ನಿಜಗುಣದೇವ ಮಹಾಸ್ವಾಮಿಗಳಿಗೆ ‘ಸಾಹಿತ್ಯಸಿರಿ’ ಪ್ರಶಸ್ತಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಘೋಷಣೆ!
ಗೋಕಾಕ: ಸಮನ್ವಯದ ಕೊಂಡೆಯಾದ ಹುಣಶ್ಯಾಳ ಪಿಜಿಯ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವ ಮಹಾಸ್ವಾಮಿಜಿಯವರಿಗೆ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಜಮಖಂಡಿಯಲ್ಲಿ ಜರಗುವ 2026ರ ರಂಭಾಪುರಿ ಪೀಠದ ದಸರಾ ದರ್ಬಾರ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಶ್ರೀ ರಂಭಾಪುರಿ ಡಾ: ವೀರಸೋಮೇಶ್ವರ ಜಗದ್ಗುರುಗಳು ಘೋಷಣೆ ಮಾಡಿದರು.

ಹುಣಶ್ಯಾಳ ಪಿಜಿಯಲ್ಲಿ ಜರುಗುತ್ತಿರುವ ೨೭ನೇ ಸತ್ಸಂಗ ಸಮ್ಮೇಳನದ ಸಾನಿಧ್ಯ ವಹಿಸಿ ಶ್ರೀ ರಂಭಾಪುರಿ ಜಗದ್ಗುರುಗಳು ಮಾತನಾಡಿದರು.
ಅವರು, ಹುಣಶ್ಯಾಳ ಪಿಜಿಯಲ್ಲಿ ಜರುಗುತ್ತಿರುವ 27ನೇ ಸತ್ಸಂಗ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದ ಜಗದ್ಗುರುಗಳು ಶ್ರೀ ನಿಜಗುಣ ದೇವ ಮಹಾಸ್ವಾಮಿಗಳು, ಶ್ರೀ ಜಗದ್ಗುರು ಪಂಚಾಚಾರ್ಯರ ಬಗ್ಗೆ ಅದ್ವೆತ ಪರಂಪರೆಯ ಮಠಗಳ ಬಗ್ಗೆ ಹಾಗೂ ವಿರಕ್ತ ಪರಂಪರೆಯ ಮಠಗಳ ಬಗ್ಗೆ ಅಷ್ಟೇ ಅಲ್ಲದೇ ಆದಿಚುಂಚನಗಿರಿ ಮಠದ ಬಗ್ಗೆ ಇನ್ನೂ ಅನೇಕ ಸಂಪ್ರದಾಯದ ಮಠಗಳ ಬಗ್ಗೆ ಅಪಾರವಾಗಿರುವ ಗೌರವವನ್ನು ಇಟ್ಟುಕೊಂಡಿದ್ದಾರೆ ಅಷ್ಟೇ ಅಲ್ಲದೇ ನೂರಾರು ಮಠಗಳ ಬಗ್ಗೆ ಅವರೇ ಸಾಹಿತ್ಯವನ್ನು ರಚಿಸಿ ಇವತ್ತು ಅವರ ಸಾಹಿತ್ಯದಿಂದ ಹೊರಬಂದ ಕವನಗಳು ಧ್ವನಿಸುರಳಿಗಳಾಗಿ ಹೊರಹೊಮ್ಮಿದ್ದನ್ನು ನೋಡಿದರೆ ಅತೀವ ಸಂತೋಷವಾಗುತ್ತದೆ. ಈಗ ಕೊಡಿಸುವ ಸ್ವಾಮಿಗಳು ಬೇಕಾಗಿದ್ದಾರೆ.ನಾನು ಬೇರೆ ನೀನು ಬೇರೆ ಎಂದು ಹೇಳುವುದಕಿಂತ ಎಲ್ಲರೂ ಒಂದು ಎನ್ನುವ ಸ್ವಾಮಿಗಳ ಅವಶ್ಯಕತೆ ಈಗ ಇದೆ. ಒಂದಾಗಿ ಚಂದಾಗಿ ಇರಲಿಕ್ಕೆ ಬಹುಶ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರ ಸ್ನೇಹ ಎನುಸುತ್ತಿದೆ ಎಂದು ಜಗದ್ಗುರುಗಳು ಸಂತೋಷದಿAದ ಹೇಳಿದರು. ಇದೇ ಸಂದರ್ಭದಲ್ಲಿ ಬೀದರಿನ ಗಣೇಶಾನಂದ ಮಹಾರಾಜರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸ್ವಾಮಿಜಿಯವರು ನಿಜಗುಣದೇವ ಮಹಾಸ್ವಾಮಿಗಳು ಬೆಲ್ಲದಂತೆ, ಇವರನ್ನು ಕಂಡರೆ ಎಲ್ಲರೂ ಹೃದಯವಂತ ಎಂದು ನಂಬಿ ಬರುತ್ತಾರೆ ಎಂದರು.ಗೌರವ ಡಾಕ್ಟರೇಟ ಪಡೆದ ಮಾಜಿ ಶಾಸಕ ಬಿ.ಸಿ.ಸರಿಕರ ಮತ್ತು ಹುಬ್ಬಳ್ಳಿಯ ಸಿದ್ಧಾರೂಡ ಮಠದ ಟ್ರಸ್ಟಿನ ಧರ್ಮದರ್ಶಿ ಶಾಮಾನಂದ ಪೂಜೇರಿಯವರಿಗೆ ಗೌರವ ಸನ್ಮಾನ ಜರುಗಿತು. ಶ್ರೀಮಠದ ನಿಜಗುಣದೇವ ಮಹಾಸ್ವಾಮಿಜಿಯವರು, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು ಸೇರಿದಂತೆ ಅನೇಕ ಗಣ್ಯ ಮಾನ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
YuvaBharataha Latest Kannada News