ಕೊನೆಗೂ ಬಯಲಾಯ್ತು : ಜೈನ ಮುನಿ ಕೊಲೆ ರಹಸ್ಯ

ಬೆಳಗಾವಿ :
ಚಿಕ್ಕೋಡಿ ತಾಲೂಕು ಹಿರೇಕೋಡಿ ಕಾಮ ಕುಮಾರ ನಂದಿ ಮಹಾರಾಜರು ಕೊಲೆಯಾಗಿರುವುದು ಕೊನೆಗೂ ಬಯಲಾಗಿದೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಜೈನಮುನಿ ಕಾಮ ಕುಮಾರ ನಂದಿ ಮಹಾರಾಜರ ಶವ ಹುಡುಕಾಟಕ್ಕೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಹತ್ಯೆ ಮಾಡಿ ಶವ ಎಲ್ಲಿ ಹಾಕಿದ್ದೇವೆ ಸ್ಪಷ್ಟವಾಗಿ ತಿಳಿಸದೆ ಪೊಲೀಸರನ್ನು ಗೊಂದಲಕ್ಕೆ ತಳ್ಳಿದರು. ಒಂದು ಸಲ ಕಟಕಬಾವಿ ಗ್ರಾಮದ ತೆರೆದ ಕೊಳವೆ ಬಾವಿ ಬಳಿ ಎಸೆದಿದ್ದೇವೆ ಎಂದರೆ ಮತ್ತೊಂದು ಸಲ ಬಟ್ಟೆಯಲ್ಲಿ ಕಟ್ಟಿ ನದಿಗೆ ಎಸೆದಿದ್ದೇವೆ
ಎನ್ನುತ್ತಿದ್ದರು.
ಕೊನೆಗೆ ಪೊಲೀಸರು ಗ್ರಾಮದಲ್ಲಿ ಪರಿಶೀಲನೆ ನಡೆಸಿದ್ದಾರೆ. ಕೊನೆಗೆ ಪೊಲೀಸರು ತೀವ್ರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮುನಿಗಳನ್ನು ಆಶ್ರಮದಿಂದಲೇ ಅಪಹರಿಸಿ ಕೊಲೆ ಮಾಡಿರುವ ಸಂಗತಿಯನ್ನು ಬಾಯ್ಬಿಟ್ಟಿದ್ದಾರೆ.
YuvaBharataha Latest Kannada News