Breaking News
????????????????????????????????????

ತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!!

Spread the love

ತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!!

 

ಗೋಕಾಕ: ಭಾರತೀಯ ಸಂಸ್ಕೃತಿಗೆ ಜಾಗತಿಕ ಮನ್ನಣೆ ಇದ್ದು. ಆ ಪರಂಪರೆಯನ್ನು ನಾವೆಲ್ಲರು ಮುಂದುವರೆಸೋಣ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು.
ಅವರು, ಬುಧವರಾದಂದು ಸಮೀಪದ ಶಿಂಗಳಾಪೂರ ಬಂಗ್ಲೆಯ ಶ್ರೀ ಗುರು ಮಹದೇವಾಶ್ರಮದಲ್ಲಿ ಕಪರಟ್ಟಿ-ಕಳ್ಳಿಗುದ್ದಿಯ ಪವಾಡ ಪುರುಷ ಶ್ರೀ ಗುರುಮಹಾದೇವ ಅಜ್ಜನವರ ೮೭ನೇ ಜಯಂತಿ ಹಾಗೂ ಕಾಯಕಯೋಗಿ ಮತ್ತು ಕನ್ನಡ ಜ್ಯೋತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ ಜ್ಯೋತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.

ಗೋಕಾಕ ಪ್ರಶಸ್ತಿ ಸ್ವೀಕರಿಸುತ್ತಿರುವ ಸ್ವಾಮಿಜಿಗಳು ಹಾಗೂ ಸಂಸದ ಜಗದೀಶ ಶೆಟ್ಟರ.

ಶ್ರೇಷ್ಠವಾದ ನಮ್ಮ ಸಂಸ್ಕೃತಿಯನ್ನು ಧಾರ್ಮಿಕ ಕರ‍್ಯಗಳನ್ನು ಹೆಚ್ಚೆಚ್ಚು ಆಚರಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ನೀಡೋಣ. ತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಯಕಯೋಗಿ ಪ್ರಶಸ್ತಿಯನ್ನು ಮಂಗಳೂರಿನ ಶ್ರೀ ವಿದ್ಯಾನಂದ ಸರಸ್ವತಿ ಮಹಾಸ್ವಾಮಿಗಳು ಹಾಗೂ ಮುನವಳ್ಳಿಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಪ್ರಧಾನ ಮಾಡಿ ಗೌರವಿಸಲಾಯಿತು. ೧೦೮ ಮಾಜಿ ಸೈನಿಕರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಹುಕ್ಕೇರಿಯ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು, ಮರಡಿಮಠದ ಶ್ರೀ ಪವಾಡೇಶ್ವರ ಮಹಾಸ್ವಾಮಿಗಳು ವೇದಿಕೆಯ ಮೇಲೆ ಹೊಸಯರಗುದ್ರಿಯ ಶ್ರೀ ಸಿದ್ಧಪ್ರಭು ಶಿವಾಚಾರ್ಯ ಸ್ವಾಮಿಗಳು, ಕಪರಟ್ಟಿ-ಕಳ್ಳಿಗುದ್ದಿಯ ಶ್ರೀ ಬಸವರಾಜ ಸ್ವಾಮಿಗಳು, ಮಾಜಿ ಶಾಸಕ ಎಮ್ ಎಲ್ ಮುತ್ತೇನ್ನವರ, ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸುಭಾಸ ಪಾಟೀಲ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಮುಖಂಡರಾದ ಮಲ್ಲಿಕಾರ್ಜುನ ಈಟಿ ಸೇರಿದಂತೆ ಇತರರು ಇದ್ದರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

4 × three =