Breaking News

ಸಾವಿರಾರು ದೇಶ ಪ್ರೇಮಿಗಳ ಬಲಿದಾನವನ್ನು ಕೃತ್ಞತೆಯೊಂದಿಗೆ ಸ್ಮರಿಸುವದು ನಮ್ಮ ಆದ್ಯ ಕರ್ತವ್ಯವಾಗಿದೆ- ತಹಶೀಲದಾರ ಮಂಜುನಾಥ ಕೆ.!

Spread the love

ಸಾವಿರಾರು ದೇಶ ಪ್ರೇಮಿಗಳ ಬಲಿದಾನವನ್ನು ಕೃತ್ಞತೆಯೊಂದಿಗೆ ಸ್ಮರಿಸುವದು ನಮ್ಮ ಆದ್ಯ ಕರ್ತವ್ಯವಾಗಿದೆ- ತಹಶೀಲದಾರ ಮಂಜುನಾಥ ಕೆ.!


ಗೋಕಾಕ: ಜಗತ್ತಿನಲ್ಲೇ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದಾಗಿದ್ದು, ಸ್ವಾತಂತ್ರö್ಯಕ್ಕಾಗಿ ಸಾವಿರಾರು ದೇಶ ಪ್ರೇಮಿಗಳ ಬಲಿದಾನವನ್ನು ಕೃತ್ಞತೆಯೊಂದಿಗೆ ಸ್ಮರಿಸುವದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಹಶೀಲದಾರ ಮಂಜುನಾಥ ಕೆ ಹೇಳಿದರು.
ಅವರು, ಮಂಗಳವಾರದAದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿ, ತಾಲೂಕ ಪಂಚಾಯತ, ನಗರಸಭೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ೭೬ನೇ ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ನಮಗೆ ದೊರೆತಿರುವ ಸ್ವಾತಂತ್ರö್ಯದಿAದ ನಾವಿಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಇದರ ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸ್ವಾತಂತ್ರö್ಯ ಹೋರಾಟದಲ್ಲಿ ತಾಲೂಕಿನ ಹಲವಾರು ಹೋರಾಟಗಾರರು ಪಾಲ್ಗೊಂಡಿದ್ದನ್ನು ಸ್ಮರಿಸಿದರು.
ದೇಶ ನನಗೇನು ಕೊಟ್ಟಿದೆ ಎನ್ನುವದಲ್ಲ ದೇಶಕ್ಕಾಗಿ ನಾನು ಏನು ಮಾಡಿದ್ದೇನೆ ಎಂಬುದು ಪ್ರತಿಯೊಬ್ಬರು ಪ್ರಶ್ನಿಸಿಕೊಳ್ಳಬೇಕು. ನಮ್ಮ ಧರ್ಮಗಳನ್ನು ಗೌರವಿಸಿದಂತೆ ಇತರ ಧರ್ಮಗಳನ್ನು ಗೌರವಿಸಬೇಕು. ಸಂವಿಧಾನದ ಆಶಯದಂತೆ ಕಟ್ಟ ಕಡೆಯ ವ್ಯಕ್ತಿಗೂ ಸ್ವಾಂತAತ್ರö್ಯ ಹಾಗೂ ಸ್ವಚ್ಛಂದ ಬದುಕು ನಿರ್ಮಾಣ ಮಾಡುವಂತಾಗಲು ನಾವೆಲ್ಲ ಶ್ರಮಿಸೋಣವೆಂದರು.


ವಿವಿಧ ಶಾಲೆಗಳ ಐದು ಸಾವಿರ ವಿದ್ಯಾರ್ಥಿಗಳು ರಾಷ್ಟçಗೀತೆಯನ್ನು ಹಾಡಿದ್ದು ವಿಶೇಷವಾಗಿತ್ತು.
ಇದಕ್ಕೂ ಪೂರ್ವದಲ್ಲಿ ತಹಶೀಲದಾರ ಕಾರ್ಯಾಲಯದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಾನ್ವಿತರು ಹಾಗೂ ಸಾಧಕರನ್ನು ವೇದಿಕೆಯಲ್ಲಿ ಸತ್ಕರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವೇದಿಕೆಯ ಮೇಲೆ ಡಿವೈಎಸ್‌ಪಿ ಡಿ ಎಚ್ ಮುಲ್ಲಾ, ಪೌರಾಯುಕ್ತ ಜಹೀರಅಬ್ಬಾಸ ಎಸ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ಮುಖಂಡರುಗಳಾದ ಅಶೋಕ ಪೂಜಾರಿ, ಬಿ ಆರ್ ಕೊಪ್ಪ, ಸೋಮಶೇಖರ ಮಗದುಮ, ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ನಗರಸಭೆ ಸದಸ್ಯರು, ಸಂಘಸAಸ್ಥೆಗಳ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

one × two =