ಮುರಗೋಡ : ಆತ್ಮೀಯ ಸನ್ಮಾನ

ಮುರಗೋಡ:
ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಸಿಆರ್‌ಪಿಎಸ್.ಎಸ್. ಮಲ್ಲಣ್ಣವರ ಹೇಳಿದರು. ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮುಖ್ಯಾಧ್ಯಾಪಕ ಡಿ.ವೈ. ಹೊಂಗಲ ಹಾಗೂಬೇರೆಡೆ ವರ್ಗಾವಣೆಗೊಂಡ ಶಿಕ್ಷಕಿ ಅಶ್ವಿನಿ ಕುಲಕರ್ಣಿ ಅವರಿಗೆ ಸಿಆರ್‌ಪಿ ಮತ್ತು ಶಿಕ್ಷಕರ ಸಿಬ್ಬಂದಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಅವರನ್ನು ಸತ್ಕರಿಸಿ
ಮಾತನಾಡಿದರು.
ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಗೆ ಒಳ್ಳೆಯ ನೀತಿ-ನಡತೆ, ಸಂಸ್ಕಾರ ನೀಡುವುದರೊಂದಿಗೆಪ್ರಾಮಾಣಿಕ ಕಾರ್ಯ ನಿರ್ವಹಿಸಿದಲ್ಲಿ ಸಮಾಜದಲ್ಲಿ ಮಹತ್ತರ ಸ್ಥಾನ ಮಾನ ದೊರೆಯಲು ಸಾಧ್ಯವಿದೆ ಎಂದರು.
ಹಿರಿಯ ಶಿಕ್ಷಕ ಮಲ್ಲಿಕಾರ್ಜುನ ಪಾಟೀಲ, ಎಂ.ಬಿ. ಬಡಿಗವಾಡ, ಪಿ.ಎಸ್. ಪಟ್ಟೇದ ಮಾತನಾಡಿದರು.
ಎಸ್.ಬಿ. ಮುಗದ, ಕಲಾ ಶಿಕ್ಷಕ ಮಹಾಂತೇಶ ಕಾರಗಿ, ಉಶಾ ಸೊಲ್ಲಾಪುರಿ,ಇ.ಎ.ಕವಡಿಮಟ್ಟಿ, ಎಂ.ಬಿ. ಅಂಗಡಿ, ಎ.ಎಸ್. ಜಂಬಗಿ, ವಿ.ಎನ್.ಕಳಸಣ್ಣವರ, ಎಸ್.ಸಿ.ರಂಗೊಳ್ಳಿ,ಎಸ್.ಜಿ.ಸಣ್ಣಮನಿ, ಜಿ.ಎಸ್. ಕಾಜಗಾರ, ಎ.ಎಸ್. ಮಾಳೋದೆ ಇನ್ನಿತರರು ಇದ್ದರು. ಎಂ.ಕೆ. ಪಾಟೀಲ ಸ್ವಾಗತಿಸಿದರು. ಚಿದಂಬರ ಮೇಟಿ ವಂದಿಸಿದರು.
YuvaBharataha Latest Kannada News