Breaking News

ಪಶ್ಚಿಮ ಬಂಗಳಾದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಖಂಡಿಸಿ ನಗರದ ವಿವಿಧ ಮಹಿಳಾ ಮಂಡಳಗಳ ಪದಾಧಿಕಾರಿಗಳಿಂದ ಪ್ರತಿಭಟನೆ.!

Spread the love

ಪಶ್ಚಿಮ ಬಂಗಳಾದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಖಂಡಿಸಿ ನಗರದ ವಿವಿಧ ಮಹಿಳಾ ಮಂಡಳಗಳ ಪದಾಧಿಕಾರಿಗಳಿಂದ ಪ್ರತಿಭಟನೆ.!

ಗೋಕಾಕ: ಪಶ್ಚಿಮ ಬಂಗಳಾದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಮತ್ತು ಅಂಸAಸ್ಕೃತಿಯ ಅರ್ವತನೆ ಖಂಡಿಸಿ ನಗರದ ವಿವಿಧ ಮಹಿಳಾ ಮಂಡಳಗಳ ಪದಾಧಿಕಾರಿಗಳು ಶುಕ್ರವಾರದಂದು ನಗರದ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೇರವಣಿಗೆ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲದಾರ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮತ್ತು ಉತ್ತರ ದಿನಾಜ್‌ಪುರದಲ್ಲಿ ಮಹಿಳೆಯರ ಮೇಲೆ ನಡೆದ ಘಟನೆಯಿಂದ ನಾವೆಲ್ಲ ತುಂಬಾ ದುಃಖಿತರಾಗಿದ್ದೇವೆ. ದಿನೇ ದಿನೇ ಹದಗೆಡುತ್ತಿರುವ ಮಹಿಳೆಯರ ಸ್ಥಿತಿ ಗಂಭೀರ ಮತ್ತು ಕಳವಳಕಾರಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕೇವಲ ನಿಗಂಟುಗಳಿಗೆ ಸೀಮಿತವಾದಂತೆ ತೋರುತ್ತಿದೆ. ಅಮಾಯಕ ನಾಗರಿಕರು ಮತ್ತು ಮಹಿಳೆಯರ ಶೋಷಣೆ ಸಂಪೂರ್ಣವಾಗಿ ನಿಲ್ಲಬೇಕು. ಭಾರತೀಯ ಸಂವಿಧಾನವನ್ನು ಉಲ್ಲಂಘಿಸುವ ಈ ಘಟನೆಗಳು ತಾಲಿಬಾನ ಆಡಳಿತವನ್ನು ನಮಗೆ ನೆನಪಿಸುತ್ತವೆ. ಇಂತಹ ಘಟನೆಗಳ ವಿರುದ್ಧ ಕಠೀಣ ಕ್ರಮ ಜರುಗಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ರಾಷ್ಟç ಸೇವಿಕಾ ಸಮೀತಿ, ಶ್ರೀ ಮಾತಾ ಭಜನಾ ಮಂಡಳ, ಇನ್ನರ್ ವ್ಹೀಲ್ ಸಂಸ್ಥೆ, ಜೆಸಿಐ, ಓಂ ಕ್ರೇಸಿಟಿಕ್ ಸಂಸ್ಥೆ, ಶ್ರೀ ಅಂಭಾಭವಾನಿ ಸ್ವಸಹಾಯ ಸಂಘ, ಸಿರಿಗನ್ನಡ ಮಹಿಳಾ ವೇದಿಕೆ, ಬಜರಂಗದಳ ಮಾತೃಶಕ್ತಿ ವೇದಿಕೆ, ಓಂ ಸಾಯಿ ಫೌಂಡೇಶನ, ಕನ್ನಡ ಸ್ವಸಹಾಯ ಒಕ್ಕೂಟ ಸೇರಿದಂತೆ ಹಲವಾರು ಸಂಘಗಳು ಪಾಲ್ಗೊಂಡಿದ್ದವು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಅನುಪಾ ಕೌಶಿಕ, ಜಯಾ ಕಮತ, ಸಂಗೀತಾ ಬನ್ನೂರ, ಭಾಗಿರಥಿ ನಂದಗಾವಿ, ಸೌಜನ್ಯ ಚಿಪ್ಪಲಕಟ್ಟಿ, ನಿವೇದಿತಾ ಕಾಳೆ, ಎ ಮುಕ್ತಾ, ಶರ್ಮಿಳಾ ಜುಗಳಿ, ರಾಜೇಶ್ವರಿ ಕಲಬುರ್ಗಿ, ಸುಶೀಲಾ ಹಿತ್ತಲಮನಿ, ಸುಧಾ ಮಠಪತಿ, ಜಯಶ್ರೀ ಹೊನಕುಪ್ಪಿ, ರೇಣುಕಾ ಶಮನವಾಡಿ, ವಿಜಯಲಕ್ಷಿö್ಮÃ ರಣಸುಭೆ, ವಿದ್ಯಾ ಚೌಧರಿ, ಜ್ಯೋತಿ ವರದಾಯಿ, ಸಂಜು ಚಿಪ್ಪಲಕಟ್ಟಿ, ವಿಕಾಸ ನಾಯಿಕ, ರಘುರಾಮ ಸುಭಂಜಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.!

Spread the loveಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.! ಗೋಕಾಕ: ಮಕ್ಕಳ ವ್ಯಕ್ತಿತ್ವ …

Leave a Reply

Your email address will not be published. Required fields are marked *

two × 1 =