Breaking News

ಮೋದಿ ಭಾರತ ಮಾತ್ರವಲ್ಲ, ವಿದೇಶದಲ್ಲೂ ಮೋದಿ ಜನಪ್ರಿಯ ಎಂದು ಹೊಗಳಿದ ಹೊಸ ಡಿಸಿಎಂ

Spread the love

ಮೋದಿ ಭಾರತ ಮಾತ್ರವಲ್ಲ, ವಿದೇಶದಲ್ಲೂ ಮೋದಿ ಜನಪ್ರಿಯ ಎಂದು ಹೊಗಳಿದ ಹೊಸ ಡಿಸಿಎಂ

ಮುಂಬೈ :
ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಶ್ಲಾಘಿಸಿದ್ದಾರೆ.

ದೇಶದ ಅಭಿವೃದ್ಧಿಗಾಗಿ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಾಗಿ ಏಕನಾಥ್‌ ಶಿಂದೆ ನೇತೃತ್ವದ ಸರ್ಕಾರದ ಭಾಗವಾಗಲು ತೀರ್ಮಾನಿಸಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಕಾರ್ಯಗಳಿಂದ ದೇಶದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲೂ ಜನಪ್ರಿಯ ಎಂದು ಹೇಳಿದ್ದಾರೆ.

ಎನ್‌ಸಿಪಿ ವಿಭಜನೆಗೊಂಡಿದೆ ಎಂಬುದನ್ನು ತಳ್ಳಿಹಾಕಿರುವ ಮುಖಂಡ ಅಜಿತ್ ಪವಾರ್‌, ಭವಿಷ್ಯದಲ್ಲಿಯೂ ತಾವು ಎನ್‌ಸಿಪಿ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಶಿಂದೆ ನೇತೃತ್ವದ ಸರ್ಕಾರದ ಭಾಗವಾಗುವ ನಿಲುವನ್ನು ಪಕ್ಷದ ಎಲ್ಲ ಶಾಸಕರು ಬೆಂಬಲಿಸಿದ್ದಾರೆ. ಬಿಜೆಪಿ ಜೊತೆ ಕೈಜೋಡಿಸಿದ್ದನ್ನು ಸಮರ್ಥಿಸಿಕೊಂಡ ಅವರು, ‘ನಾವು ಶಿವಸೇನೆ ಜೊತೆ ಸೇರಬಹುದಾದರೆ, ಬಿಜೆಪಿ ಜೊತೆಗೂ ಸೇರಬಹುದು’ ಎಂದಿದ್ದಾರೆ.

 

ನಾಗಾಲ್ಯಾಂಡ್‌ನಲ್ಲಿಯೂ ಇಂತದೇ ಬೆಳವಣಿಗೆ ಆಗಿದೆ. ಒಟ್ಟಾಗಿ ಸಮಗ್ರ ಅಭಿವೃದ್ಧಿಯನ್ನು ಪರಿಗಣಿಸಲಾಗಿದೆ. ಖಾತೆಗಳ ಹಂಚಿಕೆ ಕೆಲವೇ ದಿನದಲ್ಲಿ ನಡೆಯಲಿದ್ದು, ಅದರ ಹಿಂದೆಯೇ ಕಾರ್ಯತತ್ಪರವಾಗುತ್ತೇವೆ ಎಂದು ಹೇಳಿದರು.

2022 ರ ಜೂನ್‌ನಲ್ಲಿ ನಡೆದಿದ್ದ ರಾಜಕೀಯ ಬೆಳವಣಿಗೆಗಳಿಂದ ಶಿವಸೇನೆಯ ಏಕನಾಥ್ ಶಿಂದೆ ಅವರು ತಮ್ಮ ಗುಂಪಿನೊಂದಿಗೆ ಎನ್‌ಸಿಪಿ, ಶಿವಸೇನೆ, ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರು.

ಏಕನಾಥ ಶಿಂದೆ ಜೂನ್ 30, 2022 ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅದಾದ ಒಂದು ವರ್ಷದ ಬಳಿಕ ಎನ್‌ಸಿಪಿಯ ಅಜಿತ್ ಪವಾರ್ ಅವರೇ ಶಿಂದೆ ಬೆನ್ನಿಗೆ ನಿಂತಿದ್ದಾರೆ.

2019ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಬಿಜೆಪಿ 105, ಶಿವಸೇನೆ 56, ಎನ್‌ಸಿಪಿ 54, ಕಾಂಗ್ರೆಸ್ 44 ಹಾಗೂ ಇತರರು 29 ಸ್ಥಾನಗಳನ್ನು ಗೆದ್ದಿದ್ದರು. 2024 ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

1 × 3 =