Breaking News

ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರಕ್ಕೆ ಪುಸ್ತಕ ಆಹ್ವಾನ

Spread the love

ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರಕ್ಕೆ ಪುಸ್ತಕ ಆಹ್ವಾನ

ಗದಗ:
ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ‘ತ್ರಿಭಾಷಾ ಕವಿ’ ಗುರು ಪುಟ್ಟರಾಜರ ಸಾಹಿತ್ಯ ಸೇವೆಯನ್ನು ಸ್ಮರಿಸಿಕೊಳ್ಳುವ ಘನ ಉದ್ದೇಶದಿಂದ, ಕಳೆದ ೨೩ ವರ್ಷಗಳಿಂದಲೂ ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡುತ್ತಾ ಬಂದಿದೆ. ಅದರಂತೆ ಈ ವರ್ಷವೂ ಕೂಡಾ ಈ ಪ್ರಶಸ್ತಿಗಾಗಿ ೨೦೨೧-೨೨ ಮತ್ತು ೨೦೨೨-೨೩ ಸಾಲಿನಲ್ಲಿ ಪ್ರಕಟವಾದ, ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ.

ಈ ಪ್ರಶಸ್ತಿಗೆ ಕನ್ನಡದ ಕೃತಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಹಿಂದಿ ಮತ್ತು ಸಂಸ್ಕೃತ ಕೃತಿಗಳಲ್ಲಿ ಉತ್ತಮ ಕೃತಿ ಆಯ್ಕೆಮಾಡಿ ಉತ್ತಮ ಕೃತಿ ಕರ್ತರಿಗೆ ಪುಟ್ಟರಾಜ ಸಾಹಿತ್ಯ ಸಮ್ಮಾನ ನೀಡಲಾಗುವದು.
ಈ ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಯು ೫,೦೦೦/-ರೂ (ಐದು ಸಾವಿರ ರೂಪಾಯಿಗಳು) ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಗೆ ಆಯ್ಕೆಯಾದ ಕೃತಿ ಕರ್ತರಿಗೆ ೦೧ ಅಕ್ಟೋಬರ್ ೨೦೨೩ ರಂದು ಬೆಳಗಾವಿಯಲ್ಲಿ ನಡೆಯುವ ಡಾ. ಪಂ. ಪುಟ್ಟರಾಜ ಸಾಹಿತ್ಯೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸೇವಾ ಸಮಿತಿಯ ರಾಜ್ಯ ಕಾರ್ಯದರ್ಶಿ ಪ್ರೊ. ಮಂಜುಶ್ರೀ ಬ. ಹಾವಣ್ಣವರ ಬೆಳಗಾವಿ ತಿಳಿಸಿದ್ದಾರೆ.

ಪ್ರಶಸ್ತಿಗೆ ಸಮೀಪದ ಪ್ರತಿಸ್ಪರ್ಧಿಯಾದ ವಿವಿದ ಪ್ರಕಾರದ ೧೦ ಕೃತಿಗಳನ್ನು ಗುರುತಿಸಿ ವರ್ಷದ ಶ್ರೇಷ್ಠ ಕೃತಿ ಸಮ್ಮಾನ ನೀಡಿ ಗೌರವಿಸಲಾಗುವುದು.
ಆಸಕ್ತ ಲೇಖಕರು ತಮ್ಮ ೩ ಕೃತಿಗಳೊಂದಿಗೆ ಪರಿಚಯ ಪತ್ರ, ಒಂದು ಭಾವಚಿತ್ರ ಮರು ಉತ್ತರಕ್ಕಾಗಿ ಅಗತ್ಯ ಅಂಚೆ ಚೀಟಿ ಅಂಟಿಸಿದ ಲಕೊಟೆ ಸಹಿತ ೧೫ ಅಗಸ್ಟ ೨೦೨೩ ರ ಒಳಗಾಗಿ ತಲುಪುವಂತೆ ಕಳಿಸಿಕೊಡಲು ಕೋರಲಾಗಿದೆ. ಪುಸ್ತಕಗಳನ್ನು ಕಳಿಸಿಕೊಡುವ ವಿಳಾಸ: ಅಧ್ಯಕ್ಷರು ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಆಯ್ಕೆ ಸಮಿತಿ , ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ‘ಗಿರಿಜಾ ನಿವಾಸ’ ಪಂಚಾಕ್ಷರಿ ನಗರ ೩ನೆಯ ಅಡ್ಡರಸ್ತೆ ಗದಗ-೫೮೨೧೦೧ ಇಲ್ಲಿಗೆ ಕಳಿಸುವಂತೆ ಕೋರಲಾಗಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

five × 4 =