22ನೇ ಸತೀಶ ಶುಗರ್ಸ ಆವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮ ಜನೇವರಿ 16ರಂದು!
ಗೋಕಾಕ: ಜನೇವರಿ 16, 17 ಹಾಗೂ 18 ರಂದು 22ನೇ ಸತೀಶ ಶುಗರ್ಸ ಆವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 19ರಂದು ಸತೀಶ ಶುರ‍್ಸ ಕ್ಲಾಸಿಕ್ ದೇಹ ದಾರ್ಢ್ಯ ಸ್ಫರ್ಧೆ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಪ್ರತಿದಿನ ಸಾಯಂಕಾಲ 5ರಿಂದ 10 ಗÀಂಟೆಯವರೆಗೆ ಜರುಗಲಿವೆ ಎಂದು ಸತೀಶ್ ಶುರ್ಗಸ್ಸ್ ಆವಾರ್ಡ್ಸ ಸಂಘಟಕರಾದ ರಿಯಾಜ ಚೌಗಲಾ ಹೇಳಿದರು.

ಗೋಕಾಕ: ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು.
ಬುಧವಾರದಂದು ಸಂಜೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ, ೨೨ನೇ ಸತೀಶ ಶುಗರ್ಸ್ಸ ಆವಾರ್ಡ್ಸ ಕಾರ್ಯಕ್ರಮವನ್ನು ಕಳೆದ ವರ್ಷ ಭಾಷಣ ಸ್ವರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮೂರು ದಿನ ನಡೆಯುವ ಸತೀಶ್ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ೧೨೦೦ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ.
ಶುಕ್ರವಾರ ದಿ.16 ರಂದು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಜಾನಪದ ಗಾಯನ ಸ್ವರ್ಧೆ, ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಗಾಯನ ಸ್ವರ್ಧೆ, ಪ್ರಾಥಮಿಕಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ ಸ್ವರ್ಧೆ ಹಾಗೂ ಕಾಲೇಜು ವಿಭಾಗಕ್ಕೆ ಸಮೂಹ ನೃತ್ಯ ಸ್ವರ್ಧೆ ಜರುಗಲಿದ್ದು, ಇದೇ ದಿನ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದ ಭಾಷಣ ಸ್ವರ್ಧಾ ವಿಜೇತರಿಗೆ ಹಾಗೂ ಸಾಂಸ್ಕೃತಿಕ ಸ್ಫರ್ಧಾ ವಿಜೇತರಿಗೆ ಮತ್ತು ಸದರಿ ದಿನದಂದು ನಡೆದ ಸ್ವರ್ಧೆಯಲ್ಲಿ ಭಾಗವಹಿಸಿ ವಿಜೇರಾದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹುಮಾನ ವಿತರಣೆ ನಡೆಯಲಿದೆ.
ಶನಿವಾರ ದಿ.17 ರಂದು ಕಾಲೇಜು ವಿಭಾಗದ ಜಾನಪದ ಗಾಯನ, ಕಾಲೇಜು ವಿಭಾಗದ ಗಾಯನ ಸ್ಫರ್ಧೆ, ಮುಕ್ತ ವಿಭಾಗದ ಏಕಾಂಗಿ ನೃತ್ಯ, ಪ್ರಾಥಮಿಕ ಶಾಲಾ ವಿಭಾಗದ ಜನಪದ ನೃತ್ಯ. ಪ್ರೌಢಶಾಲಾ ವಿಭಾಗದ ಸಮೂಹ ನೃತ್ಯ, ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಪ್ರತಿಭಾವಂತರಿಗೆ ಸನ್ಮಾನ ಹಾಗೂ ಸದರಿ ದಿನ ನಡೆದ ಸ್ವರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ರವಿವಾರ ದಿ.18 ಕೊನೆಯ ದಿನ ಮುಕ್ತ ವಿಭಾಗದ ಜಾನಪದ ಗಾಯನ ಹಾಗೂ ಗಾಯನ ಸ್ಫರ್ಧೆ, ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ಗಾಯನ ಸ್ವರ್ಧೆ, ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ವರ್ಧೆ, ಮುಕ್ತ ವಿಭಾಗದ ಸಮೂಹ ನೃತ್ಯ ಸ್ಫರ್ಧೆ ನಡೆಯಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸದರಿ ದಿನ ವಿಜೇತ ವಿದ್ಯಾರ್ಥಿಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಗಣ್ಯರು ಬಹುಮಾನ ವಿತರಿಸಿ ೨೨ನೇ ಸತೀಶ್ ಶುಗರ್ಸ್ಸ ಆವಾರ್ಡ್ಸ ಭವ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡುವರು. ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಮತ್ತು ಪಿಯೂಸಿ ವಿದ್ಯಾರ್ಥಿಗಳಿಗೆ ತಲಾ ೧೫ಸಾವಿರ ಬಹುಮಾನ ನೀಡಿ ಗೌರವಿಸಲಾಗುವದು.
ಈ ಸ್ಫರ್ಧೆಗಳಲ್ಲಿ ಭಾಷಣ, ಗಾಯನ, ಜನಪದ ಗಾಯನ, ಸ್ಫರ್ಧೆಗಳಲ್ಲಿ ಪ್ರಥಮ ೧೫ಸಾವಿರ, ದ್ವಿತೀಯ ೧೦ಸಾವಿರ, ತೃತೀಯ ೭ಸಾವಿರ ರೂಗಳು ಹಾಗೂ ಸಮೂಹ ನೃತ್ಯ ಮತ್ತು ಜನಪದ ನೃತ್ಯ ಸ್ಫರ್ಧೆಯಲ್ಲಿ ಪ್ರಥಮ 5೦ಸಾವಿರ, ದ್ವಿತೀಯ ೩೦ಸಾವಿರ, ತೃತೀಯ ೨೦ಸಾವಿರ ಹಾಗೂ ಸೊಲೊ ಡ್ಯಾನ್ಸನಲ್ಲಿ ಪ್ರಥಮ ೨೫ಸಾವಿರ, ದ್ವಿತೀಯ ೨೦ಸಾವಿರ, ತೃತೀಯ 15ಸಾವಿರ ರೂಗಳು ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗು ಟ್ರೋಫಿ ನೀಡಿ ಗೌರವಿಸಲಾಗುವದು.
ಸೋಮವಾರ ದಿ.೧೯ರಂದು ಮುಂಜಾನೆ ೧೧ಗಂಟೆಗೆ ತಾಲೂಕು ಮಟ್ಟ, ಸಂಜೆ ೪ಗಂಟೆಗೆ ಜಿಲ್ಲೆ ಮತ್ತು ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಫರ್ಧೆ ಜರುಗಲಿವೆ. ತಾಲೂಕು ಮಟ್ಟದ ಚಾಂಪಯನ್ ಆಫ್ ಚಾಂಪಿಯನ್ ೫೦ಸಾವಿರ, ಜಿಲ್ಲಾ ಮಟ್ಟದ ಟೈಟಲ್ ವಿನ್ನರ್ ೧.೫೦ಸಾವಿರ, ರಾಜ್ಯ ಮಟ್ಟದ ಟೈಟಲ್ ವಿನ್ನರ್ ೨ಲಕ್ಷ ರೂಗಳ ಬಹುಮಾನದೊಂದಿಗೆ ಟ್ರೋಫಿ ನೀಡಲಾಗುವದು. ಸತೀಶ ಶುರ‍್ಸ ಅವಾರ್ಡ ಒಟ್ಟು ಬಹುಮಾನ ಮೊತ್ತ ೨೮ಲಕ್ಷ, ಸತೀಶ ಶುರ‍್ಸ ಕ್ಲಾಸಿಕ್ ದೇಹ ದಾರ್ಢ್ಯ ಸ್ಫರ್ಧೆ ೧೯ಲಕ್ಷ ರೂಗಳ ಒಟ್ಟು ಮೊತ್ತದ ಬಹುಮಾನಗಳನ್ನು ನೀಡಲಾಗುವದು.
ಸಾರ್ವಜನಿಕರಿಗೆ ಕುಳಿತು ಕೊಳ್ಳಲು ೧೨ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಪ್ರತಿದಿನ ಸಾಯಂಕಾಲ ೫ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಎಸ್‌ಎಸ್‌ಎ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಕಾಶ ಲಕ್ಷಟ್ಟಿ, ಸುರೇಶ್ ಜೋರಾಪೂರ, ಕಾಟೇಶ ಗೋಕಾವಿ, ರಮೇಶ ಕಳ್ಳಿಮನಿ, ಐ ಎಸ್ ನಗಾರಿ ಉಪಸ್ಥಿತರಿದ್ದರು.
YuvaBharataha Latest Kannada News