Breaking News

ಸುರೇಶ ಅಂಗಡಿ ನೆನೆದು ಭಾವುಕರಾದ ರಮೇಶ ಜಾರಕಿಹೊಳಿ

Spread the love

ಸುರೇಶ ಅಂಗಡಿ ನೆನೆದು ಭಾವುಕರಾದ ರಮೇಶ ಜಾರಕಿಹೊಳಿ


ಗೋಕಾಕ: ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದಲ್ಲಿ ಕಳೆದ ೯ವರ್ಷಗಳಿಂದ ಅಭಿವೃದ್ಧಿಯ ಪರ್ವ ಆರಂಭವಾಗಿದ್ದು, ಕಳೆದ ೫೦ ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದ್ದ ಗೋಕಾಕ ರೋಡ(ಕೊಣ್ಣೂರ) ರೈಲು ನಿಲ್ದಾಣ ಹೈಟೇಕ್ ಸ್ಟೇಷನ್ನಾಗಿ ಹೊರಹೊಮ್ಮಲಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ರವಿವಾರದಂದು ತಾಲೂಕಿನ ಗೋಕಾಕ ರೋಡ(ಕೊಣ್ಣೂರ) ರೈಲು ನಿಲ್ದಾಣದಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆಯಡಿ ೧೮ ಕೋಟಿ ರೂ ವೆಚ್ಚದಲ್ಲಿ ಗೋಕಾಕ ರೋಡ ರೈಲು ನಿಲ್ದಾಣ ಪುನರಾಭಿವೃದ್ಧಿ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಳೆದ ೫೦ವರ್ಷಗಳಿಂದ ಆಗದ ಅಭಿವೃದ್ಧಿ ಸದ್ಯ ಮೋದಿಯವರ ನೇತ್ರತ್ವದಲ್ಲಿ ವೇಗ ಪಡೆದುಕೊಂಡಿದೆ. ಕಾಂಗ್ರೇಸ್ ಪಕ್ಷದ ಆಡಳಿತವನ್ನು ಗಮನಿಸಿದ್ದೇನೆ ಅದರಂತೆ ಬಿಜೆಪಿ ಪಕ್ಷದ ಆಡಳಿತವನ್ನು ಗಮನಿಸಿದ್ದೇನೆ ಬಿಜೆಪಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಕಾಂಗ್ರೇಸ್ ಜಾತಿ ಜಾತಿಗಳ ನಡುವೆ ಸಂಘರ್ಷ ಬೆಳೆಸುತ್ತ ಬಂದಿದೆ. ೨೦೦೨ರಲ್ಲ ಅಮೇರಿಕಾಗೆ ತೆರಳಿದಾಗ ಭಾರತ ಪಾಸ್ ಪೋರ್ಟಎರಡೇರಡು ಗಂಟೆ ತಪಾಸಣೆ ಮಾಡುತ್ತಿದ್ದರು. ಇಂದು ಭಾರತದ ಪ್ರಜೆಗಳನ್ನು ರತ್ನಗಂಬಳಿಯಿAದ ಅತಿಥಿಗಳಂತೆ ಸ್ವಾಗತಿಸುತ್ತಿದ್ದಾರೆ. ಬಿಜೆಪಿ ದೇಶದ ಹಿತವನ್ನು ಬಯಸುವ ಪಕ್ಷ ವಿರೋಧ ಪಕ್ಷ ಬರಿ ಟೀಕೆಮಾಡಲು ಮಾತ್ರ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಹೈಟೇಕ ಸ್ಪರ್ಶ ಪಡೆಯುತ್ತಿವೆ. ಮಾಜಿ ರೈಲು ಸಚಿವ ಸ್ನೇಹಿತ ಸುರೇಶ ಅಂಗಡಿಯವರ ಕನಸು ಇಂದು ನನಸಾಗಿಗೆ. ಗೋಕಾಕ ರೋಡ ಹಾಗೂ ಘಟಪ್ರಭಾ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲು ಅವರು ಶ್ರಮವಹಿಸಿದ್ದಾರೆ ದೇವರು ಅವರ ಆತ್ಮಕ್ಕೆ ಶಾಚಿತಿ ನೀಡುವಂತೆ ಕೋರಿದ ಅವರು, ದಿ.ಸುರೇಶ ಅಂಗಡಿಯವರನ್ನು ಸ್ಮರಿಸಿ ಕಣ್ಣಿರು ಸುರಿಸಿದರು.
ಕೊಣ್ಣೂರು ಸಾವಳಗಿ ರಸ್ತೆಯ ರೈಲಗವೇ ಅಚಿಡರ್ ಬ್ರೀಡ್ಜ್ ರಸ್ತೆ ನವಿಕರಿಸಲು ಸಹ ಪ್ರಯತ್ನಿಸಬೇಕು. ರಾಜ್ಯ ಸರಕಾರದ ಗಮನಕ್ಕೆ ತರುವ ಕಾರ್ಯ ಮಾಡುತ್ತೆನೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮನ್ವಯತೆಯ ಮೂಲಕ ಅಭಿವೃದ್ಧಿ ಪಡಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ವೇದಿಕೆಯ ಮೇಲೆ ರೈಲ್ವೆ ಇಲಾಖೆಯ ಎಚ್‌ಡಿಆರ್‌ಎಮ್ ಸಂತೋಷ ವರ್ಮಾ, ಸಿಇಇ ಮೀನಾ, ಎಸಿಎಮ್ ನಿವೇದಿತಾ, ಮಹಾಂತೇಶ ವಕ್ಕುಂದ ಇದ್ದರು.


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

15 − thirteen =