Breaking News

ಸಿಬ್ಬಂಧಿಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಗುಜನಾಳ ಅರಣ್ಯ ಅಧಿಕಾರಿ ಅಮೃತ ಗುಂಡೋಸಿ!!

Spread the love

ಸಿಬ್ಬಂಧಿಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ

ಗುಜನಾಳ ಅರಣ್ಯ ಅಧಿಕಾರಿ ಅಮೃತ ಗುಂಡೋಸಿ!!

ಯುವ ಭಾರತ ಸುದ್ದಿ ಗೋಕಾಕ: ತಾಲೂಕಿನ ಗುಜನಾಳ ವಲಯ ಅರಣ್ಯ ಇಲಾಖೆ ಸಿಬ್ಬಂಧಿಗಳನ್ನು ಬಲವಂತವಾಗಿ ಗುಜನಾಳ ಅರಣ್ಯ ವಲಯ ಅಧಿಕಾರಿ ತಮ್ಮ ಖಾಸಗಿ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಗುಜನಾಳ ಅರಣ್ಯ ಅಧಿಕಾರಿ ಅಮೃತ ಗುಂಡೋಸಿ

ಗುಜನಾಳ ಅರಣ್ಯ ವಲಯ ಅಧಿಕಾರಿ ಅಮೃತ ಗುಂಡೋಸಿ ಕಳೆದ ಎರಡು ವರ್ಷಗಳಿಂದ ಗುಜನಾಳ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ತಮ್ಮ ಮನೆ ಕೆಲಸಕ್ಕೆ ಹಾಗೂ ತನ್ನ ಖಾಸಗಿ ವಾಹನಕ್ಕೆ ಗಸ್ತು ವನಪಾಲಕ ಸಿಬ್ಬಂಧಿಯನ್ನು ಬಳಕೆ ಮಾಡಿಕೊಳ್ಳುತ್ತಿರುವದಾಗಿ ಸಿಬ್ಬಂಧಿ ಆರೋಪಿಸಿದ್ದಾರೆ. ಸುಮಾರು ಒಂದು ವರ್ಷದಿಂದ ಸಿಬ್ಬಂಧಿಗಳನ್ನು ತಮ್ಮ ಸ್ವಂತ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದ್ದು ಅಧಿಕಾರಿಯ ಮನೆಯವರಿಗೆ ಆಸ್ಪತ್ರೆಗೆ ಬಿಡಲು ಡ್ರೆöÊವರ್ ಆಗಿ ಮತ್ತು ಮನೆಗೆ ತರಕಾರಿ, ದಿನಸಿ ತರಲು ಸೇರಿ ಎಲ್ಲ ಕೆಲಸಕ್ಕೂ ಸಿಬ್ಬಂಧಿ ಬಳಕೆ ಮಾಡಲಾಗುತ್ತಿದೆ.

ಗಸ್ತು ವನ ಪಾಲಕ ಪ್ರಕಾಶ ತಳವಾರ ಅರಣ್ಯಾಧಿಕಾರಿ ಖಾಸಗಿ ಕಾರು ಚಾಲನೆ ಮಾಡುತ್ತಿರುವದು.

ವಾರಕ್ಕೆ ಎರಡು ಮೂರು ಬಾರಿ ಗುಜನಾಳ ಕಚೇರಿಗೆ ಆಗಮಿಸುವ ವಲಯ ಅರಣ್ಯಾಧಿಕಾರಿ ಸಿಬ್ಬಂಧಿಯನ್ನು ಹೆದರಿಸಿ ತಮ್ಮ ಹಿಡಿತದಲ್ಲಿಟ್ಟು ಕೊಂಡಿದ್ದಾರೆ. ಗುರುವಾರದಂದು ಗಸ್ತು ವನ ಪಾಲಕ ಪ್ರಕಾಶ ತಳವಾರ ಅರಣ್ಯಾಧಿಕಾರಿಗಳ ಸ್ವಂತ ವಾಹನ ಡ್ರೆöÊವಿಂಗ ಮಾಡಿ ಮನೆಯವರ ಆಸ್ಪತ್ರೆಗೆ ಕರೆದುಕೊಂಡುವ ಹೋಗುತ್ತಿರುವದಾಗಿ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರಣ್ಯ ರಕ್ಷಣೆಗೆ ಗಸ್ತು ತಿರುಗಬೇಕಾದ ಗಸ್ತು ವನಪಾಲಕ ಸಿಬ್ಬಂದಿಗಳಿ0ದ ತಮ್ಮ ಸ್ವಂತ ಕೆಲಸಕ್ಕೆ ಬಳಕೆ ಮಾಡಿಕೊಳ್ಳುವದು ಎಷ್ಟರ ಮಟ್ಟಿಗೆ ಸರಿ. ಅಲ್ಲದೇ ಗಸ್ತುವ ವನಪಾಲಕರಿಗೆ ವೇತನ ನೀಡುವದು ಸರಕಾರ. ಗಸ್ತು ವನ ಪಾಲಕರು ತಮ್ಮ ಮೇಲೆ ಅಧಿಕಾರಿ ಏನಾದರೂ ಮಾಡಿ ಬಿಟ್ಟಾರು ಎಂದು ಹೆದರಿ ಅವರ ಕೆಲಸ ಮಾಡಲಾಗುತ್ತಿದೆ ಎಂದು ಸಿಬ್ಬಂಧಿ ಪತ್ರಿಕೆಯೊಂದಿಗೆ ಅಳಲು ತೊಡಿಕೊಂಡಿದ್ದಾರೆ.

ಮಳೆಯಲ್ಲಿ ನಿಂತ ಸರಕಾರಿ ವಾಹನಗಳು: ಗುಜನಾಳ ಅರಣ್ಯ ವಲಯ ಅಧಿಕಾರಿ ಅಮೃತ ಗುಂಡೋಸಿ ತನ್ನ ಸ್ವಂತ ವಾಹನ ಕೆಎ-22 ಎಮ್‌ಸಿ-5448 ಅನ್ನು ಮಳೆಯ ನೀರು ಬಿಳದಂಗೆ ಕಚೇರಿಯ ಮುಂದೆ ನಿಲ್ಲಿಸುತ್ತಾರೆ. ಅರಣ್ಯ ಇಲಾಖೆ ನೀಡಿದ ಸರಕಾರಿ ಜೀಪ್‌ನ್ನು ಕಚೇರಿ ಆವರಣದಲ್ಲಿ ಮಳೆಯಲ್ಲಿ ನಿಲ್ಲಿಸಲಾಗುತ್ತದೆ. ತಮ್ಮ ಸ್ವಂತ ವಾಹನದಷ್ಟೇ ಸರಕಾರಿ ವಾಹನವನ್ನು ರಕ್ಷಿಸಬೇಕಾದ ಅಧಿಕಾರಿ ಈ ರೀತಿಯಾಗಿ ಕಾರ್ಯನಿರ್ವಹಿಸುತ್ತಿರುವದು ವಿರ‍್ಯಾಸವೇ ಸರಿ. ಸರಕಾರಿ ಕೆಲಸ ದೇವರ ಕೆಲಸ ಎಂದು ಹೆಳಲಾಗುತ್ತದೆ. ಸರಕಾರದ ಆಸ್ತಿ ದೇವರ ಆಸ್ತ ಅಲ್ಲವೇ ಎಂದು ಗುಜನಾಳ ಗ್ರಾಮಸ್ಥರು ಅರಣ್ಯಾಧಿಕಾರಿ ವಿರುದ್ಧ ಕಿಡಿಕಾರುತ್ತಿದ್ದಾರೆ.

ಅರಣ್ಯ ಇಲಾಖೆ ನೀಡಿದ ಸರಕಾರಿ ಜೀಪ್‌ನ್ನು ಕಚೇರಿ ಆವರಣದಲ್ಲಿ ಮಳೆಯಲ್ಲಿ ನಿಲ್ಲಿಸಲಾಗುತ್ತದೆ

ಅರಣ್ಯ ಪ್ರದೇಶದ ಮಣ್ಣು ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿ: ನಿಸರ್ಗ ರಕ್ಷಣೆ ನಮ್ಮೆಲ್ಲರ ಹೊಣೆ, ಪರಿಸರ ರಕ್ಷಣೆಗಾಗಿ ಉದ್ದೂದ್ದ ಭಾಷಣ ಬೀಗಿಯುವ ಅರಣ್ಯ ಅಧಿಕಾರಿಗಳೇ ಮಣ್ಣು ಗಣಿಗಾರಿಕೆಗೆ ಉತ್ತೇಜನ ನೀಡಲು ಹೋರಟರೆ ಬೇಲಿಯೇ ಎದ್ದು ಹೊಲಮೇಯ್ದಂಗೆ. ಗುಜನಾಳ ಅರಣ್ಯ ವಲಯ ಅಧಿಕಾರಿ ಅಮೃತ ಗುಂಡೋಸಿ ಹಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಗುಜನಾಳ ಅರಣ್ಯ ವಲಯವ್ಯಾಪ್ತಿಯಲ್ಲಿ ಮಣ್ಣು ಗಣಿಗಾರಿಕೆಗೆ ಸಹಕರಿಸುತ್ತಿದ್ದು, ಹಣ ನೀಡುವ ಟ್ರಾಕ್ಟರ ಮಾಲಿಕರಿಗೆ ಮಣ್ಣು ತುಂಬಲು ಅವಕಾಶ ನೀಡುತ್ತಾರೆ.

ತೆಳಗಿನಹಟ್ಟಿ ಗ್ರಾಮದಲ್ಲಿ ಮಣ್ಣು ತುಂಬಿಸುತ್ತಿದ್ದ ಟ್ರಾಕ್ಟರ ವಶಪಡಿಸಿಕೊಂಡಿರುವದು.

ಹಣ ನೀಡದೇ ವಿಳಂಭವಾದಲ್ಲಿ ಮಣ್ಣು ತುಂಬುವ ಮಾಲಿಕರ ಟ್ರಾಕ್ಟರ್ ಏಳೆದು ತಂದು ಅದರ ಮೇಲೆ ಕೇಸ್ ದಾಖಲು ಮಾಡಿ ಮೇಲಾಧಿಕಾರಿಗಳಿಂದ ಶಹಬ್ಬಾಸ ಎನಿಸಿಕೊಳ್ಳುತ್ತಿದ್ದಾರೆ. ಉದಾಹರಣೆಯಾಗಿ ಕಳೆದ ಗುರುವಾರ ತೆಳಗಿನಹಟ್ಟಿ ಗ್ರಾಮದಲ್ಲಿ ಮೂರಕ್ಕೂ ಹೆಚ್ಚು ಟ್ರಾಕ್ಟರಗಳನ್ನು ಅವಶಕ್ಕೆ ಪಡೆದಿದ್ದ ಅರಣ್ಯಾಧಿಕಾರಿ ಅಮೃತ ಗಂಡೋಸಿ ಒಂದು ಟ್ರಾಕ್ಟರನ್ನು ಕಚೇರಿಗೆ ತಗೆದುಕೊಂಡು ಹೋಗಿದ್ದಾರೆ. ಉಳಿದ ಟ್ರಾಕ್ಟರ ಮಾಲಿಕರಿಂದ ಸ್ಥಳದಲ್ಲಿಯೇ 25,30 ಸಾವಿರದಂತೆ ಹಣ ಪಡೆದು ಟ್ರಾಕ್ಟರ ಮರಳಿಸಲಾಗಿದೆ. ಇದಕ್ಕೆ ಸೂತ್ರಧಾರಿಯಾಗಿ ಕೆಳ ಅಧಿಕಾರಿ ಸಾಗರ ಪಣಗುತ್ತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಗುರುವಾರದಂದು ತೆಳಗಿನಹಟ್ಟಿ ಗ್ರಾಮದಲ್ಲಿ ಮಣ್ಣು ತುಂಬಿಸುತ್ತಿದ್ದ ಲಕ್ಷö್ಮಣ ಪಡೆಪ್ಪಗೋಳ ಅವರ ಟ್ರಾಕ್ಟರನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ನಡೆದಿದೆ. –ಅಮೃತ ಗಂಡೋಸಿ, ವಲಯ ಅರಣ್ಯಾಧಿಕಾರಿ ಗುಜನಾಳ.

 


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

8 + four =