ಪರಿಸರ ನಾಶಕ್ಕೆ ಕಾರಣವಾಗುವ ಬ್ಯಾನರಗಳನ್ನು ನಾವು ತ್ಯಜಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕು-ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು!
ಗೋಕಾಕ: ಬ್ಯಾನರ್‌ಗಳ ಭರಾಟೆಯಿಂದ ಚಿತ್ರಕಲೆ ನಶಿಷಿಸುತ್ತಿದೆ. ಚಿತ್ರಕಲೆಯೊಂದಿಗೆ ಚಿತ್ರಕಲಾವಿದರು ಉಳಿಯವಂತಾಗಬೇಕು. ಆ ನಿಟ್ಟಿನಲ್ಲಿ ಸರಕಾರ ಚಿತ್ರಕಲಾ ಶಿಕ್ಷಕರನ್ನು ನೇಮಕಮಾಡಿಕೊಂಡು ಚಿತ್ರಕಲೆಯನ್ನು ಉಳಸಿ ಬೆಳೆಸುವಂತೆ ಅಂಕಲಗಿ-ಕುAದರಗಿ ಶ್ರೀ ಅಡವಿಸಿದ್ಧೇಶ್ವರ ಮಠದ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.

ಗೋಕಾಕ: ಕಾರ್ಯಕ್ರಮ ಉದ್ದೇಶಿಸಿ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಮಾತನಾಡುತ್ತಿರುವದು.
ಅವರು, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವಾಹಿನಿಯಿಂದ ಹಮ್ಮಿಕೊಂಡ ವನ್ಯಜೀವಿ ಹಾಗೂ ಅರಣ್ಯ ವಿಷಯದಡಿ ತಾಲೂಕು ಮಟ್ಟದ ಚಿತ್ರಕಲಾ ಸ್ಫರ್ಧೇಯ ಸಾನಿಧ್ಯ ವಹಿಸಿ ಮಾತನಾಡಿ, ಚಿತ್ರಕಲೆಯಿಂದ ಸ್ವಂತ ಉದ್ಯೋಗ ಕಟ್ಟಿಕೊಳ್ಳಬಹುದು. ಅನೇಕ ಚಿತ್ರಕಲಾವಿದರು ತಮ್ಮ ಕಲೆಯ ಮೂಲಕ ವಿಶ್ವದಾಧ್ಯಂತ ಹೆಸರುವಾಸಿಯಾಗಿದ್ದಾರೆ. ನಮ್ಮ ನಗರಗಳು, ಪಟ್ಟಣಗಳು ಸುಂದರವಾಗಿ ಕಾಣಲು ಗೊಡೆಗಳ ಮೇಲೆ ಚಿತ್ರಗಳನ್ನು ಬಿಡಿಸುವ ಕಾರ್ಯಗಳಾಗಬೇಕು. ಪರಿಸರ ನಾಶಕ್ಕೆ ಕಾರಣವಾಗುವ ಬ್ಯಾನರಗಳನ್ನು ನಾವು ತ್ಯಜಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕು. ಈ ಸ್ಫರ್ಧೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸ್ಥಾನಕ್ಕಾಗಿ ಆಸೆ ಪಡದೆ ತಮ್ಮ ಕಲೆಗೆ ಹೆಚ್ಚಿನ ಒತ್ತು ನೀಡಿ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ಶುಭ ಹಾರೈಸಿದರು.

ಗೋಕಾಕ: ಚಿತ್ರಕಲಾ ಸ್ಫರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಚಿತ್ರಕಲೆ ಗಮನಿಸುತ್ತಿರುವ ಯುವ ನಾಯಕ ಸರ್ವೋತ್ತಮ ಭೀ ಜಾರಕಿಹೊಳಿ ಹಾಗೂ ಗಣ್ಯರು.
ಹಿರಿಯ ರಾಜಕೀಯ ಧುರೀಣ ಅಶೋಕ ಪೂಜಾರಿ ಮಾತನಾಡಿ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವಾಹಿನಿ ಚಿತ್ರಕಲೆಯನ್ನು ಮುಂದಿನ ಪೀಳಿಗೆ ಮರೆಯದಂತೆ ಪೋಷಿಸುವ ಕಾರ್ಯ ಶ್ಲಾಘನೀಯ. ಕಲೆಗಳಲ್ಲಿ ಅನೇಕ ವಿಧಗಳಿವೆ ಆದರೆ ನಾವು ಕಣ್ಣಿನಿಂದ ಕಾಣುವ ಮೂಲಕ ಅದನ್ನು ಚಿತ್ರ ಬಿಡಿಸುವದೆ ಚಿತ್ರಕಲೆ. ಇಂತಹ ಚಿತ್ರಕಲೆಯನ್ನು ಮಕ್ಕಳಿಂದ ಬಿಡಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಅವರನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದು ಮಕ್ಕಳು ಇದನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಚಿತ್ರ ಕಲಾವಿದರಾಗುಂವೆ ತಿಳಿಸಿದರು.

ಗೋಕಾಕ: ವಿಜೇತ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ನಡೆಯುವ ಚಿತ್ರಕಲಾ ಸ್ಫರ್ಧೆಯಲ್ಲಿ ಭಾಗವಹಿಸಲು ಪ್ರಶಸ್ತಿ ನೀಡಿ ಶುಭಹಾರೈಸುತ್ತಿರುವದು.
ಗೋಕಾಕ ವಲಯ ಅರಣ್ಯಾಧಿಕಾರಿ ಆನಂದ ಹೆಗಡೆ ಮಾತನಾಡಿ, ಪರಿಸರದಿಂದ ಮಾತ್ರ ಮಾನವನ ಉಳಿವು ಸಾಧ್ಯ. ಪರಿಸರ ಆಮ್ಲಜನಕ, ನೀರು, ಆಹಾರ ಮತ್ತು ಆಶ್ರಯದಂತಹ ಮೂಲಭೂತ ಅಗತ್ಯಗಳನ್ನು ಒದಗಿಸುತ್ತದೆ. ಪರಿಸರದ ನಾಶ (ಅರಣ್ಯನಾಶ, ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ) ನಮ್ಮ ಅಸ್ತಿತ್ವಕ್ಕೆ ನೇರ ಬೆದರಿಕೆಯಾಗಿದೆ. ಹೀಗಾಗಿ ಪ್ರಕೃತಿಯ ಸಮತೋಲನವನ್ನು ಕಾಪಾಡುವುದು ಮಾನವನ ಬದುಕುಳಿಯುವಿಕೆಗೆ ಅತ್ಯಗತ್ಯ. ಅದರಂತೆ ನಾವು ದಿನನಿತ್ಯ ಬಳಸುವ ಪ್ಲಾಸ್ಟೀಕನಿಂದ ಪ್ರಾಣಿಗಳಿಗಷ್ಟೇಯಲ್ಲ ಮಾನವನ ಬದುಕಿಗು ಮಾರಕ. ಬಹುತೇಕ ವನ್ಯಜೀವಿಗಳು ಅಳಿವಿನ ಅಂಚಿನಲ್ಲಿದ್ದು, ನಾವು ಈಗಿನಿಂದಲೇ ಅಳಿದುಳಿದ ವನ್ಯಜೀವಿಗಳನ್ನು ಸಂರಕ್ಷಣೆಗೆ ಪೂರಕ ವಾತಾವರಣ ನಿರ್ಮಿಸಬೇಕಾದ ಅಗತ್ಯವಿದೆ ವನ್ಯಜೀವಿ ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.ಚಿತ್ರಕಲೆ ಸುಮಾರು 5ಸಾವಿರಕ್ಕೂ ಹೆಚ್ಚಿನ ವರ್ಷಗಳ ಹಿಂದೆ ಬಂದ ಕಲೆ ಈಗಲೂ ಕಲ್ಲಿನ ಕೆತ್ತನೆಯಲ್ಲಿ ನಾವು ಈಗಲೂ ಸಹ ಅವುಗಳನ್ನು ನೋಡಬಹುದು. ಚಿತ್ರಕಲೆಯಿಂದ ಮಾತ್ರ ಶಿಲ್ಪಿಗಳು ಕೆತ್ತೆನೆ ಮಾಡಲು ಸಾಧ್ಯ. ಅಂತಹ ಚಿತ್ರಕಲೆಯನ್ನು ಪ್ರೋತ್ಸಾಹಿಸುತ್ತಿರುವ ಕನ್ನಡಪ್ರಭ ಪತ್ರಿಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗೋಕಾಕ: ಕಾರ್ಯಕ್ರಮ ಉದ್ಘಾಟಿಸುತ್ತಿರುವದು.
ವೇದಿಕೆಯ ಮೇಲೆ ಯುವ ನಾಯಕ ಸರ್ವೋತ್ತಮ ಭೀ ಜಾರಕಿಹೊಳಿ, ಶ್ರೀ ಸಿದ್ಧಾರೂಢ ದರ್ಶನ ಪೀಠ ಹುಬ್ಬಳ್ಳಿಯ ಧರ್ಮದರ್ಶಿ ಶಾಮಾನಂದ ಪೂಜೇರಿ, ಕರ್ನಾಟಕ ಕರ‍್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗುರು ಪೂಜೇರಿ, ಗೋಕಾಕ ಡೇವಲಪರ್ಸನ ಜಾವೇದ ಗೋಕಾಕ. ಪಿಎಮ್‌ಶ್ರೀ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಮ್ ಬಿ ಬಳಗಾರ, ಶಿಕ್ಷಣ ಸಂಯೋಜಕ ಎಸ್ ಬಿ ಕಲ್ಲಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಲ್ ಕೆ ತೋರಣಗಟ್ಟಿ, ಕನ್ನಡಪ್ರಭ ವರದಿಗಾರ ಭೀಮಶಿ ಭರಮಣ್ಣವರ ಇದ್ದರು.ಬಿ ಎಸ್ ಜೋಲಾಪೂರೆ ಕಾರ್ಯಕ್ರಮ ಸ್ವಾಗತಿಸಿ, ವಂದಿಸಿದರು.
ಕಣ್ಮನ ಸೆಳೆದ ಚಿತ್ರಕಲೆ: ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವಾಹಿನಿಯಿಂದ ಹಮ್ಮಿಕೊಂಡ ವನ್ಯಜೀವಿ ಹಾಗೂ ಅರಣ್ಯ ವಿಷಯದಡಿ ತಾಲೂಕು ಮಟ್ಟದ ಚಿತ್ರಕಲಾ ಸ್ಫರ್ಧೇಯಲ್ಲಿ ತಾಲೂಕಿನ ವಿವಿಧ ಶಾಲೆಗಳ ಸುಮಾರು ೭೦ಕ್ಕೂ ಹೆಚ್ಚು ವಿಷ್ಯಾರ್ಥಿಗಳು ಪಾಲ್ಗೊಂಡು ಪರಿಸರ, ವನ್ಯಜೀವಿಗಳ ರಕ್ಷಣೆ ಮತ್ತು ಸಮೃದ್ಧ ಅರಣ್ಯ ಚಿತ್ರಕಲೆಗಳು ಕಾರ್ಯಕ್ರಮದಲ್ಲಿ ಗಮನ ಸೆಳೆದರು.
ಫಲಿತಾಂಶ: 8ನೇ ತರಗತಿ ಎನ್‌ಎಸ್‌ಎಫ್ ಶಾಲೆಯ ಕುಮಾರಿ ಮೇಘಾ ಮುತ್ತೇಪ್ಪಾ ಧರ್ಮಟ್ಟಿ ಪ್ರಥಮ. ಎನ್‌ಎಸ್‌ಎಫ್ ಶಾಲೆಯ ಕುಮಾರಿ ಸರಿತಾ ಗಜಾನನ ಹರಮಕರ ದ್ವಿತೀಯ. ಎಲ್‌ಇಟಿ ಶಾಲೆಯ ಕುಮಾರಿ ಪಲ್ಲವಿ ಬಸವರಾಜ ಪೂಜೇರಿ ತೃತೀಯ ಸ್ಥಾನ ಪಡೆದರು. 9ನೇ ತರಗತಿಯ ಶಪರ್ಡ ಮಿಷನ್ ಶಾಲೆಯ ಸ್ಫೂರ್ತಿ ಸಂತೋಷ ಬೆನವಾಡ ಪ್ರಥಮ. ಮೇಲ್ಮಟ್ಟಿಯ ಎಸ್‌ಎಸ್‌ಎಮ್‌ಎಮ್ ಶಾಲೆಯ ರಾಕೇಶ ಭೀಮಪ್ಪಾ ಕಾಳಗಿ ದ್ವಿತೀಯ. ಎಲ್‌ಇಟಿ ಶಾಲೆಯ ಅಂಕಿತಾ ಹರೀಶ ಕದಮ ತೃತೀಯ ಸ್ಥಾನ ಪಡೆದರು. 10ನೇ ತರಗತಿಯ ನವ ಜೀವನ ಆಂಗ್ಲ ಮಾಧ್ಯಮ ಶಾಲೆಯ ಸುಪ್ರೀತ ಪ್ರಶಾಂತ ಪಿಂಪಲೆ ಪ್ರಥಮ. ಲಿಟಲ್ ಫ್ಲಾವರ್ ಶಾಲೆಯ ಪ್ರಿಯಾಂಕ ಸಚೀನ ಮಾವರಕರ ದ್ವಿತೀಯ. ಖನಗಾಂವದ ಸರಕಾರಿ ಆದರ್ಶ ವಿದ್ಯಾಲಯದ ಲತಾ ಸತ್ತೆಪ್ಪಾ ಕುರಬೇಟ ತೃತೀಯ ಸ್ಥಾನ ಪಡೆದರು. ಬಹುಮಾನ ವಿತರಣೆಯನ್ನು ಯುವ ನಾಯಕ ಸರ್ವೋತ್ತಮ ಭೀ ಜಾರಕಿಹೊಳಿ ನೆರವೇರಿಸಿದರು. ನಿರ್ಣಾಯಕರಾಗಿ ಚಿತ್ರಕಲಾ ಶಿಕ್ಷಕರಾದ ಎಸ್ ಆರ್ ಗಾಯಕವಾಡ, ಎಮ್ ಎಸ್ ಹೆಬ್ಬಾಳ, ಎಸ್ ಬಿ ಕಲ್ಲಟ್ಟಿ ಕಾರ್ಯನಿರ್ವಹಿಸಿದರು.
YuvaBharataha Latest Kannada News