Breaking News

ಶಾಲಾ ಮಕ್ಕಳ ಅಹಾರದಲ್ಲಿ ಸಿರಿಧಾನ್ಯ ಬಳಸಲು ಸೂಚನೆ

Spread the love

ಶಾಲಾ ಮಕ್ಕಳ ಅಹಾರದಲ್ಲಿ ಸಿರಿಧಾನ್ಯ ಬಳಸಲು ಸೂಚನೆ

ದೆಹಲಿ:
ವಿದ್ಯಾರ್ಥಿಗಳಿಗೆ ಸಿರಿಧಾನ್ಯದ ಬಗ್ಗೆ ಅರಿವು ಹಾಗೂ ಅದರ ಮಹತ್ವ ತಿಳಿಯಲು ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಊಟದಲ್ಲಿ ಸಿರಿಧಾನ್ಯ ಬಳಸುವಂತೆ ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶಿಕ್ಷಣ ಸಚಿವಾಲಯವು ನಿರ್ದೇಶನ ನೀಡಿದೆ. ವಿಶ್ವಸಂಸ್ಥೆಯು 2023 ಅನ್ನು ‘ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಘೋಷಿಸಿರುವ ಹಿನ್ನೆಲೆ ಮಕ್ಕಳಿಗೆ ಪೌಷ್ಠಿಕ ಆಹಾರದ ಕುರಿತು ಜಾಗೃತಿ ಮೂಡಿಸಲು ಸರ್ಕಾರವು ಈ ಉಪಕ್ರಮವನ್ನು ಘೋಷಿಸಿದೆ. ಈ ಪೈಕಿ ಪ್ರತಿ ತಿಂಗಳು ಮಕ್ಕಳ ‘ಆಹಾರದ ಟೈಮ್‌ ಟೇಬಲ್‌’ ನಲ್ಲಿ ಸಿರಿಧಾನ್ಯಗಳನ್ನು ಅಳವಡಿಸುವಂತೆ ಜು.5ರ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಿರಿಧಾನ್ಯಗಳ ಮಹತ್ವ ಸಾರಿದ ಸುತ್ತೂರು ಜಾತ್ರೆ
ಹಲವು ವಿಶೇಷತೆಗಳಿಗೆ ವೇದಿಕೆಯಾಗಿರುವ ಸುತ್ತೂರು ಜಾತ್ರಾ ಮಹೋತ್ಸವವು ದೇಶದ ಸಿರಿಧಾನ್ಯಗಳ ಮಹತ್ವ ಸಾರುವಲ್ಲೂ ಯಶಸ್ವಿಯಾಯಿತು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಸಿರಿಧಾನ್ಯಗಳ ಮಹತ್ವ ಕುರಿತ ಕೃಷಿ ವಿಚಾರಸಂಕಿರಣವು ಸಿರಿಧಾನ್ಯಗಳ ಪರಂಪರೆ, ಮಹತ್ವ, ಮಾರುಕಟ್ಟೆ, ಬೇಡಿಕೆಯನ್ನು ರೈತರು ಹಾಗೂ ಸಾರ್ವಜನಿಕರಿಗೆ ಮನದಟ್ಟು ಮಾಡಿಸಿತು. ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದ ವಿಷಯ ತಜ್ಞರು ಸಿರಿಧಾನ್ಯಗಳ ಉಳಿಸಿ, ಬಳಸಿ, ಬೆಳೆಸುವ ನಿಟ್ಟಿನಲ್ಲಿ ವಿಷಯ ಮಂಡಿಸಿದರು.

ಕೃಷಿಯಲ್ಲಿ ಸಿರಿಧಾನ್ಯ ಕುರಿತು ಪ್ರಗತಿಪರ ರೈತ ಹೊನ್ನೂರು ಪ್ರಕಾಶ್‌ ಮಾತನಾಡಿ, 2023ನೇ ಸಾಲನ್ನು ವಿಶ್ವಸಂಸ್ಥೆಯು ಸಿರಿಧಾನ್ಯಗಳ ವರ್ಷವೆಂದು ಕರೆದಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಕಡಿಮೆ ಮಳೆ, ಗೊಬ್ಬರ ಇಲ್ಲದಿದ್ದರೂ ಬೆಳೆಯುವ ಸಿರಿಧಾನ್ಯಗಳನ್ನು ಪ್ರಸ್ತುತ ಹಲವಾರು ದೃಷ್ಠಿಯಲ್ಲಿ ನೋಡಬೇಕಿದೆ ಎಂದರು.

ರೈತರು ಎಲ್ಲವನ್ನೂ ಬೆಳೆಯುತ್ತಾರೆ. ಆದರೆ, ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ, ಮಾರುಕಟ್ಟೆಮಾಡುವುದರಲ್ಲಿ ಸೋಲುತ್ತಿದ್ದಾರೆ. ರೈತರು ಕ್ವಿಂಟಾಲ್‌ ರಾಗಿಯನ್ನು 3 ಸಾವಿರಕ್ಕೆ ಮಾರುತ್ತಾರೆ. ಆದರೆ, ರಾಗಿಯನ್ನು ಹಿಟ್ಟು ಮಾಡಿ ಮಾರಿದರೇ ಕ್ವಿಂಟಾಲ್‌ಗೆ 30 ಸಾವಿರ ಸಿಗುತ್ತದೆ. ರಾಗಿ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಾಗಿ ಮಾರಿದರೇ ಬೇರೆಯವರು ದರ ನಿಗದಿ ಮಾಡುತ್ತಾರೆ. ಆದರೆ, ಮೌಲ್ಯವರ್ಧನೆ ಮಾಡಿ ಮಾರಿದರೇ ರೈತರೇ ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಿಕೊಳ್ಳಬಹುದು. ಆ ಮೂಲಕ ಎಲ್ಲಾ ರೈತರು ಉದ್ಯಮಿಗಳಾಗಬೇಕು ಎಂದು ಅವರು ಆಶಿಸಿದರು.

ರೈತರ ಮಕ್ಕಳಿಗೆ ಈಗ ಹೆಣ್ಣು ಕೊಡುತ್ತಿಲ್ಲ. ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಮಾರಿದರೇ ಆವಾಗ ಎಲ್ಲರೂ ಹುಡುಕಿಕೊಂಡು ಬಂದು ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಾರೆ. ಕಬ್ಬು ಬೆಳೆಯಲ್ಲಿ ರೈತರಿಗೆ ಲಾಭವಿಲ್ಲ. ಅದರ ಬದಲು ಸಿರಿಧಾನ್ಯ ಬೆಳೆದರೇ ಹೆಚ್ಚು ಲಾಭ ಗಳಿಸಬಹುದು. ರೈತರು ಸಾವಯವ ಕೃಷಿ ಮಾಡುವ ಮೂಲಕ ಮಾರುಕಟ್ಟೆಕ್ರಾಂತಿ ಮಾಡಬೇಕು ಎಂದು ಅವರು ಕರೆ ನೀಡಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

19 − sixteen =