ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಕೊಲೆ; ಆರೋಪಿ ಪತ್ನಿ ಹಾಗೂ ಸಹಚರರ ಬಂಧನ
ಯುವ ಭಾರತ ಸುದ್ದಿ ಬೆಳಗಾವಿ :
ಏಪ್ರಿಲ್ 5 ರಂದು ಫಿರ್ಯಾದಿ ರಾಜೇಶ ಕಾಂಬಳೆ ರವರು ತಮ್ಮ ಸಹೋದರ ರಮೇಶ ಕಾಂಬಳೆ ದಿನಾಂಕ: 23/೦3/2023 ರಂದು ರಾತ್ರಿ ಮನೆ ಬಿಟ್ಟು ಹೋಗಿದ್ದು ಇದುವರೆಗೆ ಮರಳಿ ಬಂದಿರುವುದಿಲ್ಲ ಅಂತಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಮೇಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಹಾಗೂ ಎಸಿಪಿ ಮಾರ್ಕೆಟ್ ರವರ ನೇತೃತ್ವದಲ್ಲಿ ಪಿಐ ಸುನಿಲ ಪಾಟೀಲ & ಸಿಬ್ಬಂದಿಯವರು ಪ್ರಕರಣದಲ್ಲಿ ಮಹತ್ವದ ಮಾಹಿತಿ ಕಲೆ ಹಾಕಿ ಮೃತನ ಹೆಂಡತಿ ರಮೇಶ ಕಾಂಬಳೆ ಇವನ ಗೆಳೆಯ ಬಾಳು ಈತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಸದರಿ ವಿಷಯ ಮೃತನಿಗೆ ಗೊತ್ತಾಗಿರುತ್ತದೆ. ಆಗ ಆತನನ್ನು ಕೊಲೆ ಮಾಡಲು ಸಂಚು ರೂಪಿಸಿ ನಿದ್ದೆ ಮಾತ್ರೆಗಳನ್ನು ಕಲ್ಲಂಗಡಿ ಹಣ್ಣಿನೊಂದಿಗೆ ಹಾಕಿ ಮಲಗಿದ ನಂತರ ಆತನ ಹೆಂಡತಿ ಪ್ರಿಯಕರ ಮತ್ತು ಆತನ ಸಹಚರರೊಂದಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಆತನ ಶವವನ್ನು ಚೋರ್ಲಾ ಘಾಟ್ ಪ್ರದೇಶದಲ್ಲಿ ಒಗೆದ ಈ ಕೆಳಗಿನ ಆರೋಪಿತರ ವಿಚಾರಣೆ ಕಾಲಕ್ಕೆ ತಿಳಿದು ಬಂದಿರುತ್ತದೆ.
ಆರೋಪಿತರಾದ ಸಂಧ್ಯಾ ರಮೇಶ ಕಾಂಬಳೆ ಸಾ: ಅಂಬೇಡ್ಕರ ನಗರ ಬೆಳಗಾವಿ, (ಹೆಂಡತಿ), ಬಾಳು ಅಶೋಕ ಬಿರಂಜೆ ಸಾ: ಅಂಬೇಡ್ಕರ ನಗರ ಬೆಳಗಾವಿ (ಪ್ರಿಯಕರ), ಜಯ @ ಸೋನು ಮೋಹನ ಸಸಾನೆ ಸಾ: ಅಂಬೇಡ್ಕರ ನಗರ ಬೆಳಗಾವಿ, ನಿತೇಶ ಮಹಾದೇವ ಅವಳೆ ಸಾ: ಅಂಬೇಡ್ಕರ ನಗರ ಬೆಳಗಾವಿ ಮೇಲಿನ 4 ಜನರನ್ನು ದಸ್ತಗೀರ ಮಾಡಿ ನ್ಯಾಯಾಲಯದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ತನಿಖೆ ಮುಂದುವರಿಸಲಾಗಿದೆ.
ಈ ಪ್ರಕರಣದಲ್ಲಿ ಕೊಲೆ ರಹಸ್ಯ ಬೇಧಿಸಿ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಶ್ರಮಿಸಿದ ಪೊಲೀಸ್ ಇನ್ಸ್ಪೆಕ್ಟರ್ ಸುನಿಲ ಪಾಟೀಲ ಮತ್ತು ಅವರ ತಂಡವನ್ನು ಡಿಸಿಪಿ (ಕಾ&ಸು) ಹಾಗೂ ಡಿಸಿಪಿ (ಅ&ಸಂ) ಶ್ಲಾಘಿಸಿರುತ್ತಾರೆ.