Breaking News

ಅನಧೀಕೃತ ಫೋಕಸ್ ಟಿವಿ ವಿರುದ್ಧ 20ಕೋಟಿ ರೂಗಳ ಮಾನನಷ್ಟ ಮೊಕದ್ದಮೆ- ಧಾರವಾಡ ಹೈಕೋರ್ಟನ ನ್ಯಾಯವಾದಿ ರಂಜಿತಾ ರೆಡ್ಡಿ!

Spread the love

ಅನಧೀಕೃತ ಫೋಕಸ್ ಟಿವಿ ವಿರುದ್ಧ 20ಕೋಟಿ ರೂಗಳ ಮಾನನಷ್ಟ ಮೊಕದ್ದಮೆ- ಧಾರವಾಡ ಹೈಕೋರ್ಟನ ನ್ಯಾಯವಾದಿ ರಂಜಿತಾ ರೆಡ್ಡಿ!

 

ಗೋಕಾಕ: ಅನಧೀಕೃತ ಫೋಕಸ್ ಟಿವಿ ಎಂಬ ಮಾಧ್ಯಮದಿಂದ ಶಾಸಕ ರಮೇಶ ಜಾರಕಿಹೊಳಿ ಅವರ ಆರೋಗ್ಯದ ಬಗ್ಗೆ ಅಪಪ್ರಚಾರ ಮಾಡಿದ್ದು ಅವರ ಮೇಲೆ ೨೦ಕೋಟಿ ರೂಗಳ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ ಎಂದು ಸಾಹುಕಾರ ಅಭಿಮಾನಿಗಳ ಒಕ್ಕೂಟದ ಕಾನೂನು ಸಲಹೆಗಾರರು ಹಾಗೂ ಧಾರವಾಡ ಹೈಕೋರ್ಟನ ನ್ಯಾಯವಾದಿ ರಂಜಿತಾ ರೆಡ್ಡಿ ತಿಳಿಸಿದರು.

ಗೋಕಾಕ: ಸಾಹುಕಾರ ಅಭಿಮಾನಿಗಳ ಒಕ್ಕೂಟದ ಕಾನೂನು ಸಲಹೆಗಾರರು ಹಾಗೂ ಧಾರವಾಡ ಹೈಕೋರ್ಟನ ನ್ಯಾಯವಾದಿ ರಂಜಿತಾ ರೆಡ್ಡಿ ಮಾತನಾಡುತ್ತಿರುವದು.

ಅವರು, ನಗರದ ಪ್ರವಾಸಿ ಮಂದಿರದಲ್ಲಿ ಸಾಹುಕಾರ ಅಭಿಮಾನಿಗಳ ಒಕ್ಕೂಟದಿಂದ ಕರೆದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿ, ರಾಜಕೀಯದಲ್ಲಿ ಮಾಧ್ಯಮಗಳ ಮುಂದೆ ಕೆಸರೆರಚಾಟ ಮಾಡುವದು ಸಾಮಾನ್ಯ ಆದರೆ ಅವರ ವಯಕ್ತಿಕವಾಗಿ ತೆಜೋವಧೆ ಮಾಡುತ್ತಿರುವದು ತಪ್ಪು. ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಂತೆ ವಿಡಿಯೋ ಬಿತ್ತರಿಸುವದು. ಹಳೆಯ ವಿಡಿಯೋ ಬಳಸಿ ಸಚಿವ ಸತೀಶ ಜಾರಕಿಹೊಳಿ ಬಗ್ಗೆ ಶಾಸಕ ರಮೇಶ ಜಾರಕಿಹೊಳ ಅವರು ಅಧಿಕೃತವಾಗಿ ಮಾಧ್ಯಮಗಳ ಮುಂದೆ ನೀಡಲಾದ ಹೇಳಿಕೆಗಳನ್ನು ರಾಜಕೀಯಕ್ಕಾಗಿ ಎಡಿಟ್ ಮಾಡಿ ಬಳಸಿ ಜಾರಕಿಹೊಳಿ ಸಹೋದರರ ತೆಜೋವಧೆ ಮಾಡಲಾಗುತ್ತಿದೆ. ಇದರ ಹಿಂದೆ ಇರುವವರು ಮತ್ತು ಇದನ್ನು ಮಾಧ್ಯಮಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಳಸಿಕೊಳ್ಳುತ್ತಿರುವವರ ವಿರುದ್ಧ ದೂರು ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ರಮೇಶ ಜಾರಕಿಹೊಳಿ ಅವರು ಅಂತರಾಷ್ಟಿçÃಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಫೋಕಸ್ ಟಿವಿ ಎಂಬ ಅನಧಿಕೃತ ಮಾಧ್ಯಮದಲ್ಲಿ ಹೆಮಂತಕುಮಾರ ಕಂಬಾರ ಎಂಬುವರು ಶಾಸಕರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸಿದ್ದಾರೆ. ಅಲ್ಲದೇ ಈ ಹಿಂದೆ ೨೦೧೯ರಲ್ಲಿ ರಾಜಕಾರಿಣಿಯೋರ್ವರಿಗೆ ಆಡಿಯೋ ಕಾಲ್ ರೇಕಾರ್ಡಿಂಗ್ ಬ್ಯಾಕ್ ಮೇಲ್ ಮಾಡಿ ತಮ್ಮ ನ್ಯೂಜ್ ಚಾನೇಲ್ ಪರವಾಣಿಗೆ ರದ್ದುಗೊಳಿಸಿಕೊಂಡಿದ್ದು ಇದೆ. ಜೈಲಿಗೂ ಹೋಗಿ ಬಂದಿದ್ದಾರೆ. ಅವರು ತಮ್ಮ ವಿಡಿಯೋದಲ್ಲಿ ತಿಳಿಸಿದ ವಿಳಾಸಲ್ಲಿ ಅವರ ಕಚೇರಿ ಇಲ್ಲ. ಇದನ್ನು ಮಾನ್ಯತೆ ಪಡೆದ ಮಾಧ್ಯಮಗಳ ಸಹಕಾರ ಹಾಗೂ ಜಾರಕಿಹೊಳಿ ಸಹೋದರರ ಅಭಿಮಾನಿಗಳ ಬಳಗದಿಂದ ಅವರ ವಿಳಾಸ ಪತ್ತೆ ಹಚ್ಚಿದ್ದು ೨೦ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳು ಮನರಂಜನೆಗಾಗಿ ಮತ್ತು ಸ್ಥಳೀಯ ಮಾಹಿತಿಗಳಿಗಾಗಿ ಬಳಸಬೇಕೆ ಹೊರತು ಇನ್ನೊಬ್ಬರ ತೆಜೋವಧೆ ಮಾಡುವದಾಗಬಾರದು. ಕಳೆದ ಕೆಲವು ತಿಂಗಳಿನಿAದ ಜಾರಕಿಹೊಳಿ ಸಹೋದರರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ವಿಡಿಯೋ ಹಾಕಲಾಗುತ್ತಿದೆ ಅಂತವರ ವಿರುದ್ಧ ದೂರು ದಾಖಲಿಸಲು ಮುಂದಾಗಿರುವದಾಗಿ ತಿಳಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಕಿರಣ ಡಮಾಮಗರ ಮಾತನಾಡಿ, ಸಾಹುಕಾರ ಅಭಿಮಾನಿಗಳ ಒಕ್ಕೂಟ ಯಾವುದೇ ರಾಜಕೀಯ ಪಕ್ಷದ ಸಂಘಟನೆಯಲ್ಲ. ಜಾರಕಿಹೊಳಿ ಸಹೋದರರ ಅಭಿಮಾನದಿಂದ ಈ ಸಂಘಟನೆ ಕಟ್ಟಲಾಗಿದೆ. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ನಂತರ ಇಂತಹ ಅಪಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ. ಕಳೆದ ಕೆಲ ದಿನಗಳ ಹಿಂದೆ ರಮೇಶ ಕತ್ತಿಯವರು ಅಶ್ಲೀಲ ಪದ ಬಳಕೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರ ತೆಜೋವಧೆ ಮಾಡಲು ಪ್ರಯತ್ನಿಸುತ್ತಿದ್ದು ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆ ಮಾಡಲಾಗಿದೆ. ಸಾಮಾಜಿಕ ಮಾಧ್ಯಮವನ್ನು ಮಹಿಳೆಯರು ಬಳಕೆ ಮಾಡುತ್ತಾರೆ ಎಂಬುದು ಅರಿವಿಲ್ಲದೆ ಹೇಳಿಕೆ ನೀಡಿದ ರಮೇಶ ಕತ್ತಿಯವರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸಿದವರ ವಿರುದ್ಧವು ಕಾನೂನು ಹೋರಾಟ ಮಾಡಲಾಗುವದು. ಪತ್ರಿಕಾಗೊಷ್ಠಿಯಲ್ಲಿ ಸಾಹುಕಾರ ಅಭಿಮಾನಿಗಳ ಒಕ್ಕೂಟದ ಉಪಾಧ್ಯಕ್ಷ ಸೋಹೇಲ ಜಮಾದಾರ, ನಗರಸಭೆ ಸದಸ್ಯರಾದ ಪ್ರಕಾಶ ಮುರಾರಿ, ಕುತ್ಬುದ್ದಿನ ಗೋಕಾಕ, ಅಬ್ಬಾಸ ದೇಸಾಯಿ, ಹುಬ್ಬಳ್ಳಿಯ ಸಿದ್ಧಾರೂಢ ಮಠದ ಧರ್ಮದರ್ಶಿ ಶಾಮಾನಂದ ಪೂಜಾರಿ, ಜಮಾದಾರ ಸೇರಿದಂತೆ ಜನಪ್ರತಿನಿಧಿಗಳು, ಜಾರಕಿಹೊಳಿ ಸಹೋದರರ ಅಭಿಮಾನಿಗಳು ಇದ್ದರು.


Spread the love

About Yuva Bharatha

Check Also

ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಯಾದರೆ ಮಾತ್ರ ಗುರುವಿಗೆ ಸಂತಸ-ಜಿ.ಎನ್.ಸಾoಗಲಿ

Spread the loveವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಯಾದರೆ ಮಾತ್ರ ಗುರುವಿಗೆ ಸಂತಸ-ಜಿ.ಎನ್.ಸಾoಗಲಿ ಗೋಕಾಕ: ಜ್ಞಾನ ಗುರು ನೀಡಿದರೆ, ಸಂಸ್ಕಾರ ಹೆತ್ತವರು …

Leave a Reply

Your email address will not be published. Required fields are marked *

5 × four =