Breaking News

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಅಹ್ವಾನ

Spread the love

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಅಹ್ವಾನ

ಬೆಳಗಾವಿ:
ರಾಮದುರ್ಗ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ೨೮ ಅಂಗನವಾಡಿ ಕಾರ್ಯಕರ್ತೆ ಹಾಗೂ ೫೫ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆಫ್-ಲೈನ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಾರ್ಯಕರ್ತೆಯರ ಹುದ್ದೆ ಅಂಗನವಾಡಿ ಖಾಲಿ ಇರುವ ಕೇಂದ್ರದ ಹೆಸರು ಮತ್ತು ಕೋಡ ನಂ:

ಬಟಕುರ್ಕಿ-೦೬, ನರಂಕಲಕೊಪ್ಪ (ಹೊಸಕೇಂದ್ರ), ಆರಿಬೆಂಚಿ ತಾಂಡಾ (ಹೊಸಕೇಂದ್ರ), ಹಳೇತೊರಗಲ್ಲ (ಹಳೇತೊರಗಲ್ಲ ಪ್ಲಾಟ) (ಹೊಸಕೇಂದ್ರ), ಕಿತ್ತೂರ-೨ (ಹೊಸಕೇಂದ್ರ), ಲಕನಾಯಕನಕೊಪ್ಪ (ಹೊಸಕೇಂದ್ರ), ಹುಲಿಗೊಪ್ಪ(ಡಿ ಹೊಸೂರ) (ಹೊಸಕೇಂದ್ರ), ಹಲಗತ್ತಿ-೦೫(ಹಲಗತ್ತಿ ಪ್ಲಾಟ) (ಹೊಸಕೇಂದ್ರ), ಇಡಗಲ್ಲ (ಹೊಸಕೇಂದ್ರ), ಹಿರೇಮೂಲಂಗಿ (ಹಿರೇಮೂಲಂಗಿ ಪ್ಲಾಟ) (ಹೊಸಕೇಂದ್ರ), ಹೊಸಕೇರಿ ಹೊಸಕೇರಿ ಪ್ಲಾಟ) (ಹೊಸಕೇಂದ್ರ), ದೊಡಮಂಗಡಿ ಪ್ಲಾಟ (ಹೊಸಕೇಂದ್ರ), ಹಾಲೊಳ್ಳಿ-೦೨ (ಕಲ್ಯಾಣನಗರ) (ಹೊಸಕೇಂದ್ರ), ನರಸಾಪುರ-೦೫ (ಲಕ್ಷ್ಮೀ ನಗರ) (ಹೊಸಕೇಂದ್ರ), ಚಿಲಮೂರ (ನಿಂಗಾಪುರ ತೋಟ) (ಹೊಸಕೇಂದ್ರ), ಉಜ್ಜಿನಕೊಪ್ಪ (ಹೊಸಕೇಂದ್ರ), ತೋರಣಗಟ್ಟಿ (ಜನತಾ ಪ್ಲಾಟ) (ಹೊಸಕೇಂದ್ರ), ಮುರಕಟ್ನಾಳ (ಹೊಸಕೇಂದ್ರ), ಬಾಗೊಜಿಕೊಪ್ಪ (ಮಿನಿ ಕೇಂದ್ರ), ರೇವಡಿಕೊಪ್ಪ (ಕೆ.ಇ.ಬಿಕಾಲನಿ ವಿನಾಯಕ ನಗರ (ಹೊಸಕೇಂದ್ರ), ಓಬಳಾಪುರ-೦೨, ಕಾಮನಕೊಪ್ಪ, ಜಾಲಿಕಟ್ಟಿ, ಗೊಣ್ಣಾಗರ-೦೨, ಎಂ. ಖಾನಾಪುರ ,ಕಟಕೋಳ-೧೨, ವೆಂಕಟಾಪುರ, ಬೆನ್ನೂರ ಅಂಗನವಾಡಿ ಕೇಂದ್ರಗಳಾಗಿವೆ.

ಸಹಾಯಕಿಯರ ಹುದ್ದೆ ಅಂಗನವಾಡಿ ಕೇಂದ್ರದ ಹೆಸರು ಮತ್ತು ಕೋಡ ನಂ

ಬಟಕುರ್ಕಿ-೦೬ (ಹೊಸಕೇಂದ್ರ), ನಾಗನೂರ-೦೨ (ಹೊಸಕೇಂದ್ರ), ರಂಕಲಕೊಪ್ಪ-೦೨ (ಹೊಸಕೇಂದ್ರ),
ಆರಿಬೆಂಚಿ ತಾಂಡಾ (ಹೊಸಕೇಂದ್ರ), ಹಳೇತೊರಗಲ್ಲ (ಹಳೇತೊರಗಲ್ಲ ಪ್ಲಾಟ) (ಹೊಸಕೇಂದ್ರ), ಸಾಲಾಪುರ-೦೨ (ಹೊಸಕೇಂದ್ರ), ರೇವಡಿಕೊಪ್ಪ(ಕೆ.ಇ.ಬಿ ಕಾಲನಿ, ವಿನಾಯಕ ನಗರ) (ಹೊಸಕೇಂದ್ರ), ಕಿತ್ತೂರ-೩ (ಹೊಸಕೇಂದ್ರ), ಮನಿಹಾಳ (ಆತ್ಮಾನಂದ ನಗರ) (ಹೊಸಕೇಂದ್ರ), ಲಕನಾಯಕನಕೊಪ್ಪ (ಹೊಸಕೇಂದ್ರ), ಹುಲಿಗೊಪ್ಪ(ಡಿ ಹೊಸೂರ) (ಹೊಸಕೇಂದ್ರ) ಹನಮಸಾಗರ (ಹನಮಸಾಗರ ಪ್ಲಾಟ) (ಹೊಸಕೇಂದ್ರ), ಕಿಲ್ಲಾತೊರಗಲ್ಲ (ಕೆ.ಜುನಿಪೇಠ ಪ್ಲಾಟ) (ಹೊಸಕೇಂದ್ರ), ಹಲಗತ್ತಿ-೦೫(ಹಲಗತ್ತಿ ಪ್ಲಾಟ) (ಹೊಸಕೇಂದ್ರ), ಇಡಗಲ್ಲ (ಹೊಸಕೇಂದ್ರ), ಹಿರೇಮೂಲಂಗಿ (ಹರೇಮೂಲಂಗಿ ಪ್ಲಾಟ) (ಹೊಸಕೇಂದ್ರ), ಹೊಸಕೇರಿ ಹೊಸಕೇರಿ ಪ್ಲಾಟ) (ಹೊಸಕೇಂದ್ರ), ದೊಡಮಂಗಡಿ (ಹೊಸಕೇಂದ್ರ) (ಹೊಸಕೇಂದ್ರ), ಹಾಲೊಳ್ಳಿ-೦೨ (ಕಲ್ಯಾಣನಗರ) (ಹೊಸಕೇಂದ್ರ), ನರಸಾಪುರ-೦೫ (ಲಕ್ಷ್ಮೀ ನಗರ) (ಹೊಸಕೇಂದ್ರ),ಚಿಲಮೂರ (ನಿಂಗಾಪುರ ತೋಟ) (ಹೊಸಕೇಂದ್ರ), ಗೊಡಚಿ (ವಿರೇಶ ನಗರ) (ಹೊಸಕೇಂದ್ರ), ಉಜ್ಜಿನಕೊಪ್ಪ-೦೩ (ಹೊಸಕೇಂದ್ರ), ತೋರಣಗಟ್ಟಿ( ಜನತಾ ಪ್ಲಾಟ) (ಹೊಸಕೇಂದ್ರ), ಮುರಕಟ್ನಾಳ (ಹೊಸಕೇಂದ್ರ), ಬಾಗೊಜಿಕೊಪ್ಪ (ಹೊಸಕೇಂದ್ರ), ಕುನ್ನಾ¼-೦೧À, ಹುಲಕುಂದ-೫, ಅಂಜನೇಯನಗರ, ನಾರಾಯಣಪೇಠ-೧ (ವಿಠಲಪೇಟೆ), ಸುರೇಬಾನ-೦೨, ಶಿವಪೇಠ-೦೧, ಕಲಹಾಳ-೦೨, ಬಟಕುರ್ಕಿ-೦೪, ಸೊಪ್ಪಡ್ಲ, ಆನೆಗುದ್ದಿ , ಸುನ್ನಾಳ-೦೩(ಸಿದ್ದಾರೂಢ ನಗರ), ಆರೆಬೆಂಚಿ ಎಲ್.ಟಿ, ಹೊಸಕೊಟಿ-೦೪, ಚುಂಚನೂರ-೦೧, ಕೆಂಪಾನಟ್ಟಿ (ಮಿನಿ ಕೇಂದ್ರ), ಮೆಟ್ಟಾನಟ್ಟಿ ತೋಟ, ಹನಮಸಾಗರ-೦೨, ಗೋಲಗುಂಪಿ (ಮಿನಿ ಕೇಂದ್ರ), ಮಲ್ಲಾಪುರ ತೋಟ (ಮಿನಿ ಕೇಂದ್ರ), ಘಟಕನೂರ-೦೨, ಬನ್ನೂರ-೦೧, ಮಹಾತೇಶ ನಗರ, ಉಜ್ಜಿನಕೊಪ್ಪ, ಕಟಕೋಳ-೧೧, ತೋರಣಗಟ್ಟಿ-೦೩, ಹಲಗತ್ತಿ-೦೪, ಮನಿಹಾಳ-೦೮, ಮುದೇನೂರ-೦೪, ಮುದೇನೂರ-೦೨, ಅಂಗನವಾಡಿ ಕೇಂದ್ರಗಳಾಗಿವೆ.

ಆಫ್-ಲೈನ ಅರ್ಜಿ ಸಲ್ಲಿಸಲು ಜೂ. ೧೯ ೨೦೨೩ ರಿಂದ ಜುಲೈ.೧೯ ೨೦೨೩ ರ ಒಳಗಾಗಿ ರಾಮದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ರಾಮದುರ್ಗ ಬದಾಮಿ ರೋಡ ಮಿನಿ ವಿಧಾನಸೌಧ ದಲ್ಲಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ ೦೮೩೩೫-೨೪೧೯೧೩ ಗೆ ಸಂಪರ್ಕಿಸಬಹುದು ಎಂದು ರಾಮದುರ್ಗ ತಾಲೂಕ ಅಂಕಾಕ/ಸ ಆಯ್ಕೆ ಸಮಿತಿಸದಸ್ಯ ಕಾರ್ಯದರ್ಶಿ,ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
******

 

ಅಂಗನವಾಡಿ ಸಹಾಯಕಿಯರ ಹುದ್ದೆ ಅರ್ಜಿ ಆಹ್ವಾನ: ತಾತ್ಕಾಲಿಕವಾಗಿ ರದ್ದು

ಬೆಳಗಾವಿ :
ಶಿಶು ಅಭಿವೃದ್ಧಿ ಯೋಜನೆ ಬೆಳಗಾವಿ (ಗ್ರಾಮೀಣ) ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರಲ್ಲಿ ಮುತ್ನಾಳ ಗ್ರಾಮದ ಅಂಗನವಾಡಿ ಕೇಂದ್ರದ ಸಂಖ್ಯೆ.೩೯೧ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಆದರೆ ತಾಂತ್ರಿಕ ಕಾರಣಗಳಿಂದ ಸದರಿ ಅರ್ಜಿ ಆಹ್ವಾನೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸುವರ್ಣ ಸೌಧಬಿ-೪,ಬಿ-೫ ನೆಲಮಹಡಿ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****

ಅಂಗನವಾಡಿ ಸಹಾಯಕಿಯರ ಹುದ್ದೆಗಳಗಾಗಿ ಆಫ್-ಲೈನ್ ಮೂಲಕ ಅಹ್ವಾನ

ಬೆಳಗಾವಿ :
ಶಿಶು ಅಭಿವೃದ್ಧಿ ಯೋಜನೆ ಬೆಳಗಾವಿ (ನಗರ) ವ್ಯಾಪ್ತಿಯಲ್ಲಿ ಖಾಲಿ ಇರುವ ೩೩ ಅಂಗನವಾಡಿ ಸಹಾಯಕಿಯರ ಹುದ್ದೆಗಳಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್-ಲೈನ್ ಮೂಲಕ ಅಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜೂ.೧೯ ೨೦೨೩ ರಿಂದ ಜುಲೈ.೧೯ ೨೦೨೩ ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.

ಇಚ್ಛೆಯುಳ್ಳ ಮಹಿಳಾ ಅಭ್ಯರ್ಥಿಗಳು ಎಲ್ಲ ದಾಖಲಾತಿಗಳನ್ನೊಳಗೊಂಡ ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಜಿಲ್ಲಾ ಬಾಲ ಭವನ ಕಟ್ಟಡ, ಶ್ರೀನಗರ ಬೆಳಗಾವಿಯ ಕಛೇರಿಗೆ ಖುದ್ದಾಗಿ ಬಂದು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ ೦೮೩೧-೨೦೦೧೭೨೩ ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****

ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸ್ ಪ್ರಾರಂಭ

ಬೆಳಗಾವಿ :
೨೦೨೩-೨೪ ನೇ ಸಾಲಿನಲ್ಲಿ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸ್ ಪಡೆಯಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿಗಳನ್ನು ದಾಖಲಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ.

ಪ್ರಸಕ್ತ ವಿದ್ಯಾರ್ಥಿ ಬಸ ಪಾಸಗಳನ್ನು ವಿತರಿಸಲಾಗುವುದು ಹಾಗೂ ಪಾಸು ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳು ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಅದಕ್ಕೆ ಸದರಿ ಕೇಂದ್ರದ ಸಿಬ್ಬಂದಿಗೆ ೩೦ ರೂ ಸೇವಾ ಶುಲ್ಕ ಇರುತ್ತದೆ, ಹಾಗೂ ವಿದ್ಯಾರ್ಥಿಗಳು ಸೇವಾಸಿಂದು ಫೋರ್ಟನಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದಾಗಿದ್ದು ಅದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.
ಅರ್ಜಿ ಅನುಮೋದನೆಯಾದ ನಂತರ ಪಾಸ್ ಪಡೆಯಲು ಭೇಟಿ ನೀಡಬೇಕಾದ ಕೌಂಟರ್ ಹೆಸರು ವಿಳಾಸ ಮಾಹಿತಿಯನ್ನು ಅರ್ಜಿಯಲ್ಲಿ ನೀಡಿದ ವಿದ್ಯಾರ್ಥಿಯ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮೂಲಕ ಕಳುಸಲಾಗುವುದು, ವಿದ್ಯಾರ್ಥಿಗಳು ಕೌಂಟರ್ ಗೆ ಹೋಗಿ ನಿಗದಿತ ಪಾಸಿನ ಶುಲ್ಕ ಪಾವತಿಸಿ ಬಸ್ ಪಾಸ್ ಪಡೆಯಬಹುದಾಗಿದೆ ಕ್ರೆಡಿಟ್ ಕಾರ್ಡ,ಡೆಬಿಟ್ ಕಾರ್ಡ್ ,ಯುಪಿಐ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ಸರಕಾರ ಶಕ್ತಿ ಯೋಜನೆಯಲ್ಲಿ ವಿದ್ಯಾರ್ಥಿನಿಯರಿಗೆ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗಿರುತ್ತದೆ, ನೆರೆ ರಾಜ್ಯದಲ್ಲಿ ವಾಸವಿತ್ತು ಕರ್ನಾಟಕ ರಾಜ್ಯದ ಶಾಲೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು ನೆರೆ ರಾಜ್ಯದಲ್ಲಿ ಶಾಲೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗಡಿ ಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು ಪಸ್ ಪಾಸ್ ಪಡೆಯುವ ಅವಕಾಶವಿರುತ್ತದೆ ಅವರು ಸಹ ಸೇವಾ ಸಿಂಧು ಪೆಟ್ರೋಲ್ ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದು.

ಚಿಕ್ಕೋಡಿ ವಿಭಾಗದ ವಿವಿಧ ಪಾಸ್ ಕೌಂಟರಗಳು

ಚಿಕ್ಕೋಡಿ ಬಸ್ ನಿಲ್ದಾಣ-೧೫ ಬಸ್ ನಿಲ್ದಾಣಗಳು,ಕರ್ನಾಟಕ ೧ ಒನ್ ಕೇಂದ್ರಗಳು ಸೇರಿದಂತೆ ಒಟ್ಟು ೧೬ ಕೌಂಟರಗಳನ್ನು ತೆರೆಯಲಾಗಿದ್ದು ಪಾಸ್‌ಗಳನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಗಿ ಸಂಸ್ಥೆಯ ವೆಬ್ ಸೈಟ್ ವಿವರಗಳನ್ನು ನಿಡಲಾಗಿದೆ ಎಂದು ವಾಕರಸಾ ಸಂಸ್ಥೆಯ ಚಿಕ್ಕೋಡಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*****
ಪರಿಶಿಷ್ಟ ಪಂಗಡದ ಕಾನೂನು ಪದವಿಧರರಿಗೆ ಅರ್ಜಿ ಆಹ್ವಾನ

ಬೆಳಗಾವಿ :
೨೦೨೩-೨೪ನೇ ಸಾಲಿಗೆ ಬೆಳಗಾವಿ ಜಿಲ್ಲೆಯ ಪರಿಶಿಷ್ಟ ಪಂಗಡದ ಕಾನೂನು ಪದವಿಧರರಿಗೆ ಆಡಳಿತ ನ್ಯಾಯಾಧಿಕರಣದಲ್ಲಿ ತರಬೇತಿ ನೀಡುಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಹಾಗೂ ವಕೀಲ ವೃತ್ತಿ ನಡೆಸಲು ಅರ್ಹತೆಯುಳ್ಳ ಕಾನೂನು ಪದವೀಧರರು ಮಾತ್ರ ಈ ತರಬೇತಿಗೆ ಅರ್ಹರು, ತರಬೇತಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವದು, ಮಹಿಳಾ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವದು.
ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ ದಂದು ಅಭ್ಯರ್ಥಿಯ ವಯಸ್ಸು ೪೦ ವರ್ಷಗಳನ್ನು ಮೀರಿರಬಾರದು ಈ ಕುರಿತು ಅಧಿಕೃತ ಪ್ರಮಾಣ ಪತ್ರವನ್ನು ಲಗತ್ತಿಸಬೇಕು, ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷಗಳ ವರೆಗೆ ಮಾಹೆಯಾನ ರೂ. ೧೦ ಸಾವಿರ ತರಬೇತಿ ಭತ್ಯೆ ನೀಡಲಾಗುವುದು. ತರಬೇತಿಯನ್ನು ಮಧ್ಯದಲ್ಲಿ ಬಿಟ್ಟು ಹೋಗಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಉದ್ಯೋಗ ದೊರೆತಲ್ಲಿ ಈ ನಿಬಂಧನೆ ಅನ್ವಯವಾಗುವದಿಲ್ಲ, ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಸರ್ಕಾರಿ ವಕೀಲರು ಅಥವಾ ೨೦ ವರ್ಷಗಳಿಗಿಂತ ಕಡಿಮೆ ಇಲ್ಲದ ವಕೀಲ ವೃತ್ತಿಯಲಿ ಅನುಭವವಿರುವ ಖಾಸಗಿ ಹಿರಿಯ ವಕೀಲರಲ್ಲಿ ತರಬೇತಿ ಪಡೆಯಲು ನಿಯೋಜಿಸಲಾಗುವುದು.

ಆಯ್ಕೆಯಾದ ಅಭ್ಯರ್ಥಿಯು ಸರ್ಕಾರದ ಎಲ್ಲ ನಿಭಂದನೆಗೆ ಬಧ್ಧನಾಗಿರುತ್ತೇನೆ ಎಂದು ೨೦ ರೂ.ಗಳ ಛಾಪಾಕಾಗದದ ಮೇಲೆ ಮುಚ್ಚಳಿಕೆ ಯನ್ನು ಬರೆದುಕೊಡತಕ್ಕದು,ಆಯ್ಕೆಯಾದ ಅಭ್ಯರ್ಥಿಯು ಸುಳ್ಳು ಮಾಹಿತಿ ಹಾಗೂ ಪ್ರಮಾಣ ಪತ್ರಗಳನ್ನು ಒದಗಿಸಿದಲ್ಲಿ ಶಿಕ್ಷೆಗೊಳಪಡುವುದಲ್ಲದೆ ಅವನು ಪಡೆದುಕೊಂಡ ತರಬೇತಿ ಭತ್ಯೆಯ ಪೂರ್ತಿ ಹಣವನ್ನು ವಾರ್ಷಿಕ ಶೇ. ೧೦ ರಂತೆ ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು. ಒಂದು ವೇಳೆ ಬಾಕಿ ವಸೂಲಿ ಉಳಿದಲ್ಲಿ ಭೂಕಂದಾಯ ಬಾಕಿ ನಿಯಮಾವಳಿ ಅನ್ವಯ ವಸೂಲ ಮಾಡಲಾಗುವುದು.

ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಜೂ.೧೫ ೨೦೨೩ ರಿಂದ ಜೂ. ೨೨ ೨೦೨೩ ರ ವರೆಗೆ ಣತಿ.ಞಚಿಡಿ.ಟಿiಛಿ.iಟಿ ರಲ್ಲಿ ಅರ್ಜಿ ಸಲ್ಲಿಸಬಹುದು, ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿಗಳಿಗೆ ಸಲ್ಲಿಸುವುದು, ನಿಗಧಿತ ಅರ್ಜಿಯೊಂದಿಗೆ ಅವಶ್ಯಕ ಮಾಹಿತಿಗಳಾದ ಪದವಿ ಪರೀಕ್ಷೆ ಹಾಗೂ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ಕಾನೂನು ಪರೀಕ್ಷೆಗಳ ದೃಢಿಕೃತ ಅಂಕಪಟ್ಟಿ ಮತ್ತು ತೇರ್ಗಡೆ ಹೊಂದಿದ ಪ್ರಮಾಣ ಪತ್ರ, ಜನ್ಮ ದಿನಾಂಕ ಪ್ರಮಾಣ ಪತ್ರ ಅಥವಾ ಟಿ. ಸಿ. ಮತ್ತು ಬಾರ್ ಅಸೋಸಿಯೇಶನ್ ಲ್ಲಿ ಸದಸ್ಯತ್ವ ಪಡೆದ ಬಗ್ಗೆ ಪ್ರಮಾಣ ಪತ್ರ ಲಗತ್ತಿಸಬೇಕು ಎಂದು ಬೆಳಗಾವಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
*****
ಬೆಳಗಾವಿ ತಾಲೂಕು: ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿ

ಬೆಳಗಾವಿ :
ಬೆಳಗಾವಿ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ.

ಮೀಸಲಾತಿ ವಿವರ:

ಕ್ರ.ಸಂಖ್ಯೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಮೀಸಲಾತಿ ಉಪಾಧ್ಯಕ್ಷ ಸ್ಥಾನದ ಮೀಸಲಾತಿ

೧ ಅರಳಿಕಟ್ಟಿ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
೨ ಯಳ್ಳೂರ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
೩ ಉಚಗಾಂವ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
೪ ಕಡೋಲಿ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
೫ ಬಾಗೇವಾಡಿ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-೨ ಮಹಿಳೆ
೬ ಮಾರಿಹಾಳ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
೭ ಸುಳಗಾ (ಯು) ಪ್ರವರ್ಗ-೨ ಪ್ರವರ್ಗ-೧
೮ ಅಂಕಲಗಿ ಸಾಮಾನ್ಯ ವರ್ಗ ಪ್ರವರ್ಗ-೧ ಮಹಿಳೆ
೯ ಹೊಸ ವಂಟಮುರಿ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
೧೦ ಮುತಗಾ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-೧
೧೧ ಹಂದಿಗನೂರ ಪ್ರವರ್ಗ-೧ ಮಹಿಳೆ ಸಾಮಾನ್ಯ ವರ್ಗ
೧೨ ಕೇದನೂರ ಪ್ರವರ್ಗ-೨ ಮಹಿಳೆ ಎಸ್.ಟಿ
೧೩ ಬಂಬರಗೆ ಪ್ರವರ್ಗ-೧ ಮಹಿಳೆ ಸಾಮಾನ್ಯ ವರ್ಗ
೧೪ ಕಿಣಿಯೆ ಸಾಮಾನ್ಯ ವರ್ಗ ಪ್ರವರ್ಗ-೧ ಮಹಿಳೆ
೧೫ ಮುಚ್ಚಂಡಿ ಸಾಮಾನ್ಯ ವರ್ಗ ಪ್ರವರ್ಗ-೧ ಮಹಿಳೆ
೧೬ ಅಷ್ಟೆ ಪ್ರವರ್ಗ-೧ ಮಹಿಳೆ ಪ್ರವರ್ಗ-೨ ಮಹಿಳೆ
೧೭ ಹಿಂಡಲಗಾ ಎಸ್.ಸಿ ಮಹಿಳೆ ಸಾಮಾನ್ಯ ವರ್ಗ ಮಹಿಳೆ
೧೮ ಕಂಗ್ರಾಳಿ ಬಿ.ಕೆ ಪ್ರವರ್ಗ-೧ ಮಹಿಳೆ ಎಸ್.ಸಿ ಮಹಿಳೆ
೧೯ ಕಾಕತಿ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ ಮಹಿಳೆ
೨೦ ಸಾಂಬ್ರಾ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
೨೧ ಧಾಮನೆ ಎಸ್ ಸಾಮಾನ್ಯ ವರ್ಗ ಪ್ರವರ್ಗ-೧
೨೨ ಹೊನಗಾ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-೧
೨೩ ಹುದಲಿ ಪ್ರವರ್ಗ-೧ ಸಾಮಾನ್ಯ ವರ್ಗ ಮಹಿಳೆ
೨೪ ಬಸ್ತವಾಡ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-೧
೨೫ ಹಲಗಾ ಎಸ್.ಟಿ ಮಹಿಳೆ ಸಾಮಾನ್ಯ ವರ್ಗ
೨೬ ಬಾಳೆಕುಂದ್ರಿ ಕೆ.ಎಚ್ ಪ್ರವರ್ಗ-೨ ಮಹಿಳೆ ಪ್ರವರ್ಗ-೧
೨೭ ಸುಳೆಭಾವಿ ಸಾಮಾನ್ಯ ವರ್ಗ ಮಹಿಳೆ ಎಸ್.ಟಿ
೨೮ ತಾರಿಹಾಳ ಸಾಮಾನ್ಯ ವರ್ಗ ಎಸ್.ಟಿ ಮಹಿಳೆ
೨೯ ಮಾಸ್ತಮರಡಿ ಎಸ್.ಟಿ ಸಾಮಾನ್ಯ ವರ್ಗ ಮಹಿಳೆ
೩೦ ತುರಮುರಿ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
೩೧ ಕುದ್ರೆಮನಿ ಸಾಮಾನ್ಯ ವರ್ಗ ಎಸ್.ಟಿ ಮಹಿಳೆ
೩೨ ಅಗಸಗೆ ಸಾಮಾನ್ಯ ವರ್ಗ ಪ್ರವರ್ಗ-೧ ಮಹಿಳೆ
೩೩ ಬೆಂಡಿಗೇರಿ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
೩೪ ತುಮುರಗುದ್ದಿ ಸಾಮಾನ್ಯ ವರ್ಗ ಸಾಮಾನ್ಯ ವರ್ಗ
೩೫ ಬೆಕ್ಕಿನಕೇರಿ ಎಸ್,ಟಿ ಸಾಮಾನ್ಯ ವರ್ಗ ಮಹಿಳೆ
೩೬ ದೇಸುರ ಸಾಮಾನ್ಯ ವರ್ಗ ಮಹಿಳೆ ಎಸ್.ಸಿ
೩೭ ಬಾಳೆಕುಂದ್ರಿ ಬಿ ಕೆ ಎಸ್.ಸಿ ಸಾಮಾನ್ಯ ವರ್ಗ ಮಹಿಳೆ
೩೮ ಕೆ ಕೆ ಕೊಪ್ಪ ಪ್ರವರ್ಗ-೧ ಮಹಿಳೆ ಸಾಮಾನ್ಯ ವರ್ಗ
೩೯ ಬೆನಕನಹಳ್ಳಿ ಸಾಮಾನ್ಯ ವರ್ಗ ಪ್ರವರ್ಗ-೧ ಮಹಿಳೆ
೪೦ ಮಂಡೋಳಿ ಎಸ್,ಟಿ ಸಾಮಾನ್ಯ ವರ್ಗ ಮಹಿಳೆ
೪೧ ಬಡಸ ಕೆ, ಎಚ್ ಪ್ರವರ್ಗ-೧ ಪ್ರವರ್ಗ-೨
೪೨ ಸಂತಿ ಬಸ್ತವಾಡ ಸಾಮಾನ್ಯ ವರ್ಗ ಮಹಿಳೆ ಎಸ್,ಟಿ ಮಹಿಳೆ
೪೩ ನಿಲಜಿ ಪ್ರವರ್ಗ-೧ ಸಾಮಾನ್ಯ ವರ್ಗ ಮಹಿಳೆ
೪೪ ನಂದಿಹಳ್ಳಿ ಎಸ್.ಸಿ ಸಾಮಾನ್ಯ ವರ್ಗ ಮಹಿಳೆ
೪೫ ಸುಳಗೆ ವಾಯ್ ಪ್ರವರ್ಗ-೧ ಎಸ್,ಟಿ ಮಹಿಳೆ
೪೬ ಬೆಳಗುಂದಿ ಪ್ರವರ್ಗ-೧ ಸಾಮಾನ್ಯ ವರ್ಗ ಮಹಿಳೆ
೪೭ ಅಂಬೆವಾಡಿ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-೧
೪೮ ಕಂಗ್ರಾಳಿ ಕೆ. ಎಚ್ ಎಸ್,ಟಿ ಮಹಿಳೆ ಸಾಮಾನ್ಯ ವರ್ಗ ಮಹಿಳೆ
೪೯ ಮುತ್ನಾಳ ಸಾಮಾನ್ಯ ವರ್ಗ ಮಹಿಳೆ ಎಸ್,ಟಿ
೫೦ ಬಿಜಗರ್ಣಿ ಎಸ್,ಟಿ ಮಹಿಳೆ ಸಾಮಾನ್ಯ ವರ್ಗ
೫೧ ಬೆಳವತ್ತಿ ಎಸ್,ಟಿ ಮಹಿಳೆ ಸಾಮಾನ್ಯ ವರ್ಗ
೫೨ ಧರನಟ್ಟಿ ಸಾಮಾನ್ಯ ವರ್ಗ ಸಾಮಾನ್ಯ ವರ್ಗ
೫೩ ಮೊದಗಾ ಪ್ರವರ್ಗ-೧ ಎಸ್.ಸಿ ಮಹಿಳೆ
೫೪ ರೆಹಬ ಸೆಂಟರ್ ಮಾರ್ಕಂಡೇಯ ನಗರ ಎಸ್.ಸಿ ಮಹಿಳೆ ಸಾಮಾನ್ಯ ವರ್ಗ
೫೫ ಕಲಕಾಂಬ ಪ್ರವರ್ಗ-೧ ಮಹಿಳೆ ಎಸ್.ಸಿ
೫೬ ಕರಡಿಗುದ್ದಿ ಎಸ್.ಸಿ ಮಹಿಳೆ ಸಾಮಾನ್ಯ ವರ್ಗ
೫೭ ಕುಕಡೊಳ್ಳಿ ಪ್ರವರ್ಗ-೧ ಎಸ್.ಸಿ ಮಹಿಳೆ

ಸದರಿ ಗ್ರಾಮ ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*****
ತಾಯಿ, ಮಕ್ಕಳು ನಾಪತ್ತೆ

ಬೆಳಗಾವಿ :
ರಾಯಬಾಗ ತಾಲೂಕಿನ ಇಟ್ನಾಳ್ ಗ್ರಾಮದ ನಿವಾಸಿಯಾದ ದಾನವ್ವ ಮಲ್ಲಪ್ಪ ಕಂಬಾರ(೨೮) ಇವರು ಜೂನ್.೧೧ ೨೦೨೩ ರಂದು ಬೆಳಿಗ್ಗೆ ೮ ಗಂಟೆಯಿAದ ಮಧ್ಯಾಹ್ನ ೨.೩೦ ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮಗಳಾದ ಅನುಶ್ರೀ(೧೦), ಹಾಗೂ ಮಗನಾದ ಬಸವರಾಜ್ (೦೬) ಇವರನ್ನು ಜೊತೆಯಲ್ಲಿ ಕರೆದುಕೊಂಡು ಹೋದವರು ಮರಳಿ ಮನೆಗೆ ಬರದೆ ಕಾಣೆಯಾಗಿದ್ದಾರೆ ಎಂದು ಇವರ ತಂದೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಣೆಯಾದವರ ಚಹರೆ ಪಟ್ಟಿ :

ದಾನವ್ವಾ: ೪ ಫೂಟ್ ೮ ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ದುಂಡು ಮುಖ, ಕಪ್ಪು ಕೂದಲು ಹಾಗೂ ಕೆಂಪು ಬಣ್ಣದ ಸೀರೆ ಧರಿಸಿದ್ದು ಕನ್ನಡ ಮಾತನಾಡತ್ತಾಳೆ.
ಅನುಶ್ರೀ : ೩ ಪೂಟ್ ೬ ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಗಂಡು ಮುಖ ಹೊಂದಿದ್ದಾಳೆ.
ಬಸವರಾಜ: ೩ ಫುಟ್ ೨ ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದಾನೆ.
ಸದರಿ ಕಾಣೆಯಾದವರ ಬಗ್ಗೆ ಮಾಹಿತಿ ದೊರೆತಲ್ಲಿ ಹಾರೂಗೇರಿ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****

ವಿವಿಧ ಜಯಂತಿಗಳ ಪೂರ್ವಭಾವಿ ಸಭೆ ಜೂ.೨೩ ರಂದು
ಬೆಳಗಾವಿ :
ಜೂನ್.೨೭ ೨೦೨೩ ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಜುಲೈ..೨ ೨೦೨೩ ರಂದು ಡಾ. ಫ.ಗು ಹಳಕಟ್ಟಿಯವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಹಾಗೂ ಜುಲೈ.೩ ರಂದು ಹಡಪದ ಅಪ್ಪಣ್ಣ ಹಾಗೂ ವಿವಿಧ ಜಯಂತಿ ಆಚರಣೆಯ ಪೂರ್ವ ಸಿದ್ಧತಾ ಸಭೆ ನಡೆಯಲಿದೆ.

ಬೆಳಗಾವಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ (ಜೂ.೨೩) ರಂದು ಸಂಜೆ ೪.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎರಡನೇ ಮಹಡಿಯ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ.
ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

2 × 2 =