Breaking News

ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಕಿಟ್ ಒದಗಿಸಲು ಅರ್ಜಿ ಆಹ್ವಾನ

Spread the love

ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್
ಕಿಟ್ ಒದಗಿಸಲು ಅರ್ಜಿ ಆಹ್ವಾನ

ಬೆಳಗಾವಿ :
ಪ್ರಸಕ್ತ ಸಾಲಿನ ಇಲಾಖೆಯ ಎಸ್.ಎಸ್.ಎಲ್.ಸಿ.ನಂತರದ ವಿದ್ಯಾಭ್ಯಾಸ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ
ಬ್ರೈಲ್ ಲಿಪಿ ಒದಗಿಸುವ ಯೋಜನೆಯಡಿ ಬ್ರೈಲ್ ಲಿಪಿ ಕಿಟ್‌ಗಳನ್ನು ಒದಗಿಸಲು ಬೆಳಗಾವಿ ಜಿಲ್ಲೆಯ ಅಂಧ ವಿದ್ಯಾರ್ಥಿಗಳಿಂದ ಮರು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದಾಖಲಾತಿಗಳು:
ವಿಕಲಚೇತನರ ಯು.ಡಿ.ಐ.ಡಿ. ಕಾರ್ಡ (ಕನಿಷ್ಠ ಶೇ.4೦ ರಷ್ಟು ಅಂಗವಿಕಲತೆ), ತಹಸೀಲ್ದಾರ್ ರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ, ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಾಲೆ/ ಕಾಲೇಜಿನ/ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಈ ಮೊದಲು ಸದರಿ ಸೌಲಭ್ಯ ಪಡೆದಿರುವುದಿಲ್ಲ ವೆಂದು ರೂ.1೦೦ ಗಳ ಬಾಂಡ್ ಸಲ್ಲಿಸಬೇಕು
ಅರ್ಜಿಯನ್ನು ಆಯಾ ತಾಲೂಕಿನ ತಾಲೂಕು ಪಂಚಾಯತ ಕಚೇರಿಯಲ್ಲಿನ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ ದ್ವಿ ಪ್ರತಿಯಲ್ಲಿ ಮ್ಯಾನುವಲ್ ಅರ್ಜಿ ಪಡೆದು ಜು. 25 ರ ವರೆಗೆ ಸಲ್ಲಿಸಬಹುದಾಗಿದೆ, ತಡವಾಗಿ ಬಂದ ಅರ್ಜಿಗಳನ್ನು ಹಾಗೂ ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಅರ್ಜಿ ನಮೂನೆ ಮತ್ತು ದಾಖಲಾತಿಗಳ ವಿವರಗಳಿಗಾಗಿ ಈ ಕಛೇರಿ ದೂರವಾಣಿ ಸಂಖ್ಯೆ:೦೮೩೧-೨೪೭೬೦೯೬ /೭ಗೆ ಅಥವಾ ತಮ್ಮ ತಾಲೂಕಿನ ಎಂ.ಆರ್.ಡಬ್ಲೂ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

one + 15 =