ಸಿದ್ದರಾಮಯ್ಯ ಸರ್ ಕನ್ನಡಿಗನ ತಲೆ ಮೇಲೆ ₹28 ಸಾವಿರ ಸಾಲ ಹೇರಿದ್ದಾರೆ-ಶ್ರೀಮತಿ ಜ್ಯೋತಿ ಕೋಲಾರ.!
ಗೋಕಾಕ: ಅಧಿಕಾರಕ್ಕೆ ಬಂದು ಕೇವಲ ೯ತಿಂಗಳಲ್ಲಿ ₹೧,೯೩,೨೪೬ ಕೋಟಿ ಸಾಲ ಮಾಡಿದ್ದಾರೆ. ಅಂದರೆ ಪ್ರತಿಯೊಬ್ಬ ಕನ್ನಡಿಗನ ತಲೆ ಮೇಲೆ ₹೨೮ ಸಾವಿರ ಸಾಲ ಹೇರಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸರ್ ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ಲಕ್ಷಾಂತರ ಕೋಟಿ ಸಾಲ ಮಾಡಿ ಕನ್ನಡಿಗರನ್ನು ಸಂಪೂರ್ಣವಾಗಿ ಮುಳುಗಿಸಿದ್ದಾರೆ ಎಂದು ಭಾರತೀಯ ಆಹಾರ ನಿಗಮದ ಸದಸ್ಯೆ ಶ್ರೀಮತಿ ಜ್ಯೋತಿ ಕೋಲಾರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರಕಾರ ಬಿಡಿಗಾಸು ನೀಡದೆ, ಬರಗಾಲದಿಂದ ನೊಂದ ರೈತರಿಗೆ, ದೀನದಲಿತರು, ನೇಕಾರರು, ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಗಳಿಗೂ ನಿರಾಸೆ ಮೂಡಿಸಿದೆ ಈ ಸರ್ಕಾರದ ಬಜೆಟ್ ಖಂಡಿಸಲಾಗಿದೆ. ಸಾಲದ ಸುಳಿಗೆ ಕರುನಾಡು ಸಿಲುಕಿದೆ. ಕರ್ನಾಟಕ ಅಭಿವೃದ್ಧಿಯಲ್ಲಿ ೨೦ ವರ್ಷ ಹಿಂದಕ್ಕೆ ಬಿದ್ದಿದೆ. ಆರ್ಥಿಕತೆ ಹಳ್ಳ ಹಿಡಿದಿದೆ. ಸುಳ್ಳುಗಳನ್ನೆಲ್ಲ ತುಂಬಿಸಿರುವ ರೈತ ವಿರೋಧಿ ಜನ ವಿರೋಧ ಬೋಗಸ್ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ.