ಬಿಜೆಪಿ ಪಕ್ಷ ಹೊಂದಿರುವ ಕಾರ್ಯಕರ್ತರನ್ನು ದೇಶದಲ್ಲಿ ಬೇರೆ ಯಾವುದೇ ಪಕ್ಷಗಳು ಹೊಂದಿಲ್ಲ- ರಾಜೇಂದ್ರ ಗೌಡಪ್ಪಗೋಳ.!
ಗೋಕಾಕ: ಪ್ರಧಾನಿ ನರೇಂದ್ರ ಮೋದಿಯವರು ಸೆ.೨ರಂದು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿನ ೪೫ ದಿನಗಳಲ್ಲಿ ದೇಶದಲ್ಲಿ ೧೦ಕೋಟಿ ಸದಸ್ಯರನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ನೋಂದಾಯಿಸಿಕೊAಡಿದ್ದು, ರಾಜ್ಯದಲ್ಲೂ ೬೫ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು.
ಅವರು, ಗುರುವಾರದಂದು ನಗರದ ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲ ವತಿಯಿಂದ ಹಮ್ಮಿಕೊಂಡ ಮಂಡಲ ಮಟ್ಟದ ಬಿಜೆಪಿ ಸಂಘಟನಾ ಪರ್ವ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ಪಕ್ಷ ಹೊಂದಿರುವ ಕಾರ್ಯಕರ್ತರನ್ನು ದೇಶದಲ್ಲಿ ಬೇರೆ ಯಾವುದೇ ರಾಷ್ಟಿçÃಯ ಪಕ್ಷಗಳು ಹೊಂದಿಲ್ಲ ಅಲ್ಲದೇ ಇಷ್ಟೊಂದು ವ್ಯವಸ್ಥಿತ, ಕ್ರಮಬದ್ಧವಾದ ಸಂಘಟನಾತ್ಮಕ ಚಿಂತನೆ ಇಲ್ಲ ಹೀಗಾಗಿ ಇನ್ನು ಹೆಚ್ಚೆಚ್ಚು ಕಾರ್ಯಕರ್ತರನ್ನು ಬಿಜೆಪಿ ಪಕ್ಷದತ್ತ ಮುಖಮಾಡಲು ಎಲ್ಲರು ಶ್ರಮಿಸೋಣ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸೋಣ ಎಂದು ತಿಳಿಸಿದರು.
ಬಿಜೆಪಿ ರಾಷ್ಟಿçÃಯ ಕರ‍್ಯಕಾರಿಣಿ ಸದಸ್ಯ ಲಕ್ಷö್ಮಣ ತಪಸಿ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷದ ಸಾಧನೆಗಳನ್ನು ಮನೆ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಬೇಕು. ಬರುವ ನ.೩೦ರ ಒಳಗಾಗಿ ಪೇಜ್ ಪ್ರಮುಖರು, ಬೂತ್ ಅಧ್ಯಕ್ಷರು, ಬೂತ್ ಸಮೀತಿಗೆ ಹೊಸದಾಗಿ ನೇಮಕಮಾಡಿ ಪಕ್ಷದ ಸಂಘಟನೆ ಒತ್ತು ನೀಡುವಂತೆ ಕರೆ ನೀಡಿದರು.
ಕಾರ್ಯಾಗಾರದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಯುವನಾಯಕ ಅಮರನಾಥ ಜಾರಕಿಹೊಳಿ, ಮುಖಂಡರಾದ ಪ್ರಮೋದ ಜೋಶಿ, ಶಶಿಧರ ದೇಮಶೆಟ್ಟಿ, ಶಕೀಲ ಧಾರವಾಡಕರ, ರಾಜೇಶ್ವರಿ ಒಡೆಯರ, ವಿರೇಂದ್ರ ಎಕ್ಕೇರಿಮಠ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.