ಗಂಡನಿಗೆ ಕೈ ಕೋಟ್ಟು ಪ್ರೇಮಿ ಜೊತ್ತೆ ಪರಾರಿ ಆದ ಬೆರಕಿ ಪತ್ನಿ!
ಬೆಳಗಾವಿ :ಹೌದು ಬೆಳಗಾವಿಯ ಮಾರೀಹಾಳ್ ಗ್ರಾಮದಲ್ಲಿ ಗಂಡನಿಗೆ ಕೈ ಕೊಟ್ಟು ಪತ್ನಿಯೊಬ್ಬಳು ಪರಾರಿಯಾದ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಗಂಡ ಆಸೀಫ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪತ್ನಿ ಹೋಗುವಾಗ ಸಿಲೆಂಡರ್, ಕಾರು, 60 ಗ್ರಾಂ ಚಿನ್ನ ಹಾಗೂ 5 ಲಕ್ಷ ನಗದು ಕೊಂಡೊಯ್ದಿದ್ದಾಳೆ. ಹೀಗಾಗಿ ಪತ್ನಿಯೂ ಇಲ್ಲ ಇತ್ತ ಮನೆಯ ವಸ್ತು ಸಹ ಇಲ್ಲ ಎಂಬಂತಾಗಿದೆ ಪತಿಯ ಪರಿಸ್ಥಿತಿ ನಂದಗಡ ನಿವಾಸಿಯಾಗಿರುವ ಆಸೀಫ್ ಅವರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಮನೆಯಲ್ಲಿ 5 ಲಕ್ಷ ರೂ. ತೆಗೆದಿಟ್ಟಿದ್ದರು. ಅದನ್ನು ಸಹ ಪತ್ನಿ ತೆಗೆದುಕೊಂಡು ಹೋಗಿದ್ದಾಳೆ. ನಂದಗಡದಲ್ಲಿ ಒಂದು ಗುಂಟೆ ಜಾಗ ಖರೀದಿಸಿದ್ದೇನೆ.
ಆದರೆ, ನಾನು ಡ್ರೈವರ್ ಆಗಿರುವ ಕಾರಣ ನನ್ನ ಜೀವನಕ್ಕೆ ಭರವಸೆ ಇಲ್ಲ. ಹೀಗಾಗಿ ಮಕ್ಕಳ ಸಲುವಾಗಿ ಅದನ್ನು ಸಹ ಆಕೆಯ ಹೆಸರಿಗೆ ಖರೀದಿ ಮಾಡಿ ಇಟ್ಟಿದ್ದೆ. ಆದರೆ ಈಗ ಆಕೆ ತನ್ನ ಮಕ್ಕಳೊಂದಿಗೆ ಪರಾರಿಯಾಗಿದ್ದಾಳೆ. ಬೆಳಗಾವಿ ತಾಲೂಕು ಬಿ.ಕೆ. ಬಾಳೆಕುಂದ್ರಿಯಲ್ಲೂ ನನ್ನ ಜಾಗ ಇದೆ. ತಕ್ಷಣವೇ ಪೊಲೀಸರು ಪತ್ನಿಯನ್ನು ಹುಡುಕಿ ಕೊಡಿ ಎಂದು ಅವರು ಮಾರಿಹಾಳ ಪೊಲೀಸರಿಗೆ ಜ.2 ರಂದು ದೂರು ನೀಡಿದ್ದಾರೆ
YuvaBharataha Latest Kannada News