ಮುರಗೋಡ : ನಿವೃತ್ತ ಮುಖ್ಯ ಶಿಕ್ಷಕ ಡಿ.ವೈ. ಹೊಂಗಲ ಅವರಿಗೆ ಸನ್ಮಾನ
ಮುರಗೋಡ :
ಬದುಕಿನಲ್ಲಿ ಜನ ಹಿತ ಬಯಸುವಪ್ರವೃತ್ತಿಬೆಳೆಸಿಕೊಂಡು ಪ್ರಾಮಾಣಿಕವಾಗಿ ಕಾರ್ಯನಿಭಾಯಿಸಿದಲ್ಲಿ ಜನಮನ್ನಣೆ ಗಳಿಸಲು ಸಾಧ್ಯವಿದೆ ಎಂದು ಹಿರಿಯ ಶಿಕ್ಷಕ ಎಂ.ಕೆ. ಪಾಟೀಲ ಹೇಳಿದರು. ಸರಕಾರಿ ಹಿರಿಯ ಮಾದರಿ ಶಾಲೆಯಲ್ಲಿ ಶಿಕ್ಷಕ-ಶಿಕ್ಷಕಿಯರ ವೃಂದ ಹಾಗೂ ಶಿಷ್ಯ ಬಳಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಹಿಮಾಪ್ರಾ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದ ಮುಖ್ಯ ಶಿಕ್ಷಕ ಡಿ.ವೈ. ಹೊಂಗಲ
ಅವರು ನಿವೃತ್ತಿ ಹೊಂದಿದ್ದರ ಪ್ರಯುಕ್ತ ಸನ್ಮಾನಿಸಿ ಅವರು ಮಾತನಾಡಿದರು.
ಶಿಕ್ಷಣ ರಂಗದ ವೃತ್ತಿಜೀವನದಲ್ಲಿ ಒಳ್ಳೆಯನಡೆ-ನುಡಿಯೊಂದಿಗೆಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡಿ ಪ್ರಾಮಾಣಿಕ ಸೇವೆ ನಿರ್ವಹಿಸಿದ್ದ ನಿವೃತ್ತರಾದ ಮುಖ್ಯ ಶಿಕ್ಷಕ ಡಿ.ವೈ. ಹೊಂಗಲ ಅವರ ವಿಶ್ರಾಂತ ಜೀವನ ನೆಮ್ಮದಿಯಿಂದಿರಲಿ ಎಂದರು.
ಶಿಕ್ಷಣ ಸಂಯೋಜಕಎಸ್.ಎಸ್. ಮಲ್ಲಣ್ಣವರ, ಕಲಾ ಶಿಕ್ಷಕ ಮಹಾಂತೇಶ ಕಾರಗಿ, ಉಶಾ ಸೊಲ್ಲಾಪುರಿ, ಹಿರಿಯ ಶಿಕ್ಷಕಿ ಪಿ.ಎಸ್.ಪಟೇದ, ಎಂ.ಬಿ. ಬಡಿಗವಾಡ, ಇ.ಎ. ಕವಡಿಮಟ್ಟಿ, ಎಸ್.ಬಿ. ಮುಗದ, ಎ.ಎ.ಕುಲಕರ್ಣಿ, ಎಸ್.ಜಿ.ಸಣ್ಣಮನಿ, ಜಿ.ಎಸ್. ಕಾಜಗಾರ, ಎ.ಎಸ್. ಮಾಳೋದೆ, ಎಂ.ಬಿ. ಅಂಗಡಿ, ಎ.ಎಸ್. ಜಂಬಗಿ,ವಿ.ಎನ್.ಕಳಸಣ್ಣವರ,ಎಸ್.ಸಿ.ರಂಗೊಳ್ಳಿಇನ್ನಿತರರುಇದ್ದರು.ಮಲ್ಲಿಕಾರ್ಜುನ ಪಾಟೀಲ ಸ್ವಾಗತಿಸಿದರು.ಚಿದಂಬರ ಮೇಟಿ ವಂದಿಸಿದರು.