ಗೋಕಾಕ ಪಾಲ್ಸ್..ಸೇಲ್ಪಿಗಳಿಗೆ ಬ್ರೇಕ್- ಡಿವೈಎಸ್‌ಪಿ, ಡಿ. ಎಸ್. ಮುಲ್ಲಾ!
ಗೋಕಾಕ: ಡಿವೈಎಸ್‌ಪಿ ಡಿ ಎಸ್ ಮುಲ್ಲಾ ನೇತ್ರತ್ವದಲ್ಲಿ ಬ್ಯಾರಿಕೇಡ ಅಳವಡಿಸುತ್ತಿರುವದು.
ಯುವ ಭಾರತ ಸುದ್ದಿ ಗೋಕಾಕ: ಕಳೆದ ಹಲವು ದಿನಗಳಿಂದ ಗೋಕಾಕ ಜಲಪಾತದಲ್ಲಿ ಪ್ರವಾಸಿಗರು ಜಲಪಾತದ ತುತ್ತ ತುದಿಗೆ ತೆರಳಿ ಸೇಲ್ಪಿ ತೆಗೆದುಕೊಳ್ಳುತ್ತಿರುವ ಹಿನ್ನಲೆ ಸ್ಥಳೀಯ ಪೋಲಿಸ್ ಇಲಾಖೆ ಸೂಕ್ತಕ್ರಮವಹಿಸಿ ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ಬ್ಯಾರಿಕೇಡ ಅಳವಢಿಸಿ ಪ್ರವಾಸಿಗರು ಜಲಪಾತದತ್ತ ತೆರಳದಂತೆ ನಿರ್ಬಂಧ ವಿಧಿಸಿದ್ದಾರೆ.
ಪಶ್ಚಿಮ ಘಟ್ಟ ಅರಣ್ಯ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಕಳೆದ ಎರಡು ದಿನಗಳಿಂದ ಗೋಕಾಕ ಜಲಪಾತ ಹಾಗೂ ಗೊಡಚಿನಮಲ್ಕಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು ಪ್ರವಾಸಿಗರು ಮುಂಜಾಗೃತೆ ವಹಿಸಿ ಪೋಲಿಸ್ ಇಲಾಖೆ ನಿಗದಿ ಪಡಿಸಿದ ಸ್ಥಳದಿಂದ ಜಲಪಾತ ವಿಕ್ಷಿಸಬೇಕು. ಪೋಲಿಸ್ ಇಲಾಖೆ ನಿಗದಿ ಪಡಿಸಿದ ಸ್ಥಳದಿಂದ ಮುಂದೆ ಹೊದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಡಿವೈಎಸ್‌ಪಿ ಡಿ ಎಸ್ ಮುಲ್ಲಾ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಗೋಕಾಕ ಜಲಪಾತ ಮೈದುಂಬಿ ಹರಿಯುತ್ತಿದೆ. ಪ್ರವಾಸಿಗರು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಹಾಗೂ ಯುವಕರು ಮಧ್ಯ ಸೇವನೆ ಮಾಡಿ ಹುಡುಗಾಟ ಮಾಡದೆ ಜಲಪಾತ ಸೌಂದರ್ಯ ಸವಿಯುವಂತೆ ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗೋಕಾಕ ಶಹರ ಠಾಣೆ ಪಿಎಸ್‌ಐ ಎಮ್ ಡಿ ಘೋರಿ ಸೇರಿದಂತೆ ಸಿಬ್ಬಂಧಿ ವರ್ಗದವರು ಇದ್ದರು.