ನಮ್ಮಲ್ಲಿ ಜಗಳ ಇರೋದು ಅಧ್ಯಕ್ಷರ ಬದಲಾವಣೆಗೆ ಅಷ್ಟೆ ಇಲ್ಲವಾದ್ರೂ ಪಕ್ಷ ಸಂಘಟನೆ ಮಾಡ್ತೀವಿ.-ಶಾಸಕ ರಮೇಶ ಜಾರಕಿಹೊಳಿ.!
ಗೋಕಾಕ: ಗ್ಯಾರಂಟಿ ಹೆಸರಿನಲ್ಲಿ ಟ್ಯಾಕ್ಸ್ ಡಬಲ್ ಮಾಡಿ ಎರಡು ಪಟ್ಟು ಹಣ ಪಡೆಯುತ್ತಿದ್ದೀರಿ. ಹೀಗೆ ಪಡೆದ ಹಣವನ್ನ ಕಾಂಗ್ರೆಸ್ ಹೈಕಮಾಂಡ್‌ಗೆ ಕಳುಹಿಸುತ್ತಿದೀರಿ. ಗ್ಯಾರಂಟಿ ಸ್ಕೀಂಗೆ ಎಪ್ಪತ್ತು ಸಾವಿರ ಕೋಟಿ ಖರ್ಚಾಗುತ್ತೆ. ಈ ದುಡ್ಡು ಎಲ್ಲಿ ಹೋಗ್ತಿದೆ ಅನ್ನೋದು ಗೊತ್ತಾಗಬೇಕಿದೆ. ಈ ಹಣ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಪರಿವರ್ತನೆ ಮಾಡಿಕೊಂಡಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಸರಕಾರ ವಿರುದ್ಧ ಹರಿಹಾಯ್ದರು.
ಅವರು, ಶನಿವಾರದಂದು ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡ ಗೋಕಾಕ ಮತಕ್ಷೇತ್ರದ ಆಧುನಿಕ ಭಗೀರಥ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಗ್ಯಾರಂಟಿ ಸ್ಕೀಂನಿAದ ರಾಜ್ಯ ಹಿಂದುಳಿಯುತ್ತೆ ಅನ್ನೋದು ತಪ್ಪು ಕಲ್ಪನೆ. ಸಿದ್ದರಾಮಯ್ಯ ನವರು ಇದರ ಎರಡು ಪಟ್ಟು ಟ್ಯಾಕ್ಸ್ ಏರಿಸಿದ್ದಾರೆ. ಗ್ಯಾರಂಟಿಯಿAದ ಅಭಿವೃದ್ಧಿ ಕುಂಠಿತ ಆಗುತ್ತೆ ಅನ್ನೋದು ಸುಳ್ಳು. ನಮ್ಮ ಪಕ್ಷದಲ್ಲಿನ ಆಂತರಿಕ ಜಗಳ ಪಕ್ಷಕ್ಕೆ ಮುಳುವಾಗುವುದಿಲ್ಲ. ಪಕ್ಷ ಸಂಘಟನೆ ಬಂದಾಗ ನಾವೆಲ್ಲಾ ಒಂದಾಗುತ್ತೇವೆ. ಮತ್ತೆ ರಾಜ್ಯದಲ್ಲಿ ನಮ್ಮ ಜೇಂಡಾ ಏರಿಸುತ್ತೇವೆ. ಕಾಂಗ್ರೇಸ್ ಪಕ್ಷದವರು ಮುಸ್ಲಿಂ, ಎಸ್ಸಿ, ಎಸ್ಟಿ ಯವರನ್ನ ಹೆದರಿಸಿ ವೋಟ್ ಬ್ಯಾಂಕ್ ಮಾಡ್ಕೊಂಡಿದ್ದಾರೆ. ಜಾತಿ ಗಣತಿ ಯಾವಾಗಲೋ ಬರಬೇಕಿತ್ತು. ಈ ಹಿಂದೆ ಸಿದ್ದರಾಮಯ್ಯ ಸಿಎಂ ಇದ್ದಾಗ ಯಾಕೆ ಜಾತಿ ಗಣತಿ ಬಿಡುಗಡೆ ಮಾಡಲಿಲ್ಲ. ಈಗ ಯಾಕೆ ಜಾತಿ ಗಣತಿ ಬಗ್ಗೆ ಮಾತಾಡ್ತಿದ್ದಾರೆ. ಹಿಂದುಳಿದ ನಾಯಕರಾಗಿ ಸಿದ್ದರಾಮಯ್ಯ ಉಳಿದಿಲ್ಲ. ಸಿದ್ದರಾಮಯ್ಯ ಶಕ್ತಿ ಕುಂದಿದೆ. ಸಿದ್ದರಾಮಯ್ಯ ರಾಜ್ಯದ ಹಿತದೃಷ್ಟಿಯಿಂದ ನೀವು ಮೊದಲಿನ ಸಿಎಂ ರಂತೆ ಘರ್ಜನೆ ಮಾಡಬೇಕು. ಕನಕಪುರದ ಮನುಷ್ಯ ಘರ್ಜನೆ ಮಾಡಿದ್ರೇ ಸಿದ್ದರಾಮಯ್ಯನವರೆ ನೀವು ಹೆದರುತ್ತಿರಿ. ನೀವು ಎಸ್ಸಿ, ಎಸ್ಟಿ ಅವರಿಗೆ ಹೆದರಿಸುದನ್ನ ಬಿಡಿ ಎಂದರು.
ಜಾತಿ ಗಣತಿ ಬಿಡುಗಡೆ ಬಗ್ಗೆ ನಮ್ಮ ಪಕ್ಷದ ನಿಲುವು ಏನೇ ಆಗಿರಲಿ. ವೈಯಕ್ತಿಕವಾಗಿ ಜಾತಿ ಗಣತಿಪರವಾಗಿದ್ದೇನೆ. ಸಿದ್ಧರಾಮಯ್ಯ ಏಕೆ ಜಾತಿಗಣತಿ ಜಾರಿಗೆ ಹಿಂದೇಟು ಹಾಕುತ್ತಿದ್ದಾರೆ. ಡಿಕೆಶಿ ಸೇರಿ ಅಲ್ಲಿರುವ ನಾಯಕರಿಗೆ ಹೆದರಿ ಹಿಂದೇಟು ಹಾಕುತ್ತಿದ್ದಾರೆ ಸಿದ್ಧರಾಮಯ್ಯ ಬಗ್ಗೆ ಗೌರವ ಇದೆ. ಸಿದ್ಧರಾಮಯ್ಯ ಅಹಿಂದ ನಾಯಕರಾಗಿ ಉಳಿದಿಲ್ಲ ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿ ಮೊದಲಿನ ಸಿಎಂ ಆಗಿ ಸಿದ್ಧರಾಮಯ್ಯ ಗರ್ಜಿಸಬೇಕು ಅಹಿಂದ ನಾಯಕರಾಗಿಯೇ ಉಳಿದು ಆಡಳಿತ ಮಾಡಿ ನಿವೃತ್ತಿಯಾಗಬೇಕು ಎಂದು ಸಲಹೆ ನೀಡಿದರು.
ನಮ್ಮಲ್ಲಿ ಜಗಳ ಇರೋದು ಅಧ್ಯಕ್ಷರ ಬದಲಾವಣೆಗೆ ಅಷ್ಟೆ ಅಧ್ಯಕ್ಷ ಚೇಂಜ್ ಆದ್ರೇ ಓಕೆ ಇಲ್ಲವಾದ್ರೂ ಪಕ್ಷ ಸಂಘಟನೆ ಮಾಡ್ತೀವಿ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯವಿಲ್ಲ. ಇಂದಿಗೂ ಯಡಿಯೂರಪ್ಪ ನಮ್ಮ ನಾಯಕ ಅದರಲ್ಲಿ ಎರಡು ಮಾತಿಲ್ಲ. ಇಂದಿಗೂ ನಾನು ಯಡಿಯೂರಪ್ಪ ಮೇಲೆ ಅಗೌರವದಿಂದ ಎಂದು ಮಾತಾಡಿಲ್ಲ. ಅವರ ಮೇಲೆ ಗೌರವ ಇದೆ. ಆದ್ರೇ ನೀನು ಸುಳ್ಳು ಹೇಳುವುದು ಬಿಡು. ನಿನ್ನ ಸವಾಲು ಸ್ವೀಕಾರ ಮಾಡಿದ್ದೇನೆ ನೀನು ದಿನಾಂಕ ನಿಗದಿ ಮಾಡು ನಾನು ಶಿಕಾರಿಪುರಕ್ಕೆ ಬರುತ್ತೇನೆ. ವಿಜಯೇಂದ್ರ ಮನೆ ಮುಂದಿನಿAದ ಪ್ರವಾಸ ಶುರು ಮಾಡುತ್ತೇನೆ. ನನ್ನ ಬೆಂಬಲಿಗರು ಬರಲ್ಲಾ, ಗನ್ ಮ್ಯಾನ್ ಬರಲ್ಲ ನಾನು ಒಬ್ಬನೇ ಬರುತ್ತೇನೆ. ಅಲ್ಲಿಂದಲೇ ಪ್ರವಾಸ ಆರಂಭ ಮಾಡುತ್ತೇನೆ ತಡಿ ನೋಡೋಣ ಎಂದು ಸವಾಲ್ ಹಾಕಿದರು.
ವಿಜಯೇಂದ್ರ ಬೇಕಾದ್ರೇ ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡಲು ಬಿಡದ ಶಕ್ತಿ ನನಗಿದೆ. ನಾನು ನಿನ್ನಷ್ಟು ಕೀಳು ಮಟ್ಟದ ರಾಜಕಾರಣಿ ನಾನು ಅಲ್ಲಾ. ವಿಜಯೇಂದ್ರ ಬಗ್ಗೆ ನನಗೆ ಗೌರವ ಇಲ್ಲ, ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಗೌರವ ಇದೆ. ವಿಜಯೇಂದ್ರ ಬೆನ್ನು ಹತ್ತಿದ್ರೆ ಯಡಿಯೂರಪ್ಪ ನವರೇ ಹಾಳಾಗ್ತಿರಿ. ಅವರನ್ನ ಬದಲಿಸಿ ಹೊಸಬರಿಗೆ ಅವಕಾಶ ಕೊಡಿ. ಇನ್ನೇನು ಯಡಿಯೂರಪ್ಪ ಅವರೇ ನೀವು ಮುಖ್ಯಮಂತ್ರಿ ಆಗಲ್ಲ. ಪದೇ ಪದೇ ಸೈಕಲ್ ಮೇಲೆ ಓಡಾಡಿದೀನಿ ಅಂತಾ ಹೇಳಬೇಡಿ. ಅದರ ಎರಡು ಪಟ್ಟು ನೀವು ಲಾಭ ಪಡೆದುಕೊಂಡಿದಿರಿ* ಇದನ್ನ ನೀವು ಹೇಳಬೇಡಿ ಅವಮಾನ ಆಗುತ್ತೆ. ವಾಜಪೇಯಿ, ಮೋದಿಯವರು ಇನ್ನೂ ಒಂದು ಸೈಕಲ್ ತಗೊಂಡಿಲ್ಲ. ನೀವು ಎನೇನೂ ತಗೆದುಕೊಂಡಿದ್ದಿರಿ. ಪಕ್ಷಕ್ಕೆ ಬಂದು ಮೂರು ವರ್ಷ ಆಯ್ತು ವಿಜಯೇಂದ್ರ ಹೇಳ್ತಿರಾ ನಾನು ಬಂದಿದ್ದು ನಿಮ್ಮ ಅಪ್ಪನ ಸಿಎಂ ಮಾಡಲು. ಒಬ್ಬ ಬಹುಸಂಖ್ಯಾತ ನಾಯಕ ಬಸನಗೌಡ ಯತ್ನಾಳ್ ಇದ್ದಾರೆ ಅದಕ್ಕಾಗಿ ಅವರನ್ನ ಒಪ್ಪಿಕೊಂಡಿದ್ದೇವೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರಿದ್ದಾರೆ. ವಿಜಯೇಂದ್ರ ನೀನು ಸಣ್ಣ ಹುಡಗಾ, ನಿನಗೆ ಅಧ್ಯಕ್ಷ ಸ್ಥಾನ ನೀಗುವದಿಲ್ಲ. ಆದ್ರೇ ಹೈಕಮಾಂಡ್ ಮುಂದುವರೆಸಿದ್ದೆ ಆದರೆ ಪಕ್ಷದ ನಿರ್ಣಯ ನಾನು ಸ್ವಾಗತ ಮಾಡುತ್ತೇನೆ. ನೀನು ಅಧ್ಯಕ್ಷ ಸ್ಥಾನ ಬಿಟ್ಟು ಬೇರೆಯವರಿಗೆ ಅವಕಾಶ ಕೊಡು. ಸಣ್ಣ ಹುಡುಗ ಇದಿ ನೀನು ಎನೂ ಮಾತಾಡಬೇಕು ಗೊತ್ತಾಗಲ್ಲ. ಗೂಂಡಾಗಿರಿ ಮಾತು ಮಾತಾಡುವುದನ್ನ ಬಿಡು. ಪಕ್ಷ ಅಂತಾ ಬಂದಾಗ ಒಂದಾಗಿ ಭಿನ್ನಾಭಿಪ್ರಾಯ ಬದಿಗೊತ್ತಿ ಪಕ್ಷ ಸಂಘಟನೆ ಮಾಡುತ್ತೇವೆ. ೨೦೨೮ಕ್ಕೆ ಮತ್ತೆ ಪಕ್ಷವನ್ನ ಅಧಿಕಾರಕ್ಕೆ ತರುತ್ತೇವೆ. ಜಾತಿ ಆಧಾರದ ಮೇಲೆ ನಾನು ರಾಜಕಾರಣ ಮಾಡಿಲ್ಲ. ಕ್ಷೇತ್ರದ ಜನರ ಶಕ್ತಿಯೇ ನನ್ನ ಶಕ್ತಿ. ನಿಮ್ಮ ಆಶೀರ್ವಾಧ ನನ್ನಮೇಲಿರಲಿ ಎಂದು ಹೇಳಿದರು.
ವೇದಿಕೆಯ ಮೇಲೆ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ, ಎಮ್ ಎಲ್ ಮುತ್ತೇನ್ನವರ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷರುಗಳಾದ ರಾಜೇಂದ್ರ ಗೌಡಪ್ಪಗೋಳ, ಭೀಮಶಿ ಭರಮನ್ನವರ, ಮುಖಂಡರುಗಳಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ಭೀಮಗೌಡ ಪೋಲಿಸಗೌಡರ, ವಿನೋದ ಕರನಿಂಗ, ರಾಮಣ್ಣ ಹುಕ್ಕೇರಿ, ಸುರೇಶ ಕಾಡದವರ, ಸುಧೀರ ಜೋಡಟ್ಟಿ ಸೇರಿದಂತೆ ಅನೇಕರು ಇದ್ದರು.