ಕೊನೆಗೂ ರದ್ದಾಯ್ತು ನೇಮಕಾತಿ ಸಂದರ್ಶನ

ಬೆಳಗಾವಿ : ಎನ್.ಪಿ.ಸಿ.ಡಿ.ಸಿ.ಸ್/ ಎನ್.ಪಿ.ಹೆಚ್.ಸಿ.ಇ ಮತ್ತು ಎನ್.ಪಿ.ಪಿ.ಸಿ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರು, ವೈದ್ಯರು, ಶುಶ್ರೂಷಕ / ಕಿಯರು ಹಾಗೂ ಆಪ್ತ ಸಮಾಲೋಚಕರ ನೇಮಕಾತಿಗಾಗಿ ಜುಲೈ 11 ರಂದು ನಡೆಸಲು ಉದ್ದೇಶಿಸಿದ್ದ ನೇರ ಸಂದರ್ಶನವನ್ನು ರದ್ದುಗೊಳಿಸಲಾಗಿರುತ್ತದೆ.
ನೇರ / ಗುತ್ತಿಗೆ ನೇಮಕಾತಿಯ ಸರ್ಕಾರದ ಮೀಸಲಾತಿಯನ್ನು ಪ್ರಶ್ನಿಸಿ ಘನ ಉಚ್ಛ ನ್ಯಾಯಾಲಯ ಮತ್ತು ಘನ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನೇರ ಸಂದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಹಾಗೂ ನೇಮಕಾತಿ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
YuvaBharataha Latest Kannada News