Breaking News

ಜಾರಕಿಹೊಳಿ ಕುಟುಂಬದಲ್ಲಿ ಮದುವೆ ಸಂಭ್ರಮ.!

Spread the love

ರಮೇಶ ಜಾರಕಿಹೊಳಿ ಅವರ ದ್ವೀತಿಯ ಸುಪುತ್ರ ಅಮರನಾಥ ಜಾರಕಿಹೊಳಿ ಅವರ ಮದುವೆ!!


ಗೋಕಾಕ: ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಮೂಢಿಸಿ, ತಮ್ಮದೆ ಆದ ಪ್ರತಿಷ್ಠೆ ಹೊಂದಿದ ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾವಿಯ ‘ಸಾಹುಕಾರ್’ ಎಂದೇ ಚಿರಪರಿಚಿತರಾದ ಇಲ್ಲಿಯ ಪ್ರತಿಷ್ಠಿತ ದೊಡ್ಡö್ಮನೆ ಜಾರಕಿಹೊಳಿ ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ ಮನೆಮಾಡಿದೆ. ಇಲ್ಲಿಯ ಜಾರಕಿಹೊಳಿ ಕುಟುಂಬದ ಹಿರಿಯ ಸದಸ್ಯ, ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ದ್ವೀತಿಯ ಸುಪುತ್ರ ಹಾಗೂ ಕೆಎಮ್‌ಎಫ್ ನಿರ್ದೇಶಕರಾಗಿದ್ದ ಅಮರನಾಥ ಜಾರಕಿಹೊಳಿ ಅವರ ವಿವಾಹ ಸಮಾರಂಭ, ಅಕ್ಷತಾರೋಪಣ ಕಾರ್ಯಕ್ರಮ ಇದೇ ದಿ.೨೬ ರಂದು ಸೋಮವಾರ ಘಟಪ್ರಭಾ ರಸ್ತೆಯಲ್ಲಿರುವ ಬಸವೇಶ್ವರ ಕಲ್ಯಾಣ ಮಂಟಪದ ವಿಶಾಲ ಆವರಣದಲ್ಲಿ ನಡೆಯಲಿದೆ.


ಮದುವೆಯ ಆಮಂತ್ರಣ ಪತ್ರಿಕೆ ನೋಡಿದರೆ ಸಾಕು ದೊಡ್ಡö್ಮನೆ ಹುಡುಗನ ಮದುವೆ ಎಷ್ಟೊಂದು ಅದ್ದೂರಿಯಾಗಿ ನಡೆಯಲಿದೆ ಎಂಬುವದನ್ನು ಕೇವಲ ಕಲ್ಪನೆ ಮಾಡಿಕೊಳ್ಳಿರಿ.! ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ಶಾಸಕರಾಗಿದ್ದರು ಆಡಳಿತಾರೂಢ ಕಾಂಗ್ರೇಸ್ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಆದಿಯಾಗಿ ಮಂತ್ರಿ ಮಹೋದಯರು, ಶಾಸಕರು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಅಲ್ಲದೇ ರಾಜ್ಯ ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಆರ್ ಅಶೋಕ ಸೇರಿದಂತೆ ಬಿಜೆಪಿ ಶಾಸಕರ ದಂಡು ಈ ಗೋಕಾವಿಯ ದೊಡ್ಡö್ಮನೆ ಹುಡುಗನ ಮದುವೆಯಲ್ಲಿ ಪಾಲ್ಗೋಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.


ಈ ಹಿಂದಿನಿAದಲೂ ದೊಡ್ಡö್ಮನೆ ಜಾರಕಿಹೊಳಿ ಕುಟುಂಬದ ಸಹೋದರರ ಕರೆಗೆ ಓಗೊಟ್ಟು ಜನಸಾಗರವೇ ಹರಿದು ಬರುತ್ತದೆ. ಗೋಕಾಕ ತಾಲೂಕಿನ ಎಲ್ಲ ಜನತೆಯ ಸುಖ ದು:ಖಗಳಲ್ಲಿ ಒಂದಾಗುತ್ತಾ, ಜನತೆಯ ಸಮಸ್ಯೆಗೆ ಸ್ಫಂದಿಸುತ್ತಾ ಬಂದಿರುವ ಜಾರಕಿಹೊಳಿ ಮನೆತನದ ನಾಲ್ವರು ಸದಸ್ಯರ ಪೈಕಿ ಒರ್ವರು ರಾಜ್ಯ ಸರ್ಕಾರದ ಸಚಿವರಾಗಿದ್ದು ಮೂವರು ಶಾಸಕರಾಗಿದ್ದು ಯಾವುದೇ ಸರಕಾರ ಬಂದರು ಜಾರಕಿಹೊಳಿ ಮನೆತನದ ಓರ್ವರು ಸಚಿವ ಸಂಪುಟದ ಮಂತ್ರಿ ಪದವಿ ಗಿಟ್ಟಿಸಿರುವದನ್ನು ಇಲ್ಲಿ ಸ್ಮರಿಸಬಹುದು. ಹೀಗಾಗಿ ದೊಡ್ಡö್ಮನೆ ಹುಡುಗನ ಮದುವೆಗೆ ಜನಸಾಗರ ಹರಿದು ಬರುವದರಲ್ಲಿ ಸಂದೇಹವೆ ಇಲ್ಲ. ಗೋಕಾವಿ ದೊಡ್ಡö್ಮನೆ ಕುಟುಂಬದ ಸುಪುತ್ರನ ಮದುವೆ ನಡೆಯುತ್ತಿರುವ ಹಿನ್ನಲೆಯಲ್ಲಿ ಗೋಕಾವಿ ನಾಡಿನ ನಗರ, ಪಟ್ಟಣ, ಪ್ರತಿಹಳ್ಳಿಗಳಲ್ಲಿಯ ಮನೆಗಳಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಅಷ್ಟೇ ಅಲ್ಲದೇ ಮದುವೆಗೆ ಆಗಮಿಸಿದ ಅತಿಥಿ ಮಹೋದಯರಿಗೆ ವಿವಿಧ ತರಹದ ಸಿಹಿ ತಿಂಡಿ ತಿನಿಸುಗಳನ್ನು ತಯಾರಿಸಲು ರಾಜ್ಯ ಹಾಗೂ ಹೊರರಾಜ್ಯಗಳಿಂದÀ ಅಡುಗೆ ಭಟ್ಟರು ಕರದಂಟೂರಿಗೆ ಆಗಮಿಸಿದ್ದಾರೆ.


ಘಟಪ್ರಭಾ ರಸ್ತೆಯಲ್ಲಿರುವ ಬಸವೇಶ್ವರ ಕಲ್ಯಾಣ ಮಂಟಪ ಅರಮನೆಯಂತೆ ಸಿಂಗಾರಗೊಳ್ಳುತ್ತಿದ್ದು, ಕಲ್ಯಾಣ ಮಂಟಪದ ಪಕ್ಕದಲ್ಲೇ ಮದುವೆಗೆ ಬರುವ ಗಣ್ಯರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮದುವೆ ಸಮಾರಂಭಕ್ಕೆ ಜಾರಕಿಹೊಳಿ ಸಹೋದರರಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಪ್ರತಿ ಮನೆ ಮನೆಗಳಿಗೆ ಆಹ್ವಾನ ನೀಡಿದ್ದು, ಬರುವ ಜನರಿಗೆ ವಾಹನ ಪಾರ್ಕಿಂಗ್ ಸೌಲಭ್ಯ, ಭೂರಿ ಭೋಜನ ಸವಿಯಲು ಕಲ್ಯಾಣ ಮಂಟಪದ ಮುಂಭಾಗದಲ್ಲಿ ಶಾಮಿಯಾನ ಹಾಕಲಾಗಿದೆ. ಗೋಕಾಕ ನಗರದಾಧ್ಯಂತ ಜಾರಕಿಹೊಳಿ ಕುಟುಂಬದ ಮದುವೆ ಕರೆಯೊಲೆಯ ಬ್ಯಾನರ್‌ಗಳು ರಾರಾಜಿಸುತ್ತಿವೆ.


Spread the love

About Yuva Bharatha

Check Also

ನುಡಿದಂತೆ ನಡೆದ ಸಾಹುಕಾರ ರಮೇಶ ಜಾರಕಿಹೊಳಿ ಮಹಾಲಕ್ಷಿö್ಮÃ ಬ್ಯಾಂಕ ಗ್ರಾಹಕರಿಗೆ ತಲುಪಿದ ಹಣ.!

Spread the loveನುಡಿದಂತೆ ನಡೆದ ಸಾಹುಕಾರ ರಮೇಶ ಜಾರಕಿಹೊಳಿ ಮಹಾಲಕ್ಷಿö್ಮÃ ಬ್ಯಾಂಕ ಗ್ರಾಹಕರಿಗೆ ತಲುಪಿದ ಹಣ.! ಗೋಕಾಕ: ಇಲ್ಲಿಯ ಮಹಾಲಕ್ಷಿö್ಮÃ …

Leave a Reply

Your email address will not be published. Required fields are marked *

sixteen − 13 =