ಮುಖ್ಯಮಂತ್ರಿ ಆಗುವ ಮನದಿಚ್ಚೆ ಬಿಚ್ಚಿಟ್ಟ ಮಾಸ್ಟರ್ ಮೈಂಡ್

ಬೆಂಗಳೂರು :
ಭವಿಷ್ಯದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗುವ ಆಸೆಯನ್ನು ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಮತ್ತೊಮ್ಮೆ ಬಿಚ್ಚಿಟ್ಟಿದ್ದಾರೆ.
ಈ ಅವಧಿಯಲ್ಲಿ ನಾನು ಸಿಎಂ ರೇಸ್ ನಲ್ಲಿ ಇಲ್ಲ. ಆದರೆ ಮುಂದಿನ ಸಿಎಂ ರೇಸ್ ನಲ್ಲಿ ನಾನಿರುತ್ತೇನೆ ಎಂದು ಅವರು ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಗೊತ್ತಿಲ್ಲ. ಅಧಿಕಾರ ಹಂಚಿಕೆ ಮಾಹಿತಿಯು ಇಲ್ಲ. ಎಲ್ಲಾ ಹೈಕಮಾಂಡ್ ಗೆ ಬಿಟ್ಟಿದೆ. ಆದರೆ ಮುಂದಿನ ಅವಧಿಗೆ ಮುಖ್ಯಮಂತ್ರಿ ರೇಸಿಗೆ ನಾನಿರುತ್ತೇನೆ ಎಂದು ಹೇಳಿದ್ದಾರೆ.
YuvaBharataha Latest Kannada News