Breaking News

ಸಾರ್ವಜನಿಕ ಆಸ್ಪತ್ರೆಯ ಬ್ಲಡ್ ಬ್ಯಾಂಕ ಉದ್ಘಾಟನೆ ನೆರವೇರಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!

Spread the love

ಸಾರ್ವಜನಿಕ ಆಸ್ಪತ್ರೆಯ ಬ್ಲಡ್ ಬ್ಯಾಂಕ ಉದ್ಘಾಟನೆ ನೆರವೇರಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!

ಗೋಕಾಕ: ಇಲ್ಲಿಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರಾಕೇಟ್ ರಿದ್ದಿಸಿದ್ದಿ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ಅವರು ಕೊಡಮಾಡಿದ ಹೈಟೆಕ್ ಪರಿಕರ ಹೊಂದಿದ ರಕ್ತ ಭಂಡಾರವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮಾತನಾಡಿ, ರಾಕೇಟ್ ರಿದ್ದಿಸಿದ್ದಿ ಸಂಸ್ಥೆಯ ಕಳೆದ ಹಲವು ವರ್ಷಗಳಿಂದ ನಗರದ ಸಾರ್ವಜನಿಕ ಆಸ್ಪತ್ರೆಗೆ ಹಲವಾರು ರೀತಿಯ ವೈದ್ಯಕೀಯ ಪರಿಕರಗಳನ್ನು ನೀಡುತ್ತ ಬಂದಿದೆ. ಈ ಬಾರಿ ಲಕ್ಷಾಂತರ ರೂಪಾಯಿ ವೆಚ್ಚದ ರಕ್ತ ಭಂಡಾರ(ಬ್ಲಡ್ ಬ್ಯಾಂಕ) ಪರಿಕರಗಳನ್ನು ನೀಡಿದ್ದು ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದ ಅವರು, ಬಡ ರೋಗಿಗಳ ಆರೋಗ್ಯ ಸೇವೆ ನೀಡುತ್ತಿರುವ ಕಾರ್ಖಾನೆಯ ಆಡಳಿತ ಮಂಡಳಿಯವರನ್ನು ಅಭಿನಂಧಿಸಿದರು.

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ರಾಕೇಟ್ ರಿದ್ದಿಸಿದ್ದಿ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ಅಧಿಕಾರಿ ವರ್ಗದವರನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ರವೀಂದ್ರ ಅಂಟಿನ ಸತ್ಕರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಡಿಎಚ್‌ಓ ಎಸ್ ಎಸ್ ಗಡ್ಡೇದ, ತಹಶಿಲ್ದಾರ ಡಾ.ಮೋಹನ ಭಸ್ಮೆ, ತಾಲೂಕು ವೈದ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ, ರಾಕೇಟ್ ರಿದ್ದಿಸಿದ್ದಿ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ಅಧಿಕಾರಿಗಳಾದ ರೋಹಿತ ಮಸ್ಕಾನ, ವಿರೇಂದ್ರ, ರಾಜಶೇಖರ, ಎಸ್ ಮನಿವಣ್ಣನ, ಜ್ಯೋತಿ ತ್ರೀಪಾಟಿ, ಹರೀಶ ಬಾಲಾಜಿ, ವೈದ್ಯರುಗಳಾದ ಡಾ.ಪಿ ಶಾಂತ, ಡಾ.ಕಿರಣ ಇದ್ದರು.


Spread the love

About Yuva Bharatha

Check Also

ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು …

Leave a Reply

Your email address will not be published. Required fields are marked *

20 − 10 =