Breaking News

ವಡೆರಹಟ್ಟಿ ವಿದ್ಯಾರ್ಥಿಗಳಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Spread the love

ವಡೆರಹಟ್ಟಿ ವಿದ್ಯಾರ್ಥಿಗಳಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ 

ಗೋಕಾಕ :ಸಮೀಪದ ವಡೇರಹಟ್ಟಿ ಗ್ರಾಮದ ಸರಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
 ಮೂಡಲಗಿಯ ಎಸ್ ಎಸ್ ಆರ್ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಜರುಗಿದ ತಾಲೂಕ ಮಟ್ಟದ ಕ್ರೀಡೆಗಳಲ್ಲಿ  ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಚಕ್ರ ಎಸೆತ ಜಯಶ್ರೀ ಮಂಗಿ ಪ್ರಥಮ, ಹ್ಯಾಮರ್ ಥ್ರೋ ದರ್ಶನ್ ಕಡಕೋಳ ಪ್ರಥಮ, ತ್ರಿವಿಧ ಜಿಗಿತ ಕಾವೇರಿ ಬಿ ಪಾಟೀಲ ಪ್ರಥಮ, ಹರ್ಡಲ್ಸ್ ಪ್ರೀತಿ ತಳವಾರ ಪ್ರಥಮ, ಸಂಜನಾ ಕ್ಯಾಸ್ತಿ, ಸಂಗೀತಾ ತಿರಕಣ್ಣವರ, ಉಮಾ ಚಿಕ್ಕೋಡಿ, ಸಂಗೀತಾ ಬಡಿಗೇರ ಈ ನಾಲ್ವರ ತಂಡ ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಓಟದಲ್ಲಿ ಕೀರ್ತಿ ತಳವಾರ ದ್ವಿತೀಯ, ಸಂಗೀತಾ ಬಡಿಗೇರ ದ್ವಿತೀಯ ಸ್ಥಾನ, ನಡಿಗೆಯಲ್ಲಿ ಸವಿತಾ ಡೂಗನವರ ದ್ವಿತೀಯ, ಹ್ಯಾಮರ್ ಥ್ರೋ ಜಯಶ್ರೀ ಮಂಗಿ ದ್ವಿತೀಯ, ಹರ್ಡಲ್ಸ್ ರೇಣುಕಾ ಕುರಬೇಟ ದ್ವಿತೀಯ ಹೀಗೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ದೈಹಿಕ ಶಿಕ್ಷಕರಾದ ವಿ. ಟಿ. ಹೊನಕುಪ್ಪಿ ಹಾಗೂ ಡಿ.ಎಸ್. ಮಾಳಗಿ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಮುಖ್ಯೋಪಾಧ್ಯಾಯ ಎಂ.ಎಂ. ಬಂಬಲವಾಡ ಹಾಗೂ ಶಾಲೆಯ ಸಿಬ್ಬಂದಿ ಹಾಗೂ ಗಣ್ಯಮಾನ್ಯರು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Spread the love

About Yuva Bharatha

Check Also

ಗೋಕಾಕನಲ್ಲಿ ಇಂಜನಿಯರಿ0ಗ್ ಕಾಲೇಜು ಪ್ರವೇಶಗಳು ಶೀಘ್ರದಲ್ಲಿ.!

Spread the loveಗೋಕಾಕನಲ್ಲಿ ಇಂಜನಿಯರಿ0ಗ್ ಕಾಲೇಜು ಪ್ರವೇಶಗಳು ಶೀಘ್ರದಲ್ಲಿ.! ಯುವ ಭಾರತ ಸುದ್ದಿ ಗೋಕಾಕ: ಗೋಕಾಕ ಭಾಗದ ಜನರ ಬಹುದಿನಗಳ …

Leave a Reply

Your email address will not be published. Required fields are marked *

one × four =