ಶ್ರೀ ಗುರು ಮಹಾದೇವ ಅಜ್ಜನವರ ಜಯಂತಿ ಉತ್ಸವವು!
ಗೋಕಾಕ: ಶ್ರೀ ಗುರು ಮಹಾದೇವ ಆಶ್ರಮ ಕಪರಟ್ಟಿ, ಕಳ್ಳಿಗುದ್ದಿ, ಗೋಕಾಕ ಇವರ ಆಶ್ರಯದಲ್ಲಿ ಪವಾಡ ಪುರುಷ ಶ್ರೀ ಗುರು ಮಹಾದೇವ ಅಜ್ಜನವರ ಜಯಂತಿ ಉತ್ಸವವು ದಿನಾಂಕ 30 ರಿಂದ ನಗರದ ನಗರದ ತಿಂಗಳಾಪುರ ಬಂಗ್ಲೆಯಲ್ಲಿ ಆರಂಭವಾಗಿದ್ದು ದಿನಾಂಕ ೩೧ರಂದು ಸಾಯಂಕಾಲ ೫ ಗಂಟೆಗೆ ಪ್ರಶಸ್ತಿ ಸಮಾರಂಭ ಜರುಗಲಿದೆ.

ಅರಕೇರಿ ಪೂಜ್ಯಶ್ರೀ ಅವಧೂತ ಸಿದ್ಧ ಮಹಾರಾಜರಿಗೆ “ಕಾಯಕಯೋಗಿ’’ ಪ್ರಶಸ್ತಿಯನ್ನು ಹಾಗೂ ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾರ್ತಿಕ ಪಾಟೀಲ ಮರಕುಂಬಿ ಇವರಿಗೆ “ಕನ್ನಡ ಜ್ಯೋತಿ’’ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸನ್ಮಾನಿಸಿದ ಗೌರವಿಸಲಾಗುವುದು. ನಾಳೆ ಜನವರಿ 1ರಂದು ಮುಂಜಾನೆ 9ಗಂಟೆಗೆ ಕಮತಗಿಯ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳಿಗೆ “ಕಾಯಕಯೋಗಿ’’ ಪ್ರಶಸ್ತಿಯನ್ನು ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಇವÀರಿಗೆ ಕನ್ನಡ ಜ್ಯೋತಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ಗೋಕಾಕದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬಾಹೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು, ಕ.ಶಿವಾಪುರದ ಜಡತಲೆ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕುಂದರಗಿಯ ಡಾ.ಅಮರಸಿದ್ದೇಶ್ವರ ಮಹಾಸ್ವಾಮಿಗಳು, ಸಚಿವರಾದ ಸತೀಶ ಜಾರಕಿಹೊಳಿ,ಶಾಸಕರಾದ ರಮೇಶ ಜಾರಕಿಹೊಳಿ, ಕಾರ್ಮಿಕ ಮುಖಂಡರಾದ ಅಂಬೀರಾವ್ ಪಾಟೀಲ, ಕೆಎಲ್‌ಇ ನಿರ್ದೇಶಕರಾದ ಜಯಾನಂದ ಮುನವಳ್ಳಿ ಸೇರಿದಂತೆ ಹಲವಾರು ಮಹಾತ್ಮರು ಹಾಗೂ ಗಣ್ಯ ಮಾನ್ಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿರುವ ಬ್ರಹ್ಮಶ್ರೀ ಬಸವರಾಜ ಸ್ವಾಮಿಗಳು ತಿಳಿಸಿದ್ದಾರೆ.
YuvaBharataha Latest Kannada News