ರಾಜ್ಯಾದ್ಯಂತ ಒಂದು ಸಾವಿರ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಚಿಂತನೆ: ಹೆಚ್. ಕೆ ಪಾಟೀಲ

ಗದಗ:
ರಾಜ್ಯಾದ್ಯಂತ ಒಂದು ಸಾವಿರ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಚಿಂತನೆ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.
ಗದಗನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2008 ರಲ್ಲಿ ಗ್ರಾಮ ನ್ಯಾಯಾಲಯಗಳ ಕಲ್ಪನೆ, ಸ್ಪಷ್ಟತೆ ಬಂದಿದೆ. ನಿಯಮಗಳನ್ನು ರೂಪಿಸಿ ಆ ಹಿನ್ನಲೆಯಲ್ಲಿ ನಾವು ಗ್ರಾಮ ನ್ಯಾಯಾಲಯ ಸ್ಥಾಪನೆ ಚಿಂತನೆ ಮಾಡಲಾಗುತ್ತದೆ. ಜೆಎಮ್ ಎಫ್ಸಿ ಮಾದರಿಯಲ್ಲಿ ನ್ಯಾಯಾಲಯಗಳನ್ನು ಸ್ಥಾಪನೆ ಮಾಡುತ್ತೇವೆ ಎಂದು ಹೇಳಿದರು.
ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ. ಬೆಲೆ ಏರಿಕೆಗೆ ಕಾರಣ ರಾಜ್ಯ ಸರ್ಕಾರ ಆಗುತ್ತಾ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ನಾವು ಏರಿಸುತ್ತೇವಾ? ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ತಡಿಬೇಕು. ಅದು ಅವರ ಜವಾಬ್ದಾರಿ, ಅವ್ರ ವಿಫಲರಾಗಿ ಮತ್ತೊಬ್ಬರ ಮೇಲೆ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
YuvaBharataha Latest Kannada News