ಆಂಧ್ರಪ್ರದೇಶದಲ್ಲಿ 1000 ವರ್ಷ ಹಳೆಯ ಕನ್ನಡ ಶಿಲ್ಪ ಪತ್ತೆ
ಹೈದರಾಬಾದ್ :
ಹೈದರಾಬಾದ್ ಹೊರವಲಯದ ಹಳ್ಳಿಯೊಂದರಲ್ಲಿ ಒಂಬತ್ತು- ಹತ್ತನೇ ಶತಮಾನದ ಅಸ್ತಿತ್ವ ತೋರಿಸಿರುವ ಜೈನ ತೀರ್ಥಂಕರ ಶಿಲ್ಪಗಳು ಮತ್ತು ಕನ್ನಡ ಶಾಸನ ಹೊಂದಿರುವ ಎರಡು ಚೌಕಾಕಾರದ ಕಂಬಗಳು ಇತ್ತೀಚಿಗೆ ಪತ್ತೆಯಾಗಿದೆ.
ಪಿ. ಶ್ರೀನಾಥ ರೆಡ್ಡಿ ಅವರು ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್ ಮಂಡಲದ ಎನಿಕೆ ಪಲ್ಲಿ ಗ್ರಾಮದಲ್ಲಿ ಎರಡು ಕಂಬಗಳ ಉಪಸ್ಥಿತಿ ಬಗ್ಗೆ ಮಾಹಿತಿ ನೀಡಿದ ನಂತರ ಪುರಾತತ್ವ ಶಾಸ್ತ್ರಜ್ಞ ಇ. ಶಿವನಾಗಿ ರೆಡ್ಡಿ ಸ್ಥಳ ಪರಿಶೀಲಿಸಿದ್ದಾರೆ.
ಕಂಬಗಳಲ್ಲಿ ನಾಲ್ಕು ಜೈನ ತೀರ್ಥಂಕರರನ್ನು ಹೊಂದಿರುವ ಆದಿನಾಥ, ನೇಮಿನಾಥ, ಪಾರ್ಶ್ವನಾಥ, ವರ್ಧಮಾನ ಮಹಾವೀರರು ಎಂದು ಶಿವನಾಗಿ ರೆಡ್ಡಿ ತಿಳಿಸಿದ್ದಾರೆ.