ಬೆಳಗಾವಿ ಉಗ್ರನಿಗೆ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ನಂಟು
ಬೆಳಗಾವಿ :
ಮಂಗಳೂರಿನಲ್ಲಿ 2022ರ ನವೆಂಬರ್ 19 ರಂದು ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಬೆಳಗಾವಿ ಜೈಲಿನಲ್ಲಿದ್ದ ಆಫ್ಸರ್ ಪಾಶಾ ಎಂಬ ಮಾಹಿತಿ ಇದೀಗ ಮಹಾರಾಷ್ಟ್ರದ ತನಿಖಾಧಿಕಾರಿಗಳಿಗೆ ಗೊತ್ತಾಗಿದೆ. ಈ ಮೂಲಕ ಮಂಗಳೂರು ಕುಕ್ಕರ್ ಬಾಂಬ್ ರೂವಾರಿ ಈತ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಕೇಂದ್ರ ಭೂ ಸಾರಿಗೆ ಖಾತೆ ಸಚಿವ ನಿತಿನ್ ಗಡಕರಿ ಅವರಿಗೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗ್ರಹದಿಂದ ಜಯೇಶ್ ಪೂಜಾರಿ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದ. ಈ ಪ್ರಕರಣದಲ್ಲಿ ಅಫ್ಸರ್ ಪಾಶಾನನ್ನು ಜುಲೈ 14ರಂದು ರಾಷ್ಟ್ರೀಯ ತನಿಖೆ ದಳ (ಎನ್ಐಎ) ಅಧಿಕಾರಿಗಳು ನಾಗಪುರ ಕಾರಾಗ್ರಹಕ್ಕೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ. ಆಗ ಆತನ ಮಂಗಳೂರು ನಂಟು ಗೊತ್ತಾಗಿದೆ. ಕುಕ್ಕರ್ ಬಾಂಬ್ ಸ್ಪೋಟ ನಡೆಸಿದ್ದ ಮೊಹಮ್ಮದ್ ಶಾರೀಖ್ ಗೆ ಕುಕ್ಕರ್ ಬಾಂಬ್ ತಯಾರಿ ಕುರಿತ ತರಬೇತಿಯಲ್ಲಿ ಈತ ಭಾಗಿಯಾಗಿದ್ದ. ಈ ಮೊದಲು ಬಾಂಗ್ಲಾದೇಶ ಢಾಕಾದಲ್ಲಿ ಬಾಂಬ್ ತಯಾರಿಕೆ ತರಬೇತಿ ಪಡೆದು ಭಾರತಕ್ಕೆ ಬಂದಿದ್ದ. ಕೊನೆಗೂ ಮಂಗಳೂರು ಸ್ಫೋಟ ಪ್ರಕರಣ ಸೇರದಂತೆ ಹಲವು ಪ್ರಕರಣಗಳಲ್ಲಿ ಈತನ ಪಾತ್ರ ಇರುವುದು ಗೊತ್ತಾಗಿದೆ.