್ಸಿನಲ್ಲಿ ಸ್ವಕ್ಷೇತ್ರಕ್ಕೆ ಹೊರಟಿದ್ದಾರೆ.
ಜನ ಚಂಡಮಾರುತಕ್ಕೆ ಹೆದರುವ ಅವಶ್ಯಕತೆ ಇಲ್ಲ. ಅಧಿಕಾರಿಗಳಿಗೆ ತುರ್ತು ಅಗತ್ಯದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
YuvaBharataha Latest Kannada News