ಕಪರಟ್ಟಿ-ಕಳ್ಳಿಗುದ್ದಿ ಪವಾಡ ಪುರುಷ ಗುರು ಮಹಾದೇವ ಅಜಯ್ಯನವರ 87ನೇ ಜಯಂತಿ!!
ಯುವ ಭಾರತ ಸುದ್ದಿ ಗೋಕಾಕ: ಕಪರಟ್ಟಿ ಕಳ್ಳಿಗುದ್ದಿ ಪವಾಡ ಪುರುಷ ಗುರು ಮಹಾದೇವ ಅಜಯ್ಯನವರ ೮೭ನೇ ಜಯಂತಿ ಹಾಗೂ 21ನೇ ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಜ.1ರಿಂದ 2ರ ವರೆಗೆ ಸಮೀಪದ ಶಿಂಗಳಾಪೂರ ಬಂಗ್ಲೆಯ ಶ್ರೀ ಗುರು ಮಹಾದೇವಾಶ್ರಮದಲ್ಲಿ ಜರುಗಲಿದೆ.
ದಿ.1ರಂದು ಮುನವಳ್ಳಿಯ ಶ್ರೀಗಳಿಗೆ ಕಾಯಕಯೋಗಿ ಪ್ರಶಸ್ತಿ ಹಾಗೂ ಸಂಸದ ಜಗದೀಶ ಶೆಟ್ಟರ ಅವರಿಗೆ ಕನ್ನಡಜ್ಯೋತಿ ಪ್ರಶಸ್ತಿ ಪ್ರಧಾನ, ಶರಣ ದಂಪತಿಗಳಿಗೆ ಸತ್ಕಾರ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಮುರಗೊಡದ ಶ್ರೀ ನೀಲಕಂಠ ಮಹಾಸ್ವಾಮಿಗಳು, ಅಂಕಲಗಿ-ಕು0ದರಗಿಯ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು, ಕಪರಟ್ಟಿ ಕಳ್ಳಿಗುದ್ದಿ ಶ್ರೀ ಬಸವರಾಜ ಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಶಾಸಕ ರಮೇಶ ಜಾರಕಿಹೊಳಿ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಚಲನಚಿತ್ರ ನಿರ್ಮಾಪಕ ಕಿಶೋರ ಭಟ್ಟ, ಅಂಜುಮನ ಕಮೀಟಿ ಅಧ್ಯಕ್ಷ ಜಾವೇದ ಗೋಕಾಕ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.
ದಿ.2ರಂದು ಮಂಗಳೂರಿನ ಶ್ರೀಗಳಿಗೆ ಕಾಯಕಯೋಗಿ ಪ್ರಶಸ್ತಿ ಹಾಗೂ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರಿಗೆ ಕನ್ನಡ ಜ್ಯೋತಿ ಪ್ರಶಸ್ತಿ ಪ್ರಧಾನ, 108ಜನ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿವೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಪರಟ್ಟಿ ಕಳ್ಳಿಗುದ್ದಿ ಶ್ರೀ ಬಸವರಾಜ ಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶ್ರೀ ಗುರು ಮಹಾದೇವಾಶ್ರಮದ ಕಮೀಟಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.